Belagavi

ಕೊರೊನಾ ಪರಿಹಾರಕ್ಕಾಗಿ ಕಣ್ಣೀರಿಟ್ಟ ಸಾರಿಗೆ ನೌಕರರ ಕುಟುಂಬ

Share

ಕೊರೊನಾದಿಂದ ಮೃತಪಟ್ಟ ಸಾರಿಗೆ ನೌಕರರ ಕುಟುಂಬಗಳು ಅಕ್ಷರಶಃ ಬೀದಿಗೆ ಬಿದ್ದಿವೆ..ವರ್ಷವಾದ್ರು ಪರಿಹಾರ ಸಿಗದಕ್ಕೆ ಕಣ್ಣೀರಿಡುವಂತಾಗಿದೆ..ಮೃತಪಟ್ಟವರವ ಕುಟುಂಬಗಳಿಗೆ ಪರಿಹಾರ ಸಿಗದಿದ್ದರೆ ಕೋರ್ಟ ಮೋರೆ ಹೋಗುವುದಾಗಿ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಹೌದು…ಹೀಗೆ ಕಣ್ಣೀರು ಇಡುತ್ತಿರುವ ಮಹಿಳೆ ಸೇರಿ ನೂರಾರು ಸಾರಿಗೆ ನೌಕರರ ಕುಟುಂಬ ಬೀದಿಗೆ ಬಿದ್ದಿದೆ.. ಯಾಕೆಂದರೆ ಕೊರೊನಾ ಮೊದಲ ಅಲೆ ಮತ್ತು ಕೊರೊನಾ ಎರಡನೇ ಅಲೆಯಲ್ಲಿ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ ಸಾರಿಗೆ ನೌಕರರು ತಮ್ಮ ಪ್ರಾಣವನ್ನೆ ಕಳೆದುಕೊಂಡಿದ್ದಾರೆ..ಹೀಗೆ ಕಣ್ಣೀರು ಇಡುತ್ತಿರುವ ಮಹಿಳೆ ಬೆಳಗಾವಿ ಜಿಲ್ಲೆಯ ಗುಲಶಾನ್ ಬೆಟ್ಟಸೂರಕರ. ಇವರ ಪತಿ ಡಿ.ಆರ.ಬೆಟ್ಟಸೂರಕರ ಬೈಲಹೊಂಗಲ ಡಿಪೋದಲ್ಲಿ ಸಾರಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದರು..ಎರಡನೇ ಅಲೆ ಬಂದಾಗ ಕೊರೊನಾಗೆ ಡಿ.ಆರ.ಬೆಟ್ಟಸೂರಕರ ಸಾವನ್ನಪ್ಪುತ್ತಾರೆ.. ಅಂದಿನಿಂದ ಇಂದಿನ ವರೆಗೂ ಗುಲಶಾನ್ ತಮ್ಮ ನಾಲ್ಕು ಮಕ್ಕಳೊಂದಿಗೆ ಕಣ್ಣೀರಿಡುತ್ತಾ ಜೀವನ ಸಾಗಿಸುತ್ತಿದ್ದಾರೆ..ಪತಿ ಬದುಕಿದ್ದಾಗ ಒಂದೇ ಒಂದು ದಿನ ಕೆಲಸ ಮಾಡದ ಕೈಗಳು ಇಂದು ನಾಲ್ಕು ಮನೆಗಳಲ್ಲಿ ಪಾತ್ರೆ ತೊಳದ್ರೆ ಮಾತ್ರ ಜೀವನ ಸಾಗುತ್ತದೆ..ಈವರೆಗೂ ಈ ಬೆಟ್ಟಸೂರಕರ ಕುಟುಂಬಕ್ಕೆ ಸರ್ಕಾರದಿಂದ30 ಲಕ್ಷ ರುಪಾಯಿ ಪರಿಹಾರವೇ ಬಂದಿಲ್ಲ.. ಪರಿಹಾರಕ್ಕಾಗಿ ಈ ಕುಟುಂಬ ಅಲೆದಾಡಿ ಅಲೆದಾಡಿ ಸಾಕಾಗಿದೆ..ಇನ್ನೂ ಇವರ ಪಕ್ಕದಲ್ಲಿ ಕುಳಿತಿರುವ ಮಹಿಳೆ ಹೆಸರು ಶ್ವೇತಾ ನಾಯಕ..ಇವರ ಪತಿ ಸಂಜಯ ಸಹ ಬೆಳಗಾವಿ ಡಿಪೋದಲ್ಲಿ ಕೆಲಸ ಮಾಡುತ್ತಿದ್ದರು..ಶ್ವೇತಾ ಪತಿ ಮೊದಲ ಅಲೆಯಲ್ಲಿ ಮೃತಪಟ್ಟಿದ್ದಾರೆ…ಆದ್ರೆ ಮೊದಲ, ಎರಡನೇ ಅಲೆ ಹೋಗಿ ಮೂರನೇ ಅಲೆ ಆಗಮನದ ಹೊಸ್ತಿಲಿನಲ್ಲಿದ್ದೇವೆ..ಈ ಕುಟುಂಬ ಕ್ಕೂ ಸರ್ಕಾರದಿಂದ 30 ಲಕ್ಷ ರುಪಾಯಿ ಪರಿಹಾರವೇ ಸಿಕ್ಕಿಲ್ಲ.. ಇವೆರಡೂ ಕುಟುಂಬಗಳನ್ನು ಅಕ್ಷರಶಃ ಕಣ್ಣೀರಿನಲ್ಲಿ ಜೀವನ ಸಾಗಿಸುವಂತಾಗಿದೆ.

