Banglore

ಕೋವಿಡ್ ನಿಯಮ ಸಡಿಲಿಕೆ ಬಗ್ಗೆ ಶುಕ್ರವಾರ ನಿರ್ಧಾರ: ಸಿಎಂ ಬೊಮ್ಮಾಯಿ

Share

ಕೊವಿಡ್ ನಿಯಮಗಳನ್ನು ಯಾರೇ ಬ್ರೇಕ್ ಮಾಡಿದರೂ ನಿರ್ದಾಕ್ಷಿಣ್ಯ ಕ್ರಮ. ಅವರು ನಮ್ಮ ಪಕ್ಷದವರು ಬೇರೆ ಪಕ್ಷದವರು ಎನ್ನುವ ಬೇಧ ಭಾವವಿಲ್ಲ. ಯಾರೇ ರೂಲ್ಸ್ ಬ್ರೇಕ್ ಮಾಡಿದರೂ ಕೊವಿಡ್ ನಿಯಮ ಪಾಲನೆ ಬ್ರೇಕ್ ಮಾಡಿದ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರಿನ ತಮ್ಮ ಆರ್‍ಟಿ ನಗರದ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು, ಬಿಜೆಪಿಯ ಕೆಲ ಶಾಸಕರೇ ಕೊರೊನಾ ನಿಯಮಗಳನ್ನು ಪಾಲಿಸದೇ ಮನಬಂದಂತೆ ವರ್ತನೆ ಮಾಡಿತ್ತಿದ್ದಾರೆಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ಕೊವಿಡ್‍ನಂಥ ಸಂದರ್ಭದಲ್ಲಿ ಕೊರೊನಾ ನಿಯಮಗಳನ್ನು ಯಾರೇ ಬ್ರೇಕ್ ಮಾಡಿದರೂ ಕ್ರಮ ಕೈಗೊಳ್ಳುತ್ತೇವೆ. ಇದರಲ್ಲಿ ನಮ್ಮ ಪಕ್ಷ ಅಥವಾ ಬೇರೆ ಪಕ್ಷ ಎಂದು ಯಾವುದೇ ಭೇದ ಭಾವವಿಲ್ಲ. ಇನ್ನು ಈ ಕುರಿತಂತೆ ಕಾಂಗ್ರೆಸ್ ದೂರು ನೀಡುವ ಅವಶ್ಯಕತೆಇಲ್ಲ. ನಾವೇ ಸ್ವಯಂಕೃತವಾಗಿ ಈ ಕುರಿತಂತೆ ದೂರು ದಾಖಲಿಸಿಕೊಳ್ಳುತ್ತೇವೆ ಎಂದು ಸಿಎಂ ಹೇಳಿದರು.

ಇನ್ನು ಕೊರೊನಾ ನಿಯಮ ಸಡಿಲಿಕೆ ಕುರಿತಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಈಗ ಕೊರೊನಾ ನಿಯಮಗಳ ಸಡಿಲಿಕೆ ಕುರಿತಂತೆ ಚರ್ಚೆಯಾಗುತ್ತಿದೆ. ಯಾಕಂದ್ರೆ ಕೊವಿಡ್ ಪೇಶಂಟದದಗಳು ಆಸ್ಪತ್ರೆಗಳಲ್ಲಿ ದಾಖಲಾಗುತ್ತಿಲ್ಲ. ಅವರೆಲ್ಲ ಹೋಮ್ ಐಸೋಲೇಶನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ಆಸ್ಪತ್ರೆಗಳಿಗೆ ಲೋಡ್ ಇಲ್ಲ. ಆದರೆ ಲಸಿಕಾಕರಣ ಕಡಿಮೆ ಇರುವ ಜಿಲ್ಲೆಗಳಲ್ಲಿ ಕೊವಿಡ್ ಹರಡುವಿಕೆಯ ಪ್ರಮಾಣ ಹೆಚ್ಚಾಗಬಹುದು. ಹಾಗಾಗಿ ಕಡಿಮೆ ಲಸಿಕಾಕರಣ ಇರುವ ಜಿಲ್ಲೆಗಳಲ್ಲಿ ಲಸಿಕಾಕರಣಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ. 15-18ವರ್ಷದ ಮಕ್ಕಳ ಲಸಿಕಾಕರಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ. ಕೊರೊನಾ ವಾರಿಯರ್ಸ್ ಕಡೆಗೆ ಹೆಚ್ಚಿನ ಗಮನ ವಹಿಸಲಾಗುತ್ತಿದೆ. ಶೇ 94 ರಷ್ಟು ಜನ ಕೊರೊನಾ ಸೋಂಕಿತರು ಹೋಮ್ ಐಸೋಲೇಶನ್‍ನಲ್ಲಿದ್ದಾರೆ. ಅವರ ಔಷಧೋಪಚಾರ ಕುರಿತಂತೆ ವೈದ್ಯರ ನಡೆ ಹಳ್ಳಿಗಳ ಕಡೆ ಎನ್ನುವ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದರು.

ಇನ್ನು ಕೊವಿಡ್ ನಿಯಮಗಳ ಸಡಿಲಿಕೆ ಕುರಿತಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಕೊರೊನಾ ಫೆಬ್ರುವರಿಯಲ್ಲಿ ಪೀಕ್ ತಲುಪುವ ಸಾಧ್ಯತೆ ಇದೆ. ಜನತೆ ಕೊರೊನಾ ಹೆಚ್ಚಾಗಿ ಪರಿಣಾಮ ಬೀರುತ್ತಿಲ್ಲ ಎಂಬ ಕಾರಣಕ್ಕೆ ನಿಯಮ ಸಡಿಲಿಕೆ ಕುರಿತು ಚರ್ಚೆ ಮಾಡುತ್ತಿರಬಹುದು. ತಮ್ಮ ದಿನನಿತ್ಯದ ಕೆಲಸಗಳೊಂದಿಗೆ ಕೊರೊನಾ ನಿಯಮಗಳ ಪಾಲನೆ ಮಾಡುತ್ತ ಸಾಗಿದರೆ ನಡೆಯುತ್ತೆ ಎನ್ನುವುದು ಅವರ ಆಶಯ. ಆದರೆ ಈ ಕುರಿತಂತೆ ಶುಕ್ರವಾರ ತಜ್ಞರ ಸಭೆ ಕರೆದಿದ್ದು ಈ ಕುರಿತಂತೆ ಚರ್ಚಿಸಿ ನಿರ್ಧಾರ ಪ್ರಕಟಿಸಲಾಗುವುದು ಎಂದರು.

ಇನ್ನು ರಾಜ್ಯದಲ್ಲಿ ಕೊವಿಡ್ ತಂದಿಟ್ಟ ಅವಾಂತರ ಒಂದೆರೆಡಲ್ಲ. ಹಾಗಾಗಿ ಕೊವಿಡ್ ನಿಯಂತ್ರಣಕ್ಕೆ ಸರಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇನ್ನು ಶುಕ್ರವಾರ ಸಭೆ ನಡೆಯಲಿದ್ದು ಈ ಕುರಿತಂತೆ ತಜ್ಞ ವೈದ್ಯರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಈ ಕುರಿತಂತೆ ಸರಕಾರ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.

Tags:

error: Content is protected !!