ಕೋವಿಡ್ ಹೊಡೆತಕ್ಕೆ ರಂಗಭೂಮಿ ಕಲಾವಿದರು ಅಕ್ಷರಶಃ ನಲುಗಿ ಹೋಗಿದ್ದಾರೆ. ಕೊರೋನಾ ಕಾರಣದಿಂದಾಗಿ ಎರಡು ವರ್ಷಗಳಿಂದ ಬಂದ್ ಆಗಿದ್ದ ನಾಟಕ ಕಂಪನಿಗಳು ಕೆಲವು ತಿಂಗಳಿಂದ ಆರಂಭವಾಗಿದ್ದವು. ಆದರೆ ಇದೀಗ ಮತ್ತೆ ಕೋವಿಡ್, ಓಮಿಕ್ರಾನ್ ಆತಂಕ ಇಡೀ ರಂಗಭೂಮಿ ಕಲಾವಿದರನ್ನು ಕಣ್ಣಿರಲ್ಲಿ ಕೈ ತೊಳೆಯುವಂತೆ ಮಾಡಿದೆ. ಸಾಮಾನ್ಯವಾಗಿ ರಾತ್ರಿ ವೇಳೆ ಪ್ರೇಕ್ಷಕರು ನಾಟಕ ನೋಡಲು ಬರುವುದು ಹೆಚ್ಚು. ಈ ಕಾರಣಕ್ಕಾಗಿ ಹೆಚ್ಚಿನ ನಾಟಕಗಳು ಸಂಜೆ ಹಾಗೂ ರಾತ್ರಿ ವೇಳೆ ಆಯೋಜನೆ ಮಾಡಲಾಗುತ್ತದೆ. ಆದರೆ ಇದೀಗ ನೈಟ್ ಕರ್ಫೂ ರಂಗಭೂಮಿ ಕಲಾವಿದರ ಬಾಳಲ್ಲಿ ಕತ್ತಲೆ ಮೂಡಿಸಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ…

ಹೌದು ವಿಜಯಪುರ ನಗರದ ಹೊರಭಾಗದಲ್ಲಿ ಹಲವು ನಾಟಕ ಕಂಪನಿಗಳು ಟೆಂಟ್ ಹಾಕಿ ನಾಟಕ ಪ್ರದರ್ಶನ ನಡೆಸುತ್ತಿವೆ. ಕಳೆದ ಒಂದು ತಿಂಗಳಿಂದ ವಿವಿಧ ಜಿಲ್ಲೆಯ ನಾಟಕ ಕಂಪನಿಗಳು ನಗರಕ್ಕೆ ಆಗಮಿಸಿ ಟೆಂಟ್ ಹಾಕಿವೆ. ಹೊಸ ವರ್ಷಾಚರಣೆ ಹಾಗೂ ವಿಜಯಪುರದ ಸುಪ್ರಸಿದ್ಧ ಸಿದ್ದೇಶ್ವರ ಜಾತ್ರೆ ವೇಳೆ ಉತ್ತಮ ಆದಾಯ ಪಡೆಯಬಹುದು ಎಂದು ಆಶಾಭಾವನೆ ಹೊಂದಿದ್ದರು. ಆದರೆ ಕೋವಿಡ್ ಮೂರನೇ ಅಲೆ ಆತಂಕ ಕಲಾವಿದರನ್ನು ನಡು ನೀರಲ್ಲಿ ನೀಲ್ಲಿಸಿದೆ. ನೈಟ್ ಕರ್ಫೂ ಕಾರಣದಿಂದ ರಾತ್ರಿ ಪ್ರದರ್ಶನ ಬಂದ್ ಮಾಡಿದ್ದಾರೆ. ದಿನಕ್ಕೆ ಕೇವಲ ಎರಡು ಆಟಗಳು ಮಾತ್ರ ಪ್ರದರ್ಶನ ಮಾಡಲಾಗುತ್ತಿದೆ. ಜೊತೆಗೆ ಸಿದ್ದೇಶ್ವರ ಜಾತ್ರೆ ರದ್ದು ಮಾಡಿದ ಕಾರಣ ಪ್ರೇಕ್ಷಕರ ಆಗಮಿಸೋದು ಅನುಮಾನವಾಗಿರುವ ಕಾರಣ ಕಲಾವಿದರು ಸಂಕಷ್ಟ ಅನುಭವಿಸುವಂತಾಗಿದೆ…
