ಕುಂದಾನಗರಿ ಬೆಳಗಾವಿ ನಗರದಲ್ಲಿ ನೀರಿಗಾಗಿ ಹಾಹಾಕಾರ. ವಾಲ್ಮನ್‍ಗಳ ಪ್ರತಿಭಟನೆಯಿಂದ ಆಜಾದ್ ನಗರದ ನಿವಾಸಿಗಳಿಗೆ ಕಳೆದ 11ದಿನಗಳಿಂದ ನೀರು ಬಾರದ ಕಾರಣ ಆಜಾದ್ ನಗರ ನಿವಾಸಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಬೆಳಗಾವಿಯ ಆಜಾದ್ ನಗರದಲ್ಲಿ ಕಳೆದ 12ದಿನಗಳಿಂದ ನೀರುಬಂದಿಲ್ಲ. ವಾಲ್ಮನ್‍ಗಳು ನಡೆಸಿದ ಸ್ಟ್ರೈಕ್‍ನಿಂದ ನೀರು ಸರಬುರಾಜಲ್ಲಿ ವ್ಯತ್ಯಯವಾಗುತ್ತಿದೆ. ಹಾಗಾಗಿ ಆಜಾದ್ ನಗರದ ನಿವಾಸಿಗಳಿಗೆ ಕಳೆದ 11ದಿನಗಳಿಂದ ನೀರು ಬಾರದೇ ಕಂಗಾಲಾಗಿದ್ದಾರೆ. ಇನ್ನು ಮಹಿಳೆಯರು ಮಕ್ಕಳು ಎನ್ನದೇ ಎಲ್ಲರೂ ನಗರದ ಅಶೋಕ್ ಸರ್ಕಲ್‍ನಲ್ಲಿ ರಸ್ತೆ ತಡೆ ನಡೆಸಿದ ಆಜಾದ್‍ನಗರ ನಿವಾಸಿಗಳು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
https://www.facebook.com/innewsbelgaum/videos/452718809663728