COVID-19

ಕೊರೊನಾ, ಒಮಿಕ್ರಾನ್, ಡೆಲ್ಟಾ ಬಗ್ಗೆ ತಜ್ಞ ವೈದ್ಯ ಡಾ.ಪವನ್‍ಕುಮಾರ್ ಮಹತ್ವದ ಮಾಹಿತಿ

Share

ಒಮಿಕ್ರಾನ್, ಡೆಲ್ಟಾ ಇರಲಿ, ಅಥವಾ ಆರ್‍ಟಿಪಿಸಿಆರ್ ನೆಗೆಟಿವ್ ಬರಲಿ, ಪಾಸಿಟಿವ್ ಬರಲಿ ಅದು ರಿಪೋರ್ಟ ಬರೋವರೆಗೂ ಕಾಯಬೇಕಾ ಎಂಬ ಯಾವುದೇ ಗೊಂದಲ ಬೇಡ ವೈರಲ್ ಲಕ್ಷಣಗಳು ಕಂಡು ಬಂದರೆ ಪ್ರತಿಯೊಬ್ಬರೂ ಕೂಡ ಮನೆಯಲ್ಲಿಯೇ ಐಸೋಲೇಟ್ ಆಗಬೇಕು. ವೈದ್ಯರಲ್ಲಿ ತೋರಿಸಿ ಲಕ್ಷಣಗಳಿಗೆ ಅನುಸಾರವಾಗಿ ಚಿಕಿತ್ಸೆ ಪಡೆದುಕೊಂಡು ಮನೆಗಳಲ್ಲಿಯೇ ಐಸೋಲೇಟ್ ಆಗಬಹುದು ಎಂದು ತಜ್ಞ ವೈದ್ಯ ಡಾ.ಪವನ್‍ಕುಮಾರ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ಮತ್ತು ಒಮಿಕ್ರಾನ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರಿಗೆ ಉಪಯುಕ್ತ ಮಾಹಿತಿ ನೀಡಿರುವ ಡಾ.ಪವನ್‍ಕುಮಾರ್ ಅವರು ಎಲ್ಲಾ ವೈರಲ್ ಫೀವರ್ ಕೂಡ ಸಾಮಾನ್ಯವಾಗಿ ವೈರಲ್ ಫ್ಲ್ಯೂ ಲಕ್ಷಣಗಳು ಇವೆ. ಡೆಲ್ಟಾಗೂ ಒಮಿಕ್ರಾನ್‍ಗೂ ಸಣ್ಣಪುಟ್ಟ ವ್ಯತ್ಯಾಸವಿದೆ. ಒಮಿಕ್ರಾನ್ ಸೋಂಕಿತರು ಗಂಟಲು ಕೆರೆತ, ಗಂಟಲು ನೋವು, ಮೂಗು ಕಟ್ಟುವುದು, ಮೂಗು ಸುರಿಯುವುದು, ಮೈಕೈ ನೋವು, ಜ್ವರ, ವಿಶೇಷವಾಗಿ ಬೆನ್ನು ನೋವಾಗಿ ತುಂಬಾ ಸುಸ್ತಾಗಿರುತ್ತಾರೆ. ಇಂಗ್ಲೆಂಡನಲ್ಲಿ ಸುಮಾರು 700 ಜನ ಒಮಿಕ್ರಾನ್ ಸೋಂಕಿತರಲ್ಲಿನ ಲಕ್ಷಣಗಳ ಬಗ್ಗೆ ಅಧ್ಯಯನ ಮಾಡಿದಾಗ ಅವರ ರಿಪೋರ್ಟನಲ್ಲಿ ಸಾಕಷ್ಟು ಜನರು ಸಲಹೆ ಕೊಟ್ಟಿದ್ದು ಗಂಟಲು ಕೆರೆತ ತುಂಬಾ ಸಾಮಾನ್ಯ ಲಕ್ಷಣವಾಗಿದೆ.

ಅದರ ಜೊತೆಗೆ ತುಂಬಾ ಸುಸ್ತಾಗುವುದು, ಬೆನ್ನು ನೋವು ಬರುವುದು ತುಂಬಾ ಜನರಲ್ಲಿ ನೋಡಲಾಗಿದೆ. ನಮ್ಮ ದೇಶದಲ್ಲಿಯೂ ಕೂಡ ಸಾಕಷ್ಟು ಜನರಿಗೆ ಗಂಟಲು ಕೆರೆತ, ಗಂಟಲು ನೋವು, ಮೂಗು ಕಟ್ಟುವುದು, ತುಂಬಾ ಸುಸ್ತಾಗುವುದು ಇದೆ. ಸಾಮಾನ್ಯವಾಗಿ ಎಲ್ಲಾ ವೈರಲ್ ಫೀವರ್‍ನಲ್ಲಿ ಈ ಲಕ್ಷಣಗಳು ಕಂಡು ಬರುತ್ತವೆ. ಡೆಲ್ಟಾದಲ್ಲಿಯೂ ಇದೇ ರೀತಿ ಇತ್ತು. ಇದರ ಜೊತೆಗೆ ಇನ್ನು ಕೆಲವು ಜನರಲ್ಲಿ ಲೂಸ್ ಮೋಶನ್, ಸ್ವಲ್ಪ ಹೊಟ್ಟೆ ನೋವು, ಸಂಕಟ ಕಂಡು ಬಂದಿದೆ. ಆದರೆ ಯಾರೂ ಕೂಡ ಭಯಭೀತರಾಗುವ ಅವಶ್ಯಕತೆ ಇಲ್ಲ. ಈ ರೀತಿ ಲಕ್ಷಣಗಳು ಕಂಡು ಬಂದರೆ ನಾರ್ಮಲ್ ಆಗಿ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬಹುದು, ಓಪಿಡಿ ಬೇಸ್‍ನಲ್ಲಿ ಚಿಕಿತ್ಸೆ ತೆಗೆದುಕೊಂಡು ಮಾತ್ರೆ ತೆಗೆದುಕೊಂಡು ಮನೆಯಲ್ಲಿಯೇ ಐಸೋಲೇಶನ್ ಆಗಬೇಕು.

