ಕೇಂದ್ರ ಸರ್ಕಾರದ ಗ್ರಾಮೀಣ ಮಂತ್ರಾಲಯ ಕೋವಿಡ್ ಹಾಗೂ ಒಮಿಕ್ರಾನ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿನ ನಿವಾರಣೆ ಹಾಗೂ ಜಾಗೃತಿಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಕೋವಿಡ್ ಕಣ್ಗಾವಲು ಮೇಲುಸ್ತುವಾರಿ ಮತ್ತು ನಿರ್ವಹಣೆ ಹಾಗೂ ಸಮನ್ವಯ ಕಾರ್ಯಕ್ಕಾಗಿ ವಿಪತ್ತು ನಿರ್ವಹಣಾ ಕಾಯಿದೆ ಅಡಿಯಲ್ಲಿ ರಾಜ್ಯ ಸರ್ಕಾರ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತಕ್ಷಣ ಜಾರಿಗೆ ಬರುವಂತೆ ಅಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಮುನೀಶ್ ಮೌದ್ಗಿಲ್, ವಿನುತ್ ಪ್ರಿಯಾ, ಶಾಲಿನಿ ರಜನೀಶ್, ಪಂಕಜ್ ಕುಮಾರ್ ಪಾಂಡೆ, ಪ್ರತಾಪ್ ರೆಡ್ಡಿ, ಪವನ್ ಕುಮಾರ್, ವಿಪಿನ್ ಸಿಂಗ್, ಉಮಾ ಮಹಾದೇವನ್, ಪಲ್ಲವಿ ಆಕೃತಿ, ಪೆÇನ್ನುರಾಜ್, ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಶಿವಶಂಕರ, ಬಿಸ್ವಜಿತ್ ಮಿಶ್ರಾ ನೇತೃತ್ವದಲ್ಲಿ ತಂಡ ಕಾರ್ಯನಿರ್ವಹಿಸಲಿದೆ.