ಗ್ರಾಮ ಪಂಚಾಯತ ಪಿಡಿಓಗಳು ಇತ್ತೀಚೆಗೆ ಹೆಚ್ಚು ಕಮರ್ಶಿಯಲ್ ಆಗಿದ್ದಾರೆ. ಗ್ರಾಮೀಣ ಮಟ್ಟದ ಅಭಿವೃದ್ಧಿ ಕಾರ್ಯಗಳಲ್ಲಿ ನಿರ್ಲಕ್ಷ ವಹಿಸುತ್ತಿದ್ದು ಅವರಿಗೆ ಬಿಸಿ ಮುಟ್ಟಿಸುವ ಕಾರ್ಯ ಮಾಡಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದ್ದಾರೆ.

ಬೆಳಗಾವಿ ನಗರದಲ್ಲಿ ಇಂದು ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ತಮ್ಮ ಕಾರ್ಯ ಚಟುವಟಿಕೆಗಳಿಗೆ ಬೆಳಗಾವಿ ತಾಲೂಕಿನಿಂದಲೇ ಕಾರ್ಯಾರಂಭ ಮಾಡುವ ಉದ್ದೇಶದಿಂದ ಇಂದು ಬೆಳಗಾವಿ ನಗರದಲ್ಲಿ ರಾಣಿ ಚೆನ್ನಮ್ಮ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು. ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉತ್ತಮ ಕಾಂಬಿನೇಶನ್‍ನಿಂದಾಗಿ ನಮಗೆ ಮತಗಳನ್ನು ಹಾಕಿದ್ದಾರೆ. ಹಾಗಾಗಿ ಅವರೆಲ್ಲರ ವಿಶ್ವಾಸವನ್ನು ನಾವು ಕಾಯ್ದುಕೊಂಡು ಹೋಗಬೇಕಾಗಿದೆ. ಇನ್ನು ನಾಳೆಯಿಂದ ನಾವು ನಮ್ಮ ಕಾರ್ಯಕ್ರಮಗಳನ್ನು ಪ್ರಾರಂಭ ಮಾಡುತ್ತಿದ್ದೇವೆ. ಈಗಾಗಲೇ ಈ ಕುರಿತಂತೆ ಬೆಳಗಾವಿ ತಾಲೂಕ ಪಂಚಾತಯ ಇಓ ರವರಿಗೆ ಎಲ್ಲಾ ಪಿಡಿಓಗಳ ಸಭೆ ಕರೆಯಲು ಹೇಳಿದ್ದೇನೆ. ಇತ್ತೀಚೆಗೆ ಪಿಡಿಓಗಳು ಹೆಚ್ಚು ಕಮರ್ಶಿಯಲ್ ಆಗಿದ್ದಾರೆ. ಗ್ರಾಮೀಣ ಭಾಗದ ಅಭಿವೃದ್ಧಿ ಕಾರ್ಯಗಳಲ್ಲಿ ವಿಶ್ವಾಸ ನೀಡುತ್ತಿಲ್ಲ. ಅವರಿಗೆ ಬಿಸಿ ಮುಟ್ಟಿಸುವ ಕಾರ್ಯವನ್ನು ನಾವು ಬೆಳಗಾವಿ ತಾಲೂಕಿನಿಂದ ಪ್ರಾರಂಭ ಮಾಡುತ್ತೇವೆ ಎಂದರು.
ಇನ್ನು ಪರಿಷತ್ ಸದಸ್ಯರ ಅನುದಾನ ಹೆಚ್ಚಿಸುವ ಕುರಿತಂತೆ ಮಾತನಾಡಿದ ಅವರು, ಬೆಳಗಾವಿಯಲ್ಲಿ 18 ವಿಧಾನಸಭಾ ಕ್ಷೇತ್ರಗಳಿವೆ ಇನ್ನು ಸ್ಥಳೀಯ ಶಾಸಕರ ಅನುದಾನದಲ್ಲಿ ನಮಗೆ ಸಿಗುವ ಅನುದಾನವೇ 2ಕೋಟಿ. ಅದರಲ್ಲಿ ನಾವು ಎಲ್ಲಾ ಕ್ಷೇತ್ರಗಳಿಗೂ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಹಾಗಾಗಿ ಈ ಅನುದಾನವನ್ನು 4ಕೋಟಿ ರೂಪಾಯಿಗೆ ಹೆಚ್ಚಿಗೆ ಮಾಡುವಂತೆ ಹಿರಿಯ ಪರಿಷತ್ ಸದಸ್ಯರ ಆದಿಯಾಗಿ ಮನವಿ ಮಾಡಿದ್ದೇವೆ. ಇನ್ನು ಕಾಂಗ್ರೆಸ್ ಪಕ್ಷ ಎಲ್ಲಾ ಹಿರಿಯ ನಾಯಕರ ಮಾರ್ಗದರ್ಶನವನ್ನು ಪಡೆದಿಕೊಂಡು ಮುನ್ನಡೆಯುತ್ತೇನೆ ಎಂದರು