ಒಮಿಕ್ರಾನ್, ಡೆಲ್ಟಾ ಇರಲಿ, ಅಥವಾ ಆರ್‍ಟಿಪಿಸಿಆರ್ ನೆಗೆಟಿವ್ ಬರಲಿ, ಪಾಸಿಟಿವ್ ಬರಲಿ ಅದು ರಿಪೋರ್ಟ ಬರೋವರೆಗೂ ಕಾಯಬೇಕಾ ಎಂಬ ಯಾವುದೇ ಗೊಂದಲ ಬೇಡ ವೈರಲ್ ಲಕ್ಷಣಗಳು ಕಂಡು ಬಂದರೆ ಪ್ರತಿಯೊಬ್ಬರೂ ಕೂಡ ಮನೆಯಲ್ಲಿಯೇ ಐಸೋಲೇಟ್ ಆಗಬೇಕು. ಸಾಮಾನ್ಯವಾಗಿ 3ರಿಂದ 1 ವಾರದವರೆಗೆ ಈ ಲಕ್ಷಣಗಳು ಇರುತ್ತವೆ, ಅದಾದ ಮೇಲೆ ಇರುವುದಿಲ್ಲ. ಅದಾದ ಮೇಲೂ ಫೀವರ್ ಜಾಸ್ತಿಯಿದೆ, ತುಂಬಾ ಸುಸ್ತಾಗುತ್ತಿದೆ, ಆಕ್ಸಿಜನ್ ಮಟ್ಟ ಏನಾದ್ರು ಕಡಿಮೆಯಾದ್ರೆ ಮತ್ತೆ ವೈದ್ಯರಲ್ಲಿ ಬಂದು ತೋರಿಸಬೇಕು ಎಂದರು.

ಇನ್ನು ಮೊದಲ ಹಾಗೂ ಎರಡನೇ ಅಲೆ ಬಂದ ನಂತರದಿಂದ ಪ್ರತಿಯೊಬ್ಬರು ಕೂಡ ಸ್ವಯಂ ವೈದ್ಯರಾಗಿ ಬಿಟ್ಟಿದ್ದಾರೆ. ಇದು ಬಹಳ ತಪ್ಪು, ಸುಮ್ಮ ಸುಮ್ಮನೇ ಆಂಟಿ ಬಯೋಟಿಕ್‍ಗಳನ್ನು ತೆಗೆದುಕೊಳ್ಳುತ್ತಾರೆ. ಎಲ್ಲಾ ಕೆಮಿಸ್ಟ್‍ಗಳು ಯಾರಿಗೂ ಕೂಡ ಮುನ್ನೆಚ್ಚರಿಕೆ ಇಲ್ಲದೇ ಆಂಟಿ ಬಯೋಟಿಕ್ಸಗಳನ್ನು ಯಾರಿಗೂ ಕೊಡಬಾರದು. ಅದೇ ರೀತಿ ಯಾರೂ ಆಂಟಿ ಬಯೋಟಿಕ್ಸ ತೆಗೆದುಕೊಳ್ಳಬಾರದು. ಯಾಕೆಂದರೆ ಮುಂದಿನ ದಿನಗಳಲ್ಲಿ ಆಂಟಿ ಬಯೋಟಿಕ್ಸಗೆ ಅಭಿವೃದ್ಧಿಯಾದರೆ ಮುಂದೆ ಯಾವುದೇ ರೋಗಕ್ಕೆ ಆಂಟಿ ಬಯೋಟಿಕ್ಸ ಕೊಟ್ಟರೆ ಕೆಲಸ ಮಾಡುವುದಿಲ್ಲ. ಜ್ವರ, ಮೈ ಕೈ ನೋವು ಬಂದಾಗ ಸೆಟ್‍ರಿಜಿನ್ ಮಾತ್ರೆ ತೆಗೆದುಕೊಳ್ಳಬಹುದು. ಅದನ್ನು ಬಿಟ್ಟರೆ ಆಂಟಿ ಬಯೋಟಿಕ್ಸ ತೆಗೆದುಕೊಳ್ಳಬಾರದು. ಇದಾದ ಮೇಲೆ ವೈದ್ಯರಿಗೆ ತೋರಿಸಿ ಮುಂದಿನ ಚಿಕಿತ್ಸೆ ತೆಗೆದುಕೊಳ್ಳಬಹುದು ಎಂದು ಡಾ.ಪವನ್‍ಕುಮಾರ್ ಮಾಹಿತಿ ನೀಡಿದರು.

ಒಟ್ಟಿನಲ್ಲಿ ಹಲವರು ರೀತಿಯ ಸಲಹೆ ಸೂಚನೆಗಳನ್ನು ಡಾ.ಪವನ್‍ಕುಮಾರ್ ಕೊಟ್ಟಿದ್ದು. ಯಾವುದೇ ಕಾರಣಕ್ಕೂ ಭಯ ಭೀತರಾಗಬೇಡಿ, ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಪರೀಕ್ಷೆ ಮಾಡಿಸಿಕೊಳ್ಳಿ ಎಂಬುದನ್ನು ತಿಳಿಸಿದ್ದಾರೆ.

Tags:

error: Content is protected !!