Belagavi

ಕೊವಿಡ್ ಮೂರನೇ ಅಲೆ: ಮಕ್ಕಳೇ ಟಾರ್ಗೆಟ್..!

Share

ಕೊರೊನಾ ಮೂರನೇ ಅಲೆ ಶರವೇಗದಲ್ಲಿ ರಾಜ್ಯದಲ್ಲಿ ಪಸರಿಸುತ್ತಿದೆ.. ಗಡಿ ಜಿಲ್ಲೆ ಬೆಳಗಾವಿಯಲ್ಲಿ 218 ಮಕ್ಕಳಿಗೆ ಈವರೆಗೂ ಮಹಾಮಾರಿ ವಕ್ಕರಿಸಿದ್ದು, ಇದರಲ್ಲಿ 138 ಮಕ್ಕಳು ಕಿತ್ತೂರು ಸೈನಿಕ ಶಾಲೆ ಬಾಲಕಿಯರಿದ್ದಾರೆ.. ವಿದ್ಯಾರ್ಥಿಗಳ ಮತ್ತು ಜನಸಾಮಾನ್ಯರ ಡೋಂಟ್ ಕೇರ್ ಮನೋಭಾವನೆ ಈಗ ಪೆÇೀಷಕರನ್ನ ತಲ್ಲಣಗೊಳಿಸಿದೆ..ಇನ್ನೂ ಶಾಲೆ ಕಾಲೇಜು ವಿದ್ಯಾರ್ಥಿಗಳಂತೂ ಕೋವಿಡ್ ರೂಲ್ಸ್ ಗೆ ಕ್ಯಾರೇ ಅನ್ನುತ್ತಿಲ್ಲ.

ಹೌದು..ಮಹಾರಾಷ್ಟ್ರ ನಂಜಿನ ಎಫೆಕ್ಟ್ ದಿನೇ ದಿನೇ ಬೆಳಗಾವಿ ಜಿಲ್ಲೆ ಚಿತ್ರಣವನ್ನೆ ಬದಲಿಸುತ್ತಿದೆ..10 ದಿನದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಕೇಸ್ 1000 ಗಡಿ ತಲುಪಿದೆ..ಅದರಲ್ಲೂ ಬೆಳಗಾವಿ ಮಹಾನಗರ ಮತ್ತು ಬೆಳಗಾವಿ ತಾಲೂಕು ಸೇರಿಸಿದ್ದೆ ಪಾಸಿಟಿವಿಟಿ ರೇಟ್ ಶೇ.4 ರಷ್ಟು ದಾಟಿದೆ..ಕೊರೊನಾ ಮೂರನೇ ಅಲೆ ಪರಿಣಾಮವೇ ಬೆಂಗಳೂರು ನಂತ್ರ ಬೆಳಗಾವಿ ಜಿಲ್ಲೆಯಲ್ಲಿ ಕೇಸ್ ಮಿತಿಮೀರಿ ಬರುತ್ತಿವೆ. ಈಗ ದಿನವೂ 100 ,200 ಕೇಸ್ ಬರುತ್ತಿದ್ದು,ಮುಂದಿನ ಒಂದೆರೆಡು ವಾರದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ದಿನವೂ1000 ಗಡಿ ದಾಟಿ ಕೇಸ್ ಪತ್ತೆ ಆಗಲಿದೆ..

ಈಗಾಗಲೇ ಕೊರೊನಾ ಸಮುದಾಯದಲ್ಲಿ ಹರಡಿದ್ದರಿಂದ 218 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. ದಿನವೂ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಮಹಾಮಾರಿ ಸೋಂಕು ಉಲ್ಬಣವಾಗುತ್ತಿದೆ..ಇದು ಪೆÇೀಷಕರ ನಿದ್ದೆಗೆಡಿಸಿದೆ..ಯಾಕೆಂದರೆ ಪ್ರತಿಯೊಂದು ಕುಟುಂಬದ ಆಸ್ತಿ ಮಕ್ಕಳು, ಹೀಗಾಗಿ ಮಕ್ಕಳನ್ನೆ ಕೊರೊನಾ ಟಾರ್ಗೆಟ್ ಮಾಡುತ್ತಿರುವುದು ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಈವರೆಗೂ ಕೊರೊನಾ ಕೇಸ್ ಹೆಚ್ಚಾಗಲು ಮಹಾರಾಷ್ಟ್ರ, ಕೇರಳ, ದೆಹಲಿ ಸೇರಿ ಬೇರೆಬೇರೆ ರಾಜ್ಯದಿಂದ ಬಂದವರಿಂದ ಸೋಂಕು ಹರಡಿದೆ..

