COVID-19

ಕಾಗವಾಡ ತಾಲೂಕಿನಲ್ಲಿ ವೀಕೆಂಡ್ ಕರ್ಫ್ಯೂ ಸಂಪೂರ್ಣ ಯಶಸ್ವಿ

Share

ಕೋವಿಡ್ ಮುರನೇ ಅಲೆ ಹಾಗೂ ಓಮಿಕ್ರಾನ್ ನಿಯಂತ್ರಣಕ್ಕಾಗಿ ರಾಜ್ಯ ಸರಕಾರ ಘೋಷಿಸಿರುವ ವಾರಾತ್ಯಂತದ ಲಾಕ್ ಡೌನ್ ಗಡಿ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನಲ್ಲಿ ಪರಿಣಾಮಕಾರಿ ಬೆಂಬಲ ವ್ಯಕ್ತವಾಗಿದ್ದು ವಾಣಿಜ್ಯ ವಹಿವಾಟುಗಳು ಸಂಪೂರ್ಣ ಸ್ಥಗಿತಗೊಂಡಿವೆ.

ಶುಕ್ರವಾರ ರಾತ್ರಿ 9 ಗಂಟೆಯಿಂದಲೇ ವಾರಾಂತ್ಯದ ಲಾಕ್ ಡೌನ್ ಜಾರಿ ಇದ್ದು, ಜನರ ಓಡಾಟ ನಿಭರ್ಂಧಿಸಲಾಗಿದೆ. ನೆರೆಯ ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವದರಿಂದ ಜನರೂ ಕೂಡ ಭಯ ಭೀತರಾಗಿದ್ದು ಮನೆಯಿಂದ ಹೊರಗೆ ಬರುತ್ತಿಲ್ಲ. ಇಂದು ಶನಿವಾರ ಬೆಳಿಗ್ಗೆಯಿಂದ 10 ಗಂಟೆಯವರೆಗೆ ಮಂಜು ಆವರಿಸಿದ್ದು, ಜನರು ಮನೆಯಿಂದ ಹೊರ ಬಾದರೆ ಮನೆಯಲ್ಲಿಯೇ ಇದ್ದು ವಿಕೆಂಡ್ ಲಾಕ್ ಡೌನ್‍ಗೆ ಸಹಕಾರ ನೀಡಿದರು.

ಈ ವೇಳೆ ಕಾಗವಾಡ ತಾಲೂಕಿನ ಐನಾಪುರ ಪಟ್ಟಣ ಪಂಚಾಯತಿಯ ಸದಸ್ಯ ಅರುಣ ಗಾಣಿಗೇರ ಮಾತನಾಡಿ, ಸರಕಾರದ ಆದೇಶದಂತೆ ಪಟ್ಟಣದಲ್ಲಿ ಜನರು ಎಲ್ಲ ಅಂಗಡಿ ಮುಗ್ಗಟ್ಟುಗಳು ಬಂದ್ ಮಾಡಿ ಸಹಕಾರ ನೀಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೊವಿಡ್ ಮೊದಲನೇ ಮತ್ತು ಎರಡನೇ ಅಲೆಯಲ್ಲಿ ಎಲ್ಲ ಜನರು ಲಾಕ್ ಡೌನ್‍ಗೆ ಸಿಲುಕಿ ಆರ್ಥಿಕ ಮತ್ತು ಮಾನಿಸಿಕ ಸಂಕಟ ಎದುರಿಸಿದ್ದಾರೆ. ಈಗ ಜನರು ಬಹಳಷ್ಟು ಆರ್ಥಿಕ ತೊಂದರೆಯಲ್ಲಿದ್ದಾರೆ. ಅಷ್ಟರಲ್ಲಿ ಈಗ ಮತ್ತೇ ವಿಕೆಂಡ್ ಲಾಕ್ ಡೌನ್ ಘೋಷಣೆ ಮಾಡಿರುವದರಿಂದ ಜನರು ರೊಚ್ಚಿಗೆದ್ದಿದ್ದು, ನಾವು ಬದುಕಬೇಕೋ ಬೇಡೋ ಎಂದು ಪ್ರಶ್ನಿಸುತ್ತಿದ್ದಾರೆ.
ಕೊರೊನಾ ಮುರನೇ ಅಲೆ ಪ್ರಾರಂಭಗೊಂಡಿದೆ. ಬೆಂಗಳೂರಂಥಹ ಹೈಟೆಕ್ ಸಿಟಿಗಳಲ್ಲಿ ಲಾಕ್ ಡೌನ್ ಮಾಡಿದ್ದು ಸರಿ. ಕಾಗವಾಡ ತಾಲೂಕಿನಲ್ಲಿ ಒಬ್ಬ ಕೋವಿಡ್ ರೋಗಿ ಇಲ್ಲ. ಇಲ್ಲಿ ಲಾಕ್ ಡೌನ್ ಮಾಡಿರುವದರಿಂದ ಜನರಿಗೆ ತೊಂದರೆಯುಂಟಾಗುತ್ತಿದೆ ಎಂದರು.

ಇನ್ನು ಈಗಾಗಲೇ ಸರಕಾರ ಕೊವಿಡ್ ತಡೆಯುವ ನಿಟ್ಟಿನಲ್ಲಿ ವೀಕೆಂಡ್ ಕಫ್ರ್ಯೂ ನಂಥ ಕ್ರಮಗಳನ್ನು ತೆಗೆದುಕೊಂಡಿದೆ. ಇನ್ನು ಸಾರ್ವಜನಿಕರು ಕೊರೊನಾ ಹರಡದಂತೆ ಸರಕಾರಕ್ಕ ಸಹಕಾರ ನೀಡಬೇಕೆಂದು ಮನವಿ ಮಾಡಲಾಗಿದೆ.

Tags:

error: Content is protected !!