ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದ 22 ವರ್ಷದ ಯುವತಿಯೊರ್ವಳು ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕೌಜಲಗಿ ಗ್ರಾಮದ ಯಮನವ್ವಾ ಮಹಾದೇವ ದೊಡಮನಿ ಇವರ ಮಗಳಾದ ಶ್ವೇತಾ ಮಹಾದೇವ ದೊಡಮನಿ ಜನವರಿ 9ರಂದು ರಾತ್ರಿ 9 ಗಂಟೆ ಸುಮಾರಿಗೆ ಮನೆಯಿಂದ ಹೊರಗೆ ಹೋದವಳು ಮರಳಿ ಬಂದಿಲ್ಲ. ಕುಟುಂಬಸ್ಥರು ಸಂಬಂಧಿಕರಲ್ಲಿ ವಿಚಾರಿಸಿದರೂ ಯುವತಿಯ ಸುಳಿವು ಸಿಗದ ಹಿನ್ನೆಲೆ ಕುಲಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಣೆಯಾಗಿರುವ ಯುವತಿ ಶ್ವೇತಾ 5 ಫೂಟ್ ಎತ್ತರವಿದ್ದು, ಸದೃಢ ಮೈ ಕಟ್ಟು, ಸಾದಾಗಪ್ಪು ಮೈ ಬಣ್ಣ, ಕಪ್ಪು ಕೂದಲು, ಬಿಳಿ ಕಲರ್ ಟೀ ಶರ್ಟ ಹಾಗೂ ಕಪ್ಪು ದೋತಿ ಧರಿಸಿದ್ದು, ಕನ್ನಡ ಹಿಂದಿ ಹಾಗೂ ಮರಾಠಿ ಭಾμÉ ಮಾತನಾಡುತ್ತಾಳೆ. ಈ ಯುವತಿ ಬಗ್ಗೆ ಸುಳಿವು ಸಿಕ್ಕಲ್ಲಿ ಕುಲಗೋಡ ಪೆÇಲೀಸ್ ಠಾಣೆ ದೂರವಾಣಿ ಸಂಖ್ಯೆ : 08334-222233 ಸಂಪರ್ಕಿಸಬಹುದು ಎಂದು ಕುಲಗೋಡ ಪೆÇಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ಕೋರಿದ್ದಾರೆ.