ರಾಜ್ಯದಲ್ಲಿ ಕೊವಿಡ್ ಸೋಂಕನ್ನು ಎಶಸ್ವಿಯಾಗಿ ಎದುರಿಸುವ ನಿಟ್ಟಿನಲ್ಲಿ ಸರಕಾರ ಸಿದ್ಧವಿದ್ದು, ಸೋಂಕಿರರು ಹಾಗೂ ಹೋಮ್ ಐಸೋಲೇಶನ್‍ನಲ್ಲಿರುವವರ ಕುರಿತು ತೀವೃ ನಿಗಾ ವಹಿಸಲಾಗುವುದು ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕೊವಿಡ್ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ. ಡಾ, ಕೆ ಸುಧಾಕರ್ ರಾಜ್ಯದಲ್ಲಿ ಕೊವಿಡ್ ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಕುರಿತಂತೆ ಸುಧೀರ್ಘ ಎರಡುವರೆ ಗಂಡೆಗಳ ಕಾಲ ಚರ್ಚೆ ನಡೆಸಲಾಗಿದೆ. ಇನ್ನು ಪಾಸಿಟಿವ್ ಕಂಡುಬಂದ ಕೂಡಲೇ ಆಸ್ಪತ್ರೆಗೆ ಹೋಗುವುದನ್ನು ನಿಲ್ಲಿಸಬೇಕು. ಮನೆಯಲ್ಲಿಯೇ ಹೋಮ್ ಐಸೋಲೇಶನ್‍ಗೆ ಒಳಪಡಬೇಕು. ಎಲ್ಲರೂ ಆಸ್ಪತ್ರೆಗೆ ದಾಖಲಾಗಿ ಅವಶ್ಯಕತೆ ಇರುವವರಿಗೆ ಆಸ್ಪತ್ರೆಯಲ್ಲಿ ಜಾಗ ಸಿಗದಂತೆ ಆಗಬಹುದು. ಹಾಗಾಗಿ ಅದನ್ನು ತಪ್ಪಿಸುವ ಉದ್ದೇಶದಿಂದ ಹೋಮ್ ಐಶೋಲೇಶನ್‍ಗೆ ಒಳಪಟ್ಟವರಿಗೆ ಮೆಡಿಕಲ್ ಕಿಟ್‍ಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಇನ್ನು ರಾಜ್ಯದಲ್ಲಿ ಕೊವಿಡ್ ಕೇರ್ ಸೆಂಟರ್‍ಗಳನ್ನು ಹೆಚ್ಚು ಮಾಡುವ ಉದ್ದೇಶವನ್ನು ಸರಕಾರ ಹೊಂದಿದೆ. ಇನ್ನು ಈ ಕುರಿತಂತೆ ಜಾಗೃತಿಯನ್ನು ಆಂದೋಲನ ರೂಪದಲ್ಲಿ ಮಾಡಲಾಗುತ್ತದೆ. ಈ ಮೂಲಕ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಇನ್ನು ನಮ್ಮ ಸರಕಾರ ಹಳೆದ ಕಾರ್ಯಕ್ರಮ ನಮ್ಮ ನಡಿಗೆ ಹಳ್ಳಿಗಳ ಕಡೆಗೆ ಕಾರ್ಯಕ್ರಮವನ್ನು ಮತ್ತೆ ಪ್ರಾರಂಭಿಸಿ ವೈದ್ಯರು ಹಾಗು ದಾದಿಯರನ್ನು ಮತ್ತೆ ಹಳ್ಳಿಗಳಿಗೆ ಕಳಿಸಿ ಸೌಲಭ್ಯಗಳನ್ನು ಮಾಡಿಕೊಡಲಾಗುವುದು ಎಂದು ತಿಳಿಸಿದರು.