ಇನ್ನೂ ಬೆಳಗಾವಿ ಜಿಲ್ಲೆಯ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆಯಲ್ಲಿ ಕೊರೊನಾ ಸ್ಫೋಟ ಮುಂದೊರೆದಿದೆ. ಮೊದಲು ಟೆಸ್ಟ್ ನಲ್ಲಿ 12 ಮಕ್ಕಳಲ್ಲಿ ಪಾಸಿಟಿವ್ ಬಂದಿತ್ತು..ಆ ಬಳಿಕ ಟೆಸ್ಟ್ ವರದಿಯಲ್ಲಿ 68 ಮಕ್ಕಳು 10 ಸಿಬ್ಬಂದಿಯಲ್ಲಿ ಕಾಣಿಸಿಕೊಂಡಿತ್ತು..ಈಗ ವಸತಿ ಶಾಲೆಯ ಒಟ್ಟು 138 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ 35 ವಿದ್ಯಾರ್ಥಿಗಳನ್ನ ಅವರ ಪೆÇೀಷಕರ ಮನೆಗೆ ಕಳುಸಿಕೊಡಲಾಗಿದೆ. ಕೆಲ ಮಕ್ಕಳನ್ನ ಪೆÇೀಷಕರು ಆಸ್ಪತ್ರೆ ಗೆ ದಾಖಲಿಸಿದ್ರು..ಮತ್ತೆ ಕೆಲ ಪೆÇೀಷಕರು ಮಕ್ಕಳನ್ನ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಕೊಡಸ್ತಿವಿ ಅಂತಾ ಕರೆದುಕೊಂಡು ಹೋಗಿದ್ದಾರೆ..

ಸೋಂಕಿತ ವಿದ್ಯಾರ್ಥಿಗಳನ್ನ ಮನೆಗೆ ಕಳುಹಿಸಿಕೊಡುವ ಮೂಲಕ ಶಾಲೆ ಆಡಳಿತ ಮಂಡಳಿ ಯಡವಟ್ಟು ಮಾಡಿದೆ..ಇದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶವನ್ನ ಹೊರಹಾಕುತ್ತಿದ್ದಾರೆ. ಇನ್ನೂ ಬಹುಪಾಲು ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಕೋವಿಡ್ ನಿಯಮ ಪಾಲಿಸುತ್ತಿಲ್ಲ. ಮಾಸ್ಕ್ ಧರಿಸಲ್ಲ, ಸಾಮಾಜಿಕ ಅಂತರ ಅಂತೂ ಇಲ್ಲವೇ ಇಲ್ಲ. ಬೆಳಗಾವಿ ಸಿಟಿ ಬಸ್ ನಲ್ಲಿ ವಿದ್ಯಾರ್ಥಿಗಳನ್ನ ಕುರಿತುಂಬಿದಂತೆ ತುಂಬಲಾಗುತ್ತಿದೆ.
ಬೈಟ್ ಮೆಹಬೂಬ್ ಮಕಾಂದಾರ, ಸ್ಥಳೀಯ ನಿವಾಸಿ

ಒಟ್ಟಿನಲ್ಲಿ ಕೊರೊನಾ ಮೂರನೇ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಎಂಟ್ರಿಕೊಟ್ಟಾಗಿದೆ..ಮಕ್ಕಳನ್ನೆ ಟಾರ್ಗೆಟ್ ಮಾಡುತ್ತಿರುವ ಮಹಾಮಾರಿ ತಡೆಯಲು ಕೋವಿಡ್ ನಿಯಮಗಳನ್ನ ಜನರು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಇಲ್ಲವಾದ್ರೆ ಮೂರನೇ ಅಲೆಯು ಸಹ ಅವಾಂತರ ಸೃಷ್ಟಿಸಲಿದೆ.

Tags:

error: Content is protected !!