ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಲ್ಲೆಹೋಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಒಂದು ಸ್ಮಾರ್ಟ್ ಕ್ಲಾಸ್ ಹಾಗೂ ಎರಡು ಹೆಚ್ಚುವರಿ ಕೊಠಡಿಗಳನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಉದ್ಘಾಟಿಸಿದರು.

ಸೋಮವಾರ ಸ್ಮಾರ್ಟ್ ಕ್ಲಾಸ್ ಹಾಗೂ ಎರಡು ಹೆಚ್ಚುವರಿ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗ್ರಾಮೀಣ ಭಾಗದ ಶಾಲೆಗಳ ಸುಧಾರಣೆಗೆ, ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಎಲ್ಲರ ಸಹಕಾರದೊಂದಿಗೆ ಪ್ರತಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಗಳ ನಿರ್ಮಾಣ ಮಾಡಲಾಗುತ್ತಿದೆ. ಯಾವುದೇ ಮಕ್ಕಳು ವಿದ್ಯೆಯಿಂದ ವಂಚಿತವಾಗಬಾರದು. ಅದಕ್ಕಾಗಿ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಡಲಾಗುತ್ತಿದೆ ಎಂದರು.
ಇನ್ನು ಬೆಳಗಾವಿ ರಾಜ್ಯದ ಎರಡನೇ ರಾಜಧಾನಿ ಎನ್ನುತ್ತೇವೆ. ಆದರೆ ಬೆಳಗಾವಿ ನಗರಕ್ಕೆ ಹೊಂದಿಕೊಂಡಂತೇ ಇರುವ ಗ್ರಾಮೀಣ ಕ್ಷೇತ್ರ ಮಾತ್ರ ಹಲವು ವರ್ಷಗಳಿಂದ ಹಿಂದುಳಿದ ಕ್ಷೇತ್ರವಾಗಿಯೇ ಇತ್ತು. ಕಳೆದ 4 ವರ್ಷದಲ್ಲಿ ಪ್ರವಾಹ ಮತ್ತು ಕೊರೊನಾ ಮಧ್ಯೆಯೂ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಎಲ್ಲರ ಸಹಕಾರದಿಂದ ಮುಂದಿನ ದಿನಗಳಲ್ಲಿ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ, ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ಮಾಡಲಾಗುವುದು ಲಕ್ಷ್ಮೀ ಹೆಬ್ಬಾಳ್ಕರ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಿಇಓ ರುದ್ರಗೌಡ ಜುಟ್ಟನವರ, ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷ, ಸರ್ವಸದಸ್ಯರು, ವೈ ಜಿ ದೇಕೋಲ್ಕರ್, ಮಲ್ಲಪ್ಪ ಪಾಟೀಲ, ಬಸು ಪಾಟೀಲ, ಮಾರುತಿ ಪಾಟೀಲ, ಶಿವಾಜಿ ಪಾಟೀಲ, ಮದನ ಬಿಜಗರಣಿಕರ್, ಭುಜಂಗ ಸಾವಗಾಂವ್ಕರ್, ನಾರಾಯಣ ಪಾಟೀಲ, ಜೀವನ್ ಪಾಟೀಲ, ಪರುಶರಾಮ ಪಾಟೀಲ, ಬಾಳು ಕೇಸರಕರ್, ಬಾಹುರಾವ್ ಗಡ್ಕರಿ, ಯಲ್ಲಪ್ಪ ಬೆಳಗಾಂವ್ಕರ್, ಮಹೇಶ ಪಾಟೀಲ, ಮನೋಹರ್ ಕಿತ್ತೂರ್, ದೇವಪ್ಪ ಚೌಗುಲೆ, ಬಾಗಣ್ಣ ನರೋಟಿ, ಯಲ್ಲಪ್ಪ ಕಲಕಾಂಬ್ಕರ್, ಅಶ್ವಿನಿ ಕನ್ನುರಕರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೀಣಾ, ಭಾಸ್ಕರ್, ಪಾಂಡು ದೇವರಮನಿ, ಮೀಲಿಂದ್ ಕಿತ್ತೂರ, ಎಲ್ ಎನ್ ಪಾಟೀಲ, ಗ್ರಾಮದ ಜನರು, ಶಾಲಾ ಸಿಬ್ಬಂದಿವವರ್ಗ, ಶಾಲೆಯ ಮಕ್ಕಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.