ಇತ್ತೀಚೆಗೆ ಕಂಗ್ರಾಳಿ ಹಾಗೂ ಅಲತಗಾಗಳಲ್ಲಿ ಕಿಡಿಗೇಡಿಗಳು ಕನ್ನಡ ನಾಮಫಲಕಗಳಿಗೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ದೂರುಗಳು ದಾಖಲಾಗಿವೆ.

ಇತ್ತೀಚೆಗೆ ಬೆಳಗಾವಿಯ ಕೆ ಎಚ್ ಕಂಗ್ರಾಳಿ, ಅಲಗತಾ ಗ್ರಾಮದ ಹೊರ ವಲಯದಲ್ಲಿ ಕನ್ನಡ ನಾಮಫಲಗಳಿಗೆ ಯಾರೋ ಕಿಡಿಗೇಡಿಗಳು ಮಸಿ ಬಳಿದಿದ್ದರು. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಇನ್ನು ಈ ಕುರಿತಂತೆ ನಾಡಿನಾದ್ಯಂತ ತೀವೃ ಖಂಡನೆ ವ್ಯಕ್ತವಾಗಿತ್ತು.
ಇನ್ನು ಈ ಘಟನೆಗೆ ಸಂಬಂಧಿಸಿದಂತೆ, ಲೋಕೋಪಯೋಗಿ ಇಲಾಖೆಯಿಂದ ಕಿಡಿಗೇಡಿಗಳ ಪತ್ತೆ ಮಾಡುವಂತೆ ಕಾಕತಿ, ಎಪಿಎಂಸಿ ಪೆÇಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಲಾಗಿದೆ. ಇನ್ನು ಲೋಕೋಪಯೋಗಿ ಇಲಾಖೆ ಮಸಿ ಬಳಿದಿದ್ದ ಬೋರ್ಡ್‍ಗಳಿಗೆ ಬಿಳಿ ಬಣ್ಣ ಬಳಿದು ವಿಕೃತ ಬೋರ್ಡುಗಳನ್ನು ಸರಿಮಾಡಿದ್ದಾರೆ. ಇನ್ನು ಪೊಲೀಸರು ಕಿಡಿಗೇಡಿಗಳ ಪತ್ತೆಗೆ ಬಲೆ ಬೀಡಿದ್ದಾರೆ.