COVID-19

ಕಿತ್ತೂರು ಸೈನಿಕ ಶಾಲೆಯಲ್ಲಿ ಕೊರೊನಾ ಹೆಚ್ಚಾಗಲು ಆಡಳಿತ ಮಂಡಳಿ ಕಾರಣ: ಪೋಷಕರ ಆಕ್ರೋಶ

Share

ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆಯಲ್ಲಿ ಕೊರೊನಾ ಮತ್ತೆ ಸ್ಫೋಟವಾಗಿದ್ದು. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸೇರಿ ಒಟ್ಟು 148 ಜನರಿಗೆ ವಕ್ಕರಿಸಿಕೊಂಡಿದೆ. ಇನ್ನು ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಸೋಂಕು ವ್ಯಾಪಿಸಿದೆ ಎಂಬ ಆರೋಪ ಕೇಳಿ ಬಂದಿದೆ.

ಹೌದು ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆ ಕೊರೊನಾ ಹಾಟ್‍ಸ್ಪಾಟ್ ಆಗ್ತಿದೆಯಾ ಎಂದ ಅನುಮಾನ ಮೂಡುತ್ತಿದೆ. ಮೊದಲು ವಸತಿ ಶಾಲೆಯ 12 ವಿದ್ಯಾರ್ಥಿನಿಯರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ಹಂತ ಹಂತವಾಗಿ ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಕಳೆದ 5 ದಿನಗಳಲ್ಲಿ ಬಾಲಕಿಯರ ವಸತಿ ಶಾಲೆಯಲ್ಲಿ 148 ಕೋವಿಡ್ ಕೇಸ್ ದಾಖಲಾಗಿದೆ. ಶಾಲಾ ಆಡಳಿತ ಮಂಡಳಿಯವರು ಕೋವಿಡ್ ರೂಲ್ಸ್ ಗಾಳಿಗೆ ತೂರಿ ಸೋಂಕಿತ ವಿದ್ಯಾರ್ಥಿಗಳನ್ನು ಪೆÇೀಷಕರ ಜೊತೆ ಕಳಿಸಿರುವ ಆರೋಪ ಕೇಳಿ ಬಂದಿದೆ.

ಇನ್ನು ಕೋವಿಡ್ ರೂಲ್ಸ್ ಬ್ರೇಕ್ ಮಾಡಿದರೂ ಶಾಲಾ ಆಡಳಿತ ಮಂಡಳಿ ಬೆಂಬಲಕ್ಕೆ ತಹಶಿಲ್ದಾರ್ ಸೋಮಲಿಂಗಪ್ಪ ಹಲಗಿ ನಿಂತಿದ್ದಾರೆ ಎನ್ನಲಾಗುತ್ತಿದೆ. ಕೋವಿಡ್ ಪಾಸಿಟಿವ್, ನೆಗೆಟಿವ್ ಬಂದ ವಿದ್ಯಾರ್ಥಿನಿಯರನ್ನೆಲ್ಲಾ ಒಂದೇ ಕಡೆ ಇರಿಸಿದ್ದಾರೆ. ಶಾಲಾ ಆಡಳಿತ ಮಂಡಳಿ ನಿರ್ಲಕ್ಷ್ಯದಿಂದಲೇ ಕೋವಿಡ್ ಸೋಂಕು ವ್ಯಾಪಿಸಿದೆ. ರಿಪೆÇೀರ್ಟ್ ಬರುವ ಮುನ್ನವೇ ವಿದ್ಯಾರ್ಥಿನಿಯರನ್ನು ಪೋಷಕರ ಜೊತೆಗೆ ಮನೆಗೆ ಕಳಿಸಿದ್ದಾರೆ. ಪೆÇೀಷಕರ ಬಳಿ ಪತ್ರ ಬರೆಸಿಕೊಂಡು ಸೋಂಕಿತರನ್ನು ಮನೆಗೆ ಕಳಿಸಿದ್ದಾರೆ. ಸೋಂಕಿತ ವಿದ್ಯಾರ್ಥಿಗಳು ತೆರಳಿದಲ್ಲೆಲ್ಲಾ ಸೋಂಕು ವ್ಯಾಪಿಸುವ ಭೀತಿಯಿದೆ ಎಂದು ಶಾಲಾ ಆಡಳಿತ ಮಂಡಳಿ ವಿರುದ್ಧ ಪೆÇೀಷಕ ಶಿವಕುಮಾರ್ ಹಿರೇಮಠ ಆಕ್ರೋಶ ಹೊರ ಹಾಕಿದ್ದಾರೆ.

