ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಪತಿಯು ಪತ್ನಿಯ ಕೊಲೆಗೈದಿದ್ದಾನೆ. ಕುಡಿದ ಮತ್ತಿನಲ್ಲಿದ್ದ ಪತಿಯಿಂದ ಪತ್ನಿಯ ಹತ್ಯೆಯಾಗಿರುವ ಘಟನೆ ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ಶರಣ ಸೋಮನಾಳ ಗ್ರಾಮದಲ್ಲಿ ನಡೆದಿದೆ. ಬಿಸ್ಮಿಲ್ಲಾ ಮಕಾನದಾರ್ (40) ಪತಿಯಿಂದ ಕೊಲೆಗೀಡಾದ ಪತ್ನಿಯಾಗಿದ್ದು ಮೈಬುಸಾಬ್ ಮಕಾನದಾರ್ (47) ಎಂಬಾತಿನಿಂದ ಈ ಕೃತ್ಯ ನಡೆದಿದೆ.

ಕೊಡಲಿಯಿಂದ ಬಿಸ್ಮಿಲ್ಲಾಳ ತಲೆಗೆ ಹೊಡೆದು ಕೊಲೆ ಮಾಡಿದ್ದು ಇಂದು ನಸುಕಿನ ಜಾವ ಶರಣ ಸೋಮನಾಳ ಗ್ರಾಮದ ಮನೆಯಲ್ಲಿ ನಡೆದಿದೆ. ಇನ್ನೂ ಆರೋಪಿ ಮೈಬುಸಾಬ್ ಪೊಲೀಸರ ವಶಕ್ಕೆ ಪಡೆಯಲಾಗಿದೆ. ಬಿಸ್ಮಿಲ್ಲಾಳ ಶವ ಮರಣೋತ್ತರ ಪರೀಕ್ಷೆಗೆ ಬಸವನಬಾಗೇವಾಡಿ ತಾಲೂಕಾ ಆಸ್ಪತ್ರೆಗೆ ರವಾನಿಸಲಾಗಿದೆ. ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.