ವೀಕೆಂಡ್ ಕಫ್ಯೂ ಮಧ್ಯೆ ರಸ್ತೆಯಲ್ಲಿ ಏಕಾಏಕಿ ಕುಸಿದು ಬಿದ್ದ ಯುವಕನಿಗೆ ಸಹಾಯ ಮಾಡುವ ಮೂಲಕ ಹುಬ್ಬಳ್ಳಿ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಫಿಟ್ಸ್ ಬಂದು ಏಕಾಏಕಿಯಾಗಿ ಕುಸಿದು ಬಿದ್ದ ಯುವಕನ ನೆರವಿಗೆ ಪೊಲೀಸರು ದೌಡಾಯಿಸಿದ್ದಾರೆ. ಮೂರ್ಚೆ ರೋಗದಿಂದ ಕುಸಿದು ಬಿದ್ದಿದ್ದ ಯುವಕ ಕುಂದಾಪುರ ಮೂಲದ ನಾಗರಾಜ್ ಎಂದು ಗುರುತಿಸಲಾಗಿದೆ. ಯುವಕನಿಗೆ ಕೈಯ್ಯಲ್ಲಿ ಕೀ ಕೊಟ್ಟು, ಕೈ ಉಜ್ಜಿ ಪ್ರಥಮ ಚಿಕಿತ್ಸೆ ನೀಡಿ, ಹುಬ್ಬಳ್ಳಿ ಉಪನಗರ ಪೊಲೀಸ್ ಸಿಬ್ಬಂದಿ ಮಾನವೀಯ ಕಾರ್ಯ ಮಾಡಿದ್ದಾರೆ. ಪೊಲೀಸರ ಮಾನವೀಯ ಕಾರ್ಯಕ್ಕೆ ಸ್ಥಳೀಯರ ಮೆಚ್ಚುಗೆ ವ್ಯಕ್ತವಾಗಿದೆ.