ಇನ್ನು ಪೆÇೀಷಕರ ಆರೋಪವನ್ನು ತಹಶಿಲ್ದಾರ್ ಸೋಮಲಿಂಗಪ್ಪ ಹಲಗಿ ಅಲ್ಲಗಳೆದಿದ್ದಾರೆ. ಸೋಂಕಿತ ವಿದ್ಯಾರ್ಥಿನಿಯರಿಗೆ ಇರಲು ಪ್ರತ್ಯೇಕ ವ್ಯವಸ್ಥೆ ಮಾಡಿದ್ದಾರೆ.35 ಸೋಂಕಿತ ವಿದ್ಯಾರ್ಥಿನಿಯರನ್ನು ಪೆÇೀಷಕರ ಜೊತೆ ಕಳಿಸಿಕೊಟ್ಟಿದ್ದಾರೆ. ಪೆÇೀಷಕರ ಒತ್ತಾಯ ಮೇರೆಗೆ ಪತ್ರ ಬರೆಸಿಕೊಂಡು ಕಳಿಸಿಕೊಡಲಾಗಿದೆ. 7ನೇ ತರಗತಿಯಿಂದ 12ನೇ ತರಗತಿವರೆಗೆ ಒಟ್ಟು 723 ವಿದ್ಯಾರ್ಥಿಗಳಿದ್ರು. ಅದರಲ್ಲಿ 7 ರಿಂದ 9ನೇ ತರಗತಿಯ 431 ವಿದ್ಯಾರ್ಥಿಗಳಿದ್ರು. 9ನೇ ತರಗತಿವರೆಗೆ ರಜೆ ಹಿನ್ನೆಲೆ 431 ವಿದ್ಯಾರ್ಥಿಗಳು ಮನೆಗೆ ತೆರಳಿದ್ದಾರೆ. ಪಾಸಿಟಿವ್ ಬಂದವರನ್ನು ಬಿಟ್ಟು ಉಳಿದ ವಿದ್ಯಾರ್ಥಿಗಳು ಹೋಗಿದ್ದಾರೆ. ಸದ್ಯ 77 ಕೋವಿಡ್ ಪಾಸಿಟಿವ್ ವಿದ್ಯಾರ್ಥಿಗಳು ಶಾಲೆಯಲ್ಲಿದ್ದಾರೆ. ಉಳಿದ 215 ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಕ್ಯಾಂಪಸ್‍ನಲ್ಲಿದ್ದಾರೆ. ವಸತಿ ಶಾಲೆಯ ಒಟ್ಟು 136 ಜನರಿಗೆ ಕೋವಿಡ್ ಸೋಂಕು ತಗುಲಿದೆ. 77 ವಿದ್ಯಾರ್ಥಿಗಳು, 12 ಬೋಧಕ, 12 ಬೋಧಕೇತರ ಸಿಬ್ಬಂದಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಕೆಲವು ಪೆÇೀಷಕರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಕೆಲವರು ಹೋಮ್ ಐಸೊಲೇಷನ್‍ನಲ್ಲಿ ಇರುತ್ತೇವೆ ಅಂತಾ ಕರೆದುಕೊಂಡು ಹೋಗಿದ್ದಾರೆ. ಸೋಂಕಿತ ವಿದ್ಯಾರ್ಥಿನಿಯರನ್ನ ಮನೆಗೆ ಕಳಿಸಿದ್ದು ಇಂದೇ ನನಗೆ ಗೊತ್ತಾಗಿದ್ದು ಎಂದಿದ್ದಾರೆ.

ಒಟ್ಟಿನಲ್ಲಿ ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆಯಲ್ಲಿ ಕೊರೊನಾ ಹೆಚ್ಚಾಗಲು ಆಡಳಿತ ಮಂಡಳಿಯವರೇ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಆದರೆ ಈ ಆರೋಪವನ್ನು ತಹಶೀಲ್ದಾರ್ ಅಲ್ಲಗಳೆದಿದ್ದಾರೆ. ಮತ್ತಷ್ಟು ಸೋಂಕು ಹೆಚ್ಚಾಗದಂತೆ ತಾಲೂಕಾಡಳಿತ ಮತ್ತು ಶಾಲೆ ಆಡಳಿತ ಮಂಡಳಿ ಕ್ರಮ ಕೈಗೊಳ್ಳುವ ಅವಶ್ಯಕತೆಯಿದೆ.

 

 

 

 

Tags:

error: Content is protected !!