ಬೆಳಗಾವಿಯ ಹುತಾತ್ಮ ಚೌಕ ಬಳಿ ಆಕಸ್ಮಿಕವಾಗಿ ಸೋಮವಾರ ರಾತ್ರಿ ಬೆಂಕಿ ತಗುಲಿದ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಕಾವೇರಿ ಕೋಲ್ಡ್ ಡ್ರಿಂಕ್ಸ್ ಬಳಿ ಇರುವ ಖಾಲಿ ಜಾಗೆಯಲ್ಲಿ ಜನರು ಕಸ ಸುರಿಯುವುದು ಸರ್ವೇ ಸಾಮಾನ್ಯ. ಈ ಕಸಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ಒಟ್ಟಿನಲ್ಲಿ ಇಲ್ಲಿ ಪದೇ ಪದೇ ಬೆಂಕಿ ಪ್ರಕರಣ ಕೇಳಿ ಬರುತ್ತಿರುವುದರಿಂದ ಸಿಸಿಕ್ಯಾಮರಾ ಅಳವಡಿಸಿ ಯಾರು ಬೆಂಕಿ ಹಚ್ಚಿದ್ದಾರೆ ಅವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.