ಇನ್ನು ಇದೇ ವೇಳೆ ಕಾಂಗ್ರೆಸ್ ಪಾದಯಾತ್ರೆಗೆ ಬಿಜೆಪಿ ಹೇಳಿಕೆ ಪ್ರತಿಕ್ರಿಯೆ ನೀಡಿದ ಅವರು, ಈ ಪಾದಯಾತ್ರೆಯನ್ನು ಚುನಾವಣೆ ಗಿಮ್ಮಿಕ್ ಎಂದ್ರೆ ತಪ್ಪಾಗುತ್ತದೆ. ಬಿಜೆಪಿ ನಾಯಕರು ಈಗ ಅಸಹಾಯಕ ಪರೀಸ್ಥಿತಿಯಲ್ಲಿದ್ದಾರೆ. ರಾಜ್ಯದಲ್ಲಿ 25ಜನ ಲೋಕಸಭಾ ಸದಸ್ಯರನ್ನು ಹೊಂದಿದ್ದರೂ ಕೇಂದ್ರದ ನಾಯಕರನ್ನು ಮಾತನಾಡಿಸಲು ಹೆದರುತ್ತಿದ್ದಾರೆ. ಜನರು ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಹೀಗಾಗಿ 25 ಜನರನ್ನು ಸೇರಿಸಿಕೊಂಡು ಕೇಂದ್ರಕ್ಕೆ ಒಂದು ನಿಯೋಗವನ್ನು ಮಾಡಬೇಕು. ಇದರಿಂದ ಹಲವು ಜಿಲ್ಲೆಗಳ ಜನರಿಗೆ ಇದರಿಂದ ಒಳ್ಳೆಯದಾಗಲಿದೆ. ಅದನ್ನು ಬಿಟ್ಟು ಬಿಜೆಪಿ ಮೊನ್ನೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವನ್ನು ನೋಡಿ ಬಿಜೆಪಿಯವರು ಹೆದರಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಾದಯಾತ್ರೆ ಕುರಿತಂತೆ ಹಾಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಇನ್ನು ರಾಜ್ಯದಲ್ಲಿ ಎರಡು ಬಾರಿ ಪ್ರವಾಹ ಬಂದು ಮನೆ ಕಳೆದುಕೊಂಡವರಿಗೆ ಮನೆಗಳನ್ನು ಒದಗಿಸುವ ಕುರಿತಂತೆ ಮಾತನಾಇದ ಅವರು, ಬೆಳಗಾವ ಜಿಲ್ಲೆಯಲ್ಲಿ ಎರಡು ಬಾರಿ ಪ್ರವಾಹ ಬಂದು ಜನಸಾಮಾನ್ಯರ ಮನೆಗಳು ಹಾಳಾಗಿವೆ. ಹಾಗಾಗಿ ಮೊದಲು ನಮ್ಮ ಹೋರಾಟ ಸರಕಾರದ ವಿರುದ್ಧ ಜನರಿಗೆ ಮನೆ ಕೊಡಿಸುವ ನಿಟ್ಟಿಲ್ಲಿಯೇ ಇರುತ್ತದೆ.ಫಲಾನುಭವಿಗಳಿಗೆ ಅತ್ಯಂತ ಬೇಗನೇ ಮನೆ ಕೊಡಿಸುವ ನಿಟ್ಟಿನಲ್ಲಿ ಸರಕಾರಕ್ಕೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದರು.
ಇನ್ನು ಕಾಂಗ್ರೆಸ್ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಈಗ ಹೊಸ ಉತ್ಸಾಹದೊಂದಿಗೆ ತಮ್ಮ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಇನ್ನು ಈ ಕಾರ್ಯದಲ್ಲಿ ಕಾಂಗ್ರೆಸ್ ಹಿರಿಯ ನಾಯಕರು ತಮಗೆ ಸಾಥ್ ನೀಡಲಿದ್ದಾರೆ ಎಂದು ಹೇಳಿದ್ದಾರೆ. ಹೊಸ ಪರಿಷತ್ ಸದಸ್ಯರು ನಮಗೆ ಹೊಸದನ್ನೇನಾದರೂ ಮಾಡುತ್ತಾರೆ ಎನ್ನುವ ನಿರೀಕ್ಷೆಯಲ್ಲಿ ಜನತೆ ಕಾಯುತ್ತಿದ್ದರೆ. ಒಟ್ಟಾರೆ ಎಲ್ಲರಿಗೂ ಒಳ್ಳೆಯದಾದ್ರೆ ಸಾಕು ಅಂತಾ ಜನ ಕಾಯುತ್ತಿದ್ದಾರೆ.