ಮೈ ಕೊರೆಯುವ ಚಳಿಗೆ ಕುಂದಾನಗರಿ ಜನ ಥಂಡಾ ಹೊಡೆದಿದ್ದಾರೆ. ಸೂರ್ಯ ಮುಳುಗುತ್ತಿದ್ದಂತೆಯೇ ಚಳಿರಾಯನ ಆರ್ಭಟ ಶುರುವಾಗುತ್ತಿದೆ. ಹೀಗಾಗಿ ಸಂಜೆಯಾಗುತ್ತಿದ್ದಂತೆ ಬೆಚ್ಚಗೆ ಇರೋಣ ಎಂದು ಜನ ಮನೆ ಸೇರಿಕೊಳ್ಳುತ್ತಿದ್ದಾರೆ.

ಹೌದು ನೀವು ನೋಡುತ್ತಿರುವ ಈ ದೃಶ್ಯ ಕಾಶ್ಮೀರದ ಕಣಿವೆಯಲ್ಲಿನ ದೃಶ್ಯ ಅಂದುಕೊಂಡರೆ, ನಿಮ್ಮ ಉಹೆ ತಪ್ಪು. ಯಾಕೆಂದರೆ ಇದು ನಮ್ಮ ಬೆಳಗಾವಿಯಲ್ಲಿನ ಚುಮು ಚುಮು ಚಳಿಯ ದೃಶ್ಯ. ಬೆಳಿಗ್ಗೆ ಸೂರ್ಯ ಉದಯವಾಗುವ ಮೊದಲು ಮನೆಯಿಂದ ಹೊರಗೆ ಬಂದ್ರೆ, ಪಕ್ಕದ ಮನೆ ಕಾಣಿಸುವದೇ ಇಲ್ಲ, ಯಾಕಂದ್ರೆ ಎಲ್ಲಿ ನೋಡಿದಲ್ಲಿ ದಟ್ಟವಾದ ಮಂಜು ಕಾಣಿಸುತ್ತದೆ, ಬೆಳಗಿನ ವಾತಾವರಣ ನೋಡಿದ್ರೆ ಈ ವರ್ಷದ ಚಳಿ ಮತ್ತು ದಟ್ಟವಾದ ಮಂಜು ಕುಂದಾನಗರಿ ಬೆಳಗಾವಿಗೆ ಕಾಶ್ಮೀರದ ರೂಪ ಕೊಟ್ಟಿದೆ ಅಂತಾನೇ ಹೇಳಬಹುದು.
ಬೆಳಗಾವಿಯಲ್ಲಿನ ಚಳಿಗೆ ಜನ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಕಳೆದೆರಡು ದಿನಗಳಿಂದ 10 ಡಿಗ್ರಿ ಸೆಲಸಿಯ್ಸ್ ಇದ್ದ ತಾಪಮಾನ ಇದೀಗ 8 ಡಿಗ್ರಿ ಸೆಲ್ಸಿಯಸ್‍ಗೆ ಇಳಿಕೆ ಆಗಿದೆ. ಕುಂದಾನಗರಿಯಲ್ಲಿ ಬಹುತೇಕ ಶೀತ ಚಳಿ ಇರುವ ವಾತಾವರಣ ಹಿನ್ನಲೆಯಲ್ಲಿ ಅಲ್ಲಲ್ಲಿ ಜನ ಫೈರ್ ಕ್ಯಾಂಪ್ ಹಾಕಿ ಚಳಿ ಕಾಯಿಸುತ್ತಿದ್ದಾರೆ. ಇನ್ನೂ ಮಧ್ಯರಾತ್ರಿಯಿಂದ ಬೆಳಗಿನ ಜಾವಾ 8 ಗಂಟೆಗೆವರೆಗೂ ದಟ್ಟನೆಯ ಮಂಜು ಕವಿದ ವಾತಾವರಣ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಇನ್ನು ಹತ್ತು 10 ನಂತರ ಇμÉ್ಟೂಂದು ಪ್ರಮಾಣದ ಚಳಿ ಕುಂದಾನಗರಿಯಲ್ಲಿ ದಾಖಲಾಗಿದೆ. ಇನ್ನಷ್ಟು ತಾಪಮಾನ ಇಳಿಕೆ ಕಾಣಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ ಹಿನ್ನಲೆಯಲ್ಲಿ ಕುಂದಾನಗರಿ ಜನತೆ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.
ಇನ್ನೂ ವಾತಾವಾರಣದಲ್ಲಿ ಏಕಾಏಕಿ ಆಗಿರುವ ಬದಲಾವಣೆಯಿಂದ ಜನರ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬಿರುತ್ತಿದೆ. ಹೃದಯದ ಹಾಗೂ ಶ್ವಾಸಕೋಶ ಸಂಬಂಧಿ ರೋಗಗಳಿರುವ ಜನರು ಹೆಚ್ಚಿನ ಮುಂಜಾಗ್ರತೆಯಲ್ಲಿ ಇರಬೇಕೆಂದು ಆರೋಗ್ಯ ಇಲಾಖೆ ಸೂಚಿಸಿದೆ. ಚಳಿ ಹಾಗೂ ಶೀತದ ವಾತಾವರಣ ಇರುವುದರಿಂದ ಬೆಚ್ಚನೆಯ ಉಡುಪುಗಳು ಹಾಗೂ ಸಾಮಾಜಿಕ ಅಂತರ, ಮಾಸ್ಕ್ ಹಾಕಬೇಕು. ಇಲ್ಲದಿದ್ರೆ ಕೊರೊನಾ ಉಲ್ಬಣವಾಗುವ ಸ್ಥಿತಿ ನಿರ್ಮಾಣ ಆಗಲಿದೆ. ಈಗಾಗಲೇ ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಮಹಾಮಾರಿ ಕೊರೊನಾ ತಾಂಡವವಾಡುತ್ತಿದೆ.
ಇನ್ನು ಬೆಳಗಾವಿ ಜಿಲ್ಲೆಯಲ್ಲಿಯೂ ಕೂಡ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಲ್ಲದೇ ಬರುವ ಮೂರು ದಿನಗಳಲ್ಲಿ ತಾಪಮಾನದಲ್ಲಿ ಮತ್ತಷ್ಟು ಇಳಿಕೆ ಆಗಲಿದೆ ಎಂದು ಹವಾಮಾನ ಇಲಾಖೆ ಅವರು ಎಚ್ಚರಿಸಿದ್ದು, ಆದಷ್ಟು ಎಲ್ಲರೂ ಬೆಚ್ಚಗೆ ಮನೆಯಲ್ಲಿದ್ದು, ಬೆಚ್ಚನೆಯ ಆಹಾರ ಸೇವಿಸಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕಿದೆ.