ರಾಜ್ಯಾದ್ಯಂತ ಸರಕಾರ ಹೇರಿರುವ ವಾರಾತ್ಯಂದ ಕಫ್ರ್ಯೂಗೆ ಬೆಳಗಾವಿ ಜನತೆ ಸರಕಾರವನ್ನು ಪ್ರಶ್ನೆ ಮಾಡುತ್ತಿದ್ದಾರೆ. ವಾರಾಂತ್ಯದ ದಿನಗಳಳಲ್ಲಿ ಮಾತ್ರ ಕೊರೊನಾ ಹಬ್ಬುತ್ತಾ… ವಾರಾಂತ್ಯದ ದಿನಗಳನ್ನು ಹೊರತುಪಡಿಸಿ ಕೊರೊನಾ ಹಬ್ಬಲ್ವಾ ಎಂದು ಸರಕಾರವನ್ನು ಪ್ರಶ್ನೆ ಮಾಡಿದ್ದಾರೆ.

ವಾರಾಂತ್ಯದ ಲಾಕ್‍ಡೌನ್ ಎರಡನೇ ದಿನವಾದ ಇಂದು ಬೆಳಗಾವಿ ನಗರದಲ್ಲಿ ಖಡೇವಜಾರ್ ಮಾರ್ಕೆಟ್ ಅಸೋಸಿಯೇಶನ್ ವ್ಯಾಪಾರಸ್ಥರು ಸರಕಾರವನ್ನು ಪ್ರಶ್ನೆ ಮಾಡಿದ್ದಾರೆ. ಸರಕಾರ ಜಾರಿಗೊಳಿಸಿರುವ ಈ ವಾರಾಂತ್ಯದ ಲಾಕ್‍ಡೌನ್‍ನಿಂದಾಗಿ ಬೆಳಗಾವಿ ನಗರದಲ್ಲಿ ಸಂಪೂರ್ಣ ವ್ಯಾಪಾರ ವಹಿವಾಟಿಗೆ ತೊಂದರೆಯಾಗುತ್ತಿದೆ. ಇನ್ನು ಸರಕಾರ ಹೇರಿರುವ ಈ ವೀಕೆಂಡ್ ಕಫ್ರ್ಯೂ ಲಾಜಿಕ್ ಆಗಿದಯೇ..? ವಾರದ ನಡುವಿನ ದಿನಗಳಲ್ಲಿ ಕೊರೊನಾ ಬರಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.
ಈ ಕುರಿತಂತೆ ಮತನಾಡಿದ ಇನ್ನೋರ್ವ ವ್ಯಾಪಾರಸ್ಥರು, ಬೆಳಗಾವಿ ನಗರದಲ್ಲಿ ವ್ಯಾಪಾರಸ್ಥರು ಹಾಗೂ ಬಡವರು ಈ ಲಾಕ್ ಡೌನ್‍ನಿಂದಾಗಿ ಕಷ್ಟ ಅನುಭವಿಸುವಂತಾಗಿದೆ. ಕೆಲ ಜನ ಕೊವಿಡ್‍ನಿಂದಾಗಿ ಸತ್ತರೆ ಇನ್ನು ಕೆಲ ಜನ ಹಸಿವೆ ಹಾಗೂ ಆರೋಗ್ಯದ ಸಮಸ್ಯೆಯಿಂದಾಗಿ ಸಾವನ್ನಪ್ಪಿದ್ದಾರೆ. ಹಾಗಾಗಿ ವ್ಯಾಪಾರ ನಡೆಯಬೇಕಾದ ದಿನದಲ್ಲಿಯೇ ನೀವು ಲಾಕ್ ಮಾಡಿದರೆ ಜೀವನವನ್ನು ನನಡೆಸುವುದು ಸಮಸ್ಯೆಯಾಗುತ್ತದೆ ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಇನ್ನು ಇದೇ ವೇಳೆ ಮಾತನಾಡಿದ ಇನ್ನೋರ್ವ ವ್ಯಪಾರಸ್ಥರು ಸರಕಾರದ ವಾರಾಂತ್ಯದ ಲಾಕ್‍ಡೌನ್‍ಗೆ ಕಿಡಿಕಾರಿದರು. ಸರಕಾರ ಯಾವುದೇ ನಿಯಮಾವಳಿಗಳನ್ನು ಮಾಡಿದರೂ ಅದು ವೈಜ್ಞಾನಿಕವಾಗಿರಬೇಕು. ಸರಕಾರ ಹೊಸ ವರ್ಷ ಹಾಗೂ ಕ್ರಿಸ್‍ಮಸ್‍ಗಳಲ್ಲಿ ಅಷ್ಟೊಂದು ನಿಬಂಧನೆಗಳನ್ನು ಮಾಡಲಿಲ್ಲ. ಆದರೆ ಮುಂದೆ ನಮ್ಮ ಪವಿತ್ರ ರಮ್‍ಜಾನ್ ಹಬ್ಬ ಬರಲಿದೆ. ಈ ಸಂದರ್ಭದಲ್ಲಿ ನೀವು ಲಾಕ್‍ಡೌನ್ ಮಾಡಿದರೆ ಇದರಿಂದ ಎಲ್ಲ ವ್ಯಾಪಾರಸ್ಥರಿಗೆ ತೊಂದರೆಯಾಗಲಿದೆ ಎಂದು ವ್ಯಾಪಾರಸ್ಥರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ,
ಬೆಳಗಾವಿಯಲ್ಲಿ ವ್ಯಾಪಾರಸ್ಥರು ವಾರಾಂತ್ಯದ ಕಫ್ರ್ಯೂಗೆ ತೀವೃ ವಿರೋಧ ವ್ಯಕ್ತವಾಗಿದೆ. ಇನ್ನು ಚುನಾವಣೆಯಲ್ಲಿ ಇಲ್ಲದ ಕೊರೊನಾ ಈಗ ಅದು ಹೇಗೆ ಈಗ ಬಂದುಹಿಡುತ್ತೆ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಈ ಕುರಿತಂತೆ ಸರಕಾರ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.