ಇನ್ನೂ ಹಾಗೇ ನೋಡಿದ್ರೆ ಸರ್ಕಾರ ಕೊಟ್ಟ ಮಾತನ್ನೆ ಮರೆತು ಬಿಟ್ಟಿದೆ..ರಾಜ್ಯದ ನಾಲ್ಕು ಸಾರಿಗೆ ನಿಗಮದಲ್ಲಿ ಒಟ್ಟು 278 ಜನ ಸಾರಿಗೆ ನೌಕರರು ಕೊರೊನಾದಿಂದ ಸಾವನ್ನಪ್ಪಿದ್ದಾರೆ..ಈವರೆಗೂ ಅರ್ಧದಷ್ಟು ಜನರಿಗೂ ಪರಿಹಾರ ಸಿಕ್ಕಿಲ್ಲ. ಸ್ವಯಂ ಅಂದಿನ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮೃತ ಕುಟುಂಬಗಳಿಗೆ 30 ಲಕ್ಷ ರುಪಾಯಿ ಪರಿಹಾರ ನೀಡುವುದಾಗಿ ಮಾತುಕೊಟ್ಟಿದ್ದರು..ವಾಸ್ತವದಲ್ಲಿ ಪರಿಹಾರ ಸಿಕ್ಕಿದ್ದು ಬರೀ ಬೆರಳೆಣಿಕೆಯಷ್ಟು ಮೃತ ಸಾರಿ ನೌಕರರ ಕುಟುಂಬಗಳಿಗೆ ಅನ್ನೋದು ವಾಸ್ತವದ ಸತ್ಯ.ಹೀಗಾಗಿ ಸರ್ಕಾರ ಕೊಟ್ಟ ಮಾತಿನಂತೆ ಸಾರಿಗೆ ನೌಕರರ ಕುಟುಂಬಗಳಿಗೆ ಪರಿಹಾರ ಕೊಡಬೇಕು. ಇಲ್ಲವಾದ್ರೆ ಸರ್ಕಾರದ ವಿರುದ್ಧ ಕೋರ್ಟ ಮೋರೆ ಹೋಗುವುದಾಗಿ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕದ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಒಟ್ಟಿನಲ್ಲಿ ಕೊರೊನಾದಿಂದ ಪ್ರಾಣ ಕಳೆದುಕೊಂಡ ಸಾರಿಗೆ ನೌಕರರ ಕುಟುಂಬಗಳಿಗೆ ಈವರೆಗೂ ಪರಿಹಾರ ಸಿಗದೇ ಪರದಾಡುತ್ತಿದ್ದಾರೆ..ಬೀದಿ ಬಿದ್ದ ಸಾರಿಗೆ ನೌಕರರ ಕುಟುಂಬಗಳಿಗೆ ತಕ್ಷಣವೇ ಸರ್ಕಾರ ಸ್ಪಂದಿಸಬೇಕಿದೆ.

Tags:

error: Content is protected !!