Belagavi

ಕುಂದಾನಗರಿಯಲ್ಲಿ ನೈಟ್-ವೀಕೆಂಡ್ ಕಫ್ರ್ಯೂದಲ್ಲಿಯೇ ಸೊಸೈಟಿಯಲ್ಲಿ ಖದೀಮರ ಕೈಚಳಕ

Share

ವೀಕೆಂಡ್ ಮತ್ತು ನೈಟ್ ಕಫ್ರ್ಯೂವನ್ನೇ ಬಂಡವಾಳ ಮಾಡಿಕೊಂಡ ಖದೀಮರು ಸೊಸೈಟಿಗೆ ಕನ್ನ ಹಾಕಿರುವ ಘಟನೆ ಬೆಳಗಾವಿ ನಗರದಲ್ಲಿ ಕಂಡು ಬಂದಿದೆ.

ಹೌದು ದಿನದಿಂದ ದಿನಕ್ಕೆ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಾಜ್ಯಾಧ್ಯಂತ ವೀಕೆಂಡ್ ಕಫ್ರ್ಯೂ ಮತ್ತು ನೈಟ್ ಕಫ್ರ್ಯೂ ಆದೇಶ ಹೊರಡಿಸಿದೆ. ಈ ವೇಳೆ ಪೊಲೀಸರು ನಗರದ ಗಲ್ಲಿ ಗಲ್ಲಿಯಲ್ಲಿ ಸರ್ಪಗಾವಲು ಹಾಕಿದ್ದಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ಶುಕ್ರವಾರ ಮಧ್ಯರಾತ್ರಿ ಪೊಲೀಸರ ಕಣ್ಣು ತಪ್ಪಿಸಿ, ಗಣಪತ ಗಲ್ಲಿಯ ಮಹಿಳಾ ಆಘಾಡಿ ಕೋ ಆಪ್ ಸೊಸೈಟಿಯಲ್ಲಿ ಇರುವ ದೊಡ್ಡದಾದ ಕಿಡಕಿ ಮೂಲಕ ಒಳ ನುಗ್ಗಿ ಕಳ್ಳತನ ಮಾಡಿದ್ದಾರೆ. ಈ ವೇಳೆ ಕಳ್ಳರು 30 ಸಾವಿರ ರೂಪಾಯಿ ನಗದು ಎಗರಿಸಿಕೊಂಡು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಮಾರ್ಕೆಟ್ ಠಾಣೆ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೊಸೈಟಿ ಅಧ್ಯಕ್ಷೆ ರೇಣು ಕಿಲ್ಲೇಕರ್ ಅವರಿಂದ ಮಾಹಿತಿಯನ್ನು ಪಡೆದುಕೊಂಡರು.
ಒಟ್ಟಿನಲ್ಲಿ ಬೆಳಗಾವಿಯ ಗಲ್ಲಿ ಗಲ್ಲಿಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರೂ ನಗರದ ಕೇಂದ್ರ ಭಾಗದಲ್ಲಿಯ ಸೊಸೈಟಿಯಲ್ಲಿ ಕಳ್ಳರು ಕಳ್ಳತನ ಮಾಡಿದ್ದು ಸಧ್ಯ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಪೊಲೀಸರ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ಹೊರ ಹಾಕಿದ್ದು, ಆದಷ್ಟು ಬೇಗನೇ ಕಳ್ಳರನ್ನು ಪತ್ತೆ ಹಚ್ಚುವಂತೆ ಆಗ್ರಹಿಸುತ್ತಿದ್ದಾರೆ.

 

Tags:

error: Content is protected !!