ಸಾಮಾನ್ಯವಾಗಿ ಒಂದು ನಾಟಕ ಕಂಪನಿಗಳು 25 ರಿಂದ 30 ಜನ ಕಲಾವಿದರ ಕೆಲಸ ಮಾಡುತ್ತಾರೆ. ಮಹಿಳಾ ಕಲಾವಿದರಿಗೆ ದಿನಕ್ಕೆ ಒಂದು ಸಾವಿರ, ಪುರುಷ ಕಲಾವಿದರಿಗೆ 800 ಸಂಬಂಳ ನೀಡಲಾಗುತ್ತೆ. ಇದರ ಜಾಗದ ಬಾಡಿಕೆ, ಕರೆಂಟ್ ಬಿಲ್ ಸೇರಿದಂತೆ ಉಳಿದ ಖರ್ಚು ಸೇರಿ ಪ್ರತಿದಿನ 15 ರಿಂದ 16 ಸಾವಿರ ಖರ್ಚಾಗುತ್ತದೆ. ಆದರೆ ಪ್ರೇಕ್ಷಕರ ಕೊರತೆಯಿಂದಾಗಿ ದಿನಕ್ಕೆ 5000 ಗಳಿಸೋದು ಕೂಡಾ ಕಂಪನಿಗಳಿಗೆ ಸಂಕಷ್ಟವಾಗುತ್ತಿದ್ದು, ಹೀಗಾದ್ರೆ ರಂಗಭೂಮಿ ಉಳಿಯುವುದು ಹೇಗೆ ಅನ್ನೋ ಆತಂಕ ಎದುರಾಗಿದೆ. ನೈಟ್ ಕರ್ಫೂ ಮುನ್ನ ಪ್ರತಿದಿನ 200 ಪ್ರೇಕ್ಷಕರು ಆಗಮಿಸುತ್ತಿದ್ದರು. ಆದರೆ ಇದೀಗ 30 ರಿಂದ 50 ಪ್ರೇಕ್ಷಕರು ಮಾತ್ರ ಬರುತ್ತಿದ್ದು, ನಷ್ಟದಲ್ಲೇ ನಾಟಕ ಪ್ರದರ್ಶನ ಮಾಡುವಂತಾಗಿದೆ. ಹೀಗಾಗಿ ಸರ್ಕಾರ ನಮ್ಮ ಸಹಾಯಕ್ಕೆ ನಿಲ್ಲಬೇಕು ಎಂದು ಕಲಾವಿದರು ಮನವಿ ಮಾಡಿದ್ದಾರೆ…
ಸದ್ಯ ವಿರೇಶ್ವರ ನಾಟ್ಯ ಸಂಘದವರು ಪ್ರತಿ ದಿನ 14 ರಿಂದ 16 ಸಾವಿರದಷ್ಟು ಖರ್ಚು ಮಾಡಿ ನಾಟಕ ಏರ್ಪಾಡು ಮಾಡಿದರು ಅದರ ಅರ್ದದಷ್ಟು ಸಹಿತ ಲಾಭ ಭರದೇ ಕಂಗಾಲಾಗಿ ಹೋಗಿದ್ದಾರೆ, ಪುಟ್ಟ ಪುಟ್ಟ ಮಕ್ಕಳನ್ನು ತೆಗೆದುಕೊಂಡು ರಾತ್ರೀ ವೇಳೆ ಟೆಂಟ್ ನಲ್ಲಿಯೇ ಮಲಗುವ ಕಲಾವಿದರ ಬದುಕು ಹೇಳತೀರದಾಗಿ, ಇನ್ನಾದರೂ ಸರ್ಕಾರ ಇಂತಹ ಕಲಾವಿದರ ಕಷ್ಟದ ಕುರಿತು ಒಂದಿಷ್ಟು ಚಿಂತಿಸಿ ಪರಿಹಾರ ಹುಡುಕಬೇಕಿದೆ…