ರಾಜ್ಯದಲ್ಲಿ ಕೊವಿಡ್ ಹಾಗೂ ಓಮಿಕ್ರಾನ್ ತೀವೃತರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ಪರಿಣಿತರೊಂದಿಗೆ ಚರ್ಚಿಸಿ ರಾಜ್ಯಾದ್ಯಂತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನ ತಮ್ಮ ಆರ್‍ಟಿ ನಗರದ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಸರಕಾರ ಕೊವಿಡ್ ಹಾಗೂ ಒಮಿಕ್ರಾನ್ ಎರಡನ್ನೂ ಗಮನಿಸುತ್ತಿದೆ. ದೇಶ ರಾಜ್ಯ ಹಾಗೂ ಅಕ್ಕಪಕ್ಕದ ರಾಜ್ಯಗಳಲ್ಲಿ ತೀವೃತರದಿಂದ ಹರಡುತ್ತಿದೆ. ಈ ನಿಟ್ಟಿನಲ್ಲಿ ನಾಳೆ ಸಾಯಂಕಾಲ ಪರಿಣಿತರೊಂದಿಗೆ ಚರ್ಚೆ ಮಾಡಿ ಗುರುವಾರ ಕ್ಯಾಬಿನೆಟ್‍ನಲ್ಲಿ ರಾಜ್ಯದ ಸ್ಥತಿಗತಿಗಳ ಬಗ್ಗೆ ಚಚೆ ಮಾಡಿ ರಾಜ್ಯಾದ್ಯಂತ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಕುರಿತಂತೆ ಚರ್ಚೆ ನಡೆಸುತ್ತೇವೆ. ಈ ಹಿಂದೆ ಎರಡೂ ಕೊವಿಡ್ ಅಲೆಗಳನ್ನು ಎದುರಿಸಿದ ಹಿನ್ನೆಲೆ ಪರಿಣಿತರ ತಂಡಕ್ಕೆ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಕ್ರಮಗಳನ್ನು ಸೂಚಿಸುವಂತೆ ಹೇಳಿದ್ದೇನೆ ಎಂದರು.
ಇನ್ನು ರಾಜ್ಯಾದ್ಯಂತ ಇಂದಿನಿಂದ 15ರಿಂದ 18ರ ವರೆಗಿನ ಮಕ್ಕಳಿಗೆ ವ್ಯಕ್ಸಿನ್ ನೀಡುವ ಕುರಿತಂತೆ ಮಾತನಾಡಿದ ಅವರು, ರಾಜ್ಯಾದ್ಯಂತ ಎಲ್ಲಾ ಶಾಲಾ ಕಾಲೇಜುಗಳಲ್ಲಿ 15ರಿಂದ 18 ವರ್ಷದ ಮಕ್ಕಳಿಗಾಗಿ ವ್ಯಾಕ್ಸಿನೇಶನ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಇನ್ನು ರಾಜ್ಯದ ಯುವ ಶಕ್ತಿಯನ್ನು ಕೊವಿಡ್ ರಕ್ಷಣಾ ಚಕ್ರದಲ್ಲಿ ತರಬೇಕಾಗಿದೆ. ಹಾಗಾಗಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರು, ಹಾಗೂ ಆರೋಗ್ಯ ಕಾರ್ಯಕರ್ತರು ಸಹಕರಿಸಬೇಕು. ಸಾರ್ವಜನಿಕರು ಸ್ವಯಂ ನಿಯಂತ್ರಣ ಹಾಕಿಕೊಳ್ಳುವ ಮೂಲಕ ಕೊವಿಡ್ ನಿತಂತ್ರಣಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದರು.
ಇನ್ನು ಕಾಂಗ್ರೆಸ್ ಪಾದಯಾತ್ರೆ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನೋಡೋಣ, ನಾನೂ ಅದನ್ನು ಗಮನಿಸುತ್ತಿದೇನೆ. ನಾಳೆ ನಡೆಯಲಿರುವ ಚರ್ಚೆಯಲ್ಲಿ ಸಾರ್ವತ್ರಿಕ ನಡಾವಳಿಗಳ ಕುರಿತು ಚರ್ಚೆ ಮಾಡುತ್ತೇವೆ. ಈ ನಿಯಮಗಳು ಎಲ್ಲರಿಗೂ ಅನ್ವಯವಾಗುತ್ತವೆ. ಹಾಗಾಗಿ ಕುರಿತಂತೆ ಪರಿಣಿತರಿಂದಿಗೆ ಚರ್ಚಿಸಿ ನಿಯಮಾವಳಿಗಳನ್ನು ರೂಪಿಸಲಾಗುವುದು.
ಇನ್ನು ಇಂದಿನಿಂದ ರಾಜ್ಯಾದ್ಯಂತ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೊವಿಡ್ ವ್ಯಕ್ಸಿನ್ ಹಾಕುವ ಆಂದೋಲನವನ್ನು ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸರಕಾರದೊಂದಿಗೆ ಸಹಕರಿಸಿ ಕೊವಿಡ್ ಮುಕ್ತ ರಾಜ್ಯವಾಗಿಸಲು ಎಲ್ಲರೂ ಶ್ರಮಿಸಬೇಕೆಂಬುದು ಸರಕಾರದ ಆಶಯವಾಗಿದೆ.