Vijaypura

ಕೃಷಿ ಹೊಂಡದಲ್ಲಿ ನೀರು ಕುಡಿಯಲು ಹೋಗಿ ಯುವಕನ ಸಾವು

Share

ಯುವಕನೊರ್ವ ನೀರು ಕುಡಿಯಲು ಹೋದ ಯುವಕ ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ ದುರ್ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪವಾಡೆಪ್ಪಾ ಲಕ್ಷ್ಮಣ ಬಿದರಿ (27) ಮೃತ ದುರ್ದೈವಿಯಾಗಿದ್ದು ಮೂಲತಃ ಬಾಗಲಕೋಟೆ ಜಿಲ್ಲೆಯ ಬೀಳಗಿ ನಿವಾಸಿಯಾಗಿದ್ದಾನೆ. ಕುರಿ ಮೇಯಿಸಲು ಹೋದಾಗ ನೀರು ಕುಡಿಬೇಕೆಂದು ಕೃಷಿ ಹೊಂಡಕ್ಕೆ ಹೋದಾಗ ಕಾಲು ಜಾರಿ ಸಾವನ್ನಪ್ಪಿದ ಘಟನೆ ನಡೆದಿದೆ. ಸ್ಥಳಕ್ಕೆ ಬಬಲೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ದೂರು ದಾಖಲಿಸಿಕೊಂಡಿದ್ದಾರೆ.

Tags:

error: Content is protected !!