Agriculture

ಕೃಷಿ ಪರಿಕರ ಮಾರಾಟಗಾರರಿಗೆ ವಿಸ್ತರಣಾ ಸೇವೆಯ ಡಿಪ್ಲೋಮಾ ಪ್ರಮಾಣ ಪತ್ರ ವಿತರಣೆ

Share

ಕೃಷಿ ಪರಿಕರ ಮಾರಾಟಗಾರರಿಗೆ ವಿಸ್ತರಣಾ ಸೇವೆಯ ಡಿಪ್ಲೋಮಾದ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವನ್ನು ಹಾಗೂ ನೂತನ ತಂಡದ ಉದ್ಘಾಟನಾ ಸಮಾರಂಭವನ್ನು ಸಂಸದೆ ಮಂಗಲಾ ಅಂಗಡಿ ಉದ್ಘಾಟಿಸಿದರು.

ಇಂದು ಬೆಳಗಾವಿಯ ಕೃಷಿ ಸಂಕೀರ್ಣದ ಮುಖ್ಯ ಸಭಾಂಗಣದಲ್ಲಿ ಮ್ಯಾನೇಜ್ ಹೈದರಾಬಾದ್ ಸಮಿತಿ (ಉತ್ತರ) ಕೃಷಿ ವಿಶ್ವವಿದ್ಯಾಲಯ ಧಾರವಾಡ, ಕೃಷಿ ಇಲಾಖೆ ಬೆಳಗಾವಿ ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆ ಬೆಳಗಾವಿ ಘಟಕದ ಸಹಯೋಗದೊಂದಿಗೆ ನಡೆದ ಕೃಷಿ ಪರಿಕರ ಮಾರಾಟಗಾರರಿಗೆ ವಿಸ್ತರಣಾ ಸೇವೆಯ ಡಿಪೆÇ್ಲಮಾದ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವನ್ನು ಹಾಗೂ ನೂತನ ತಂಡದ ಉದ್ಘಾಟನಾ ಸಮಾರಂಭವನ್ನು ಸಂಸದೆ ಮಂಗಲಾ ಅಂಗಡಿ ಉದ್ಘಾಟಿಸಿ ಪ್ರಮಾಣ ಪತ್ರ ವಿತರಿಸಿದರು. ಈ ವೇಳೆಯಲ್ಲಿ ಮಂಗಲಾ ಅಂಗಡಿ ಪ್ರಮಾಣ ಪತ್ರ ವಿತರಿಸಿ ಆತ್ಮೀಯರಿಗೆ ಧನ್ಯವಾದಗಳನ್ನು ತಿಳಿಸಿ ಕೃಷಿ ಕ್ಷೇತ್ರದಲ್ಲಿ ಆಧುನಿಕ ಪ್ರಗತಿಯ ಬಗ್ಗೆ ಇಲಾಖೆಯವರು ಮಾಡುತ್ತಿರುವ ಕೆಲಸದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕರು ಹಾಗೂ ಅಧ್ಯಕ್ಷರಾದ ಜಿಲಾನಿ ಎಚ್ ಮೋಕಾಶಿ , ವಿಸ್ತಾರಣಾ ನಿರ್ದೇಶಕರು ಮತ್ತು ಕೃಷಿ ವಿಶ್ವವಿದ್ಯಾಲಯ ನಿರ್ದೇಶಕರಾದ ಡಾ.ಬಾಲಚಂದ್ರ ನಾಯ್ಕ, ರಾಜ್ಯ ನೋಡಲ್ ಅಧಿಕಾರಿ ಹಾಗೂ ಕೃಷಿ ವಿ.ವಿ ಯ ಸಂಯೋಜಕರಾದ ಡಾ.ಎಮ್ ಗೋಪಾಲ್, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶಿವನಗೌಡ ಪಾಟೀಲ, ಎಚ್ ಡಿ ಕೊಳೆಕರ, ಎಲ್ ಐ ರೂಡಗಿ ಸೇರಿದಂತೆ ಎಲ್ಲ ಆಡಳಿತ ಮಂಡಳಿಯ ಸದಸ್ಯರು ಸಿಬ್ಬಂದಿಗಳು ಉಪಸ್ಥಿತರಿದ್ದರು.

Tags:

error: Content is protected !!