ಪ್ರಧಾನಿ ನಮೋಗೆ ಭದ್ರತೆ ಒದಗಿಸಲು ಪಂಜಾಬ ಸರ್ಕಾರ ಲೋಪವೆಸಗಿದ್ದನ್ನು ಖಂಡಿಸಿ ವಿಜಯಪೂರ ನಗರದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಪಂಜಾಬ್ ಸಿಎಂ ಚರಣ್ ಸಿಂಗ್ ಚಿನ್ನಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪಂಜಿನ ಮೆರವಣಿಗೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಪಂಜಾಬಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಗಮನದ ವೇಳೆ ಪಂಜಾಬ್ ಕಾಂಗ್ರೆಸ್ ಸರ್ಕಾರ ನಿನ್ನೆ ಮಾಡಿದ ಭದ್ರತಾ ವೈಫಲ್ಯವನ್ನು ಖಂಡಿಸಿದರು. ವಿಜಯಪುರ ನಗರದಲ್ಲಿರುವ ಶಿವಾಜಿ ಮಹಾರಾಜರ ವೃತ್ತದಲ್ಲಿ ಪಂಜಿನ ಮೆರವಣಿಗೆ ನಡೆಸಿದರು. ಪ್ರತಿಭಟನೆ ಮೂಲಕ ಪಂಜಾಬ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಇನ್ನೂ ಇದೇ ವೇಳೆ ಸೋನಿಯಾಗಾಂಧಿ, ಡಿಕೆ ಸುರೇಶ, ಸಿದ್ದರಾಮಯ್ಯ, ಜಮೀರ್ ಅಹ್ಮದ್ ಭಾವಚಿತ್ರ ಹಿಡಿದು ಪ್ರತಿಭಟನೆ ನಡೆಸುದ ಬಳಿಕ ಭಾವಚಿತ್ರಳಿಗೆ ಬೆಂಕಿ ಹಾಕಿದರು. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬಿಜೆಪಿ ಪ್ರಮುಖರಾದ ಪ್ರಕಾಶ ಅಕ್ಕಲಕೋಟ, ಮಲ್ಲ ಜೇವೂರ, ಮಳುಗೌಡ ಪಾಟೀಲ, ಸತೀಶ ಪಾಟೀಲ, ವಿಠ್ಠಲ ನಡುವಿನಕೇರಿ, ಶಿವರುದ್ರ ಬಾಗಲಕೋಟ, ಡಾ.ಸುರೇಶ ಬಿರಾದಾರ ಸೇರಿದಂತೆ ಹಲವರು ಭಾಗಿಯಾಗಿದ್ದರು.