ಮಹಾಮಾರಿ ಕೊರೊನಾ, ವಿದೇಶಿ ತಳಿ ಒಮಿಕ್ರಾನ್‍ಗೆ ಬ್ರೇಕ್ ಹಾಕುವ ಉದ್ದೇಶದಿಂದ ಸರ್ಕಾರ ನೈಟ್ ಕಫ್ರ್ಯೂ, ವೀಕೆಂಡ್ ಕಫ್ರ್ಯೂ ಜಾರಿಗೊಳಿಸಿದೆ. ಆದರೆ ಈ ನಿಯಮಕ್ಕೆ ಕುಂದಾನಗರಿ ಬೆಳಗಾವಿಯಲ್ಲಿ ಜನ ಮಾತ್ರ ಡೋಂಟ್ ಕೇರ್ ಎಂದಿದ್ದಾರೆ.

ಹೌದು ಬೆಳಗಾವಿಯ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಅಂಗಡಿ ಮುಂಗಟ್ಟು ಮಾತ್ರ ಬಂದ್ ಆಗಿವೆ. ಆದರೆ ಜನ ಮತ್ತು ವಾಹನಗಳ ಓಡಾಟ ಕಂಡು ಎಂದಿನಂತೆ ಕಂಡು ಬಂದಿದೆ. ಇದರಿಂದ ಕುಂದಾನಗರಿ ಜನ ವೀಕೆಂಡ್ ಕಫ್ರ್ಯೂಗೆ ಒಳ್ಳೆಯ ಪ್ರತಿಕ್ರಿಯೆ ನೀಡಿಲ್ಲ ಅಂತಾನೇ ಹೇಳಬಹುದು. ಯಾಕೆಂದರೆ ಪೊಲೀಸರು ಪ್ರತಿಯೊಂದು ವಾಹನಗಳನ್ನು ತಡೆದು ಪರಿಶೀಲನೆ ನಡೆಸುತ್ತಿದ್ದಾರೆ.
ಆದರೆ ಜನ ಮಾತ್ರ ನಾವು ಆಸ್ಪತ್ರೆ, ಮೆಡಿಕಲ್ ಶಾಪ್‍ಗೆ ಹೋಗುತ್ತಿದ್ದೇವೆ ಎಂಬ ಸಬೂಬು ಹೇಳಿ ಓಡಾಡುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಮೊದಲೇ ಕೊರೊನಾ ದಿನದಿಂದ ದಿನಕ್ಕೆ ರಾಜ್ಯ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ವೇಗವಾಗಿ ಹರಡುತ್ತಿದೆ. ಆದರೂ ಕೂಡ ನಮ್ಮ ಜನರಿಗೆ ಅದರ ಗಂಭೀರತೆ ಇನ್ನು ಅರ್ಥ ಆಗದೇ ಇರುವುದು ದೊಡ್ಡ ವಿಪರ್ಯಾಸವೇ ಸರಿ.