Belagavi

ಕಟ್ಟಡ ಕಾರ್ಮಿಕರಿಗಾಗಿ ಮೊಬೈಲ್ ಕ್ಲಿನಿಕ್ ಉದ್ಘಾಟಿಸಿದ ಶಾಸಕ ಅನೀಲ್ ಬೆನಕೆ

Share

ಬೆಳಗಾವಿ ನಗರದಲ್ಲಿ ಕಟ್ಟಡ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ಆರೋಗ್ಯ ತಪಾಸಣೆ ಉದ್ದೇಶದಿಂದ ಬೆಳಗಾವಿ ಉತ್ತರ ಶಾಸಕರಾದ ಅನೀಲ್ ಬೆನಕೆ ಮೊಬೈಲ್ ಕ್ಲಿನಿಕ್ ಉದ್ಘಾಟನೆಯನ್ನು ನೆರವೇರಿಸಿದರು.

ಕಟ್ಟಡ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ಆರೋಗ್ಯ ತಪಾಸಣೆ ಉದ್ದೇಶದಿಂದ ಶಾಸಕ ಅನೀಲ್ ಬೆನಕೆ ಇಂದು ಮೊಬೈಟ್ ಕ್ಲಿನಿಕ್‍ನ್ನು ಉದ್ಘಾಟಿಸಿದರು. ನಗರದ ರಾಣಿ ಚೆನ್ನಮ್ಮಾ ವೃತ್ತದಲ್ಲಿ ಮೊಬೈಲ್ ಕ್ಲಿನಿಕ್‍ಗೆ ಹಸಿರು ನಿಶಾನೆ ತೋರುವ ಮೂಲಕ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಅನೀಲ್ ಬೆನಕೆ, ಈ ಯೋಜನೆಯ ಕೇಂದ್ರಬಿಂದಿಗಳಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಶಿವರಾಮ್ ಹೆಬ್ಬಾರ್‍ರಿಗೆ ಧನ್ಯವಾದ ತಿಳಿಸಿದರು. ಇನ್ನು ಈ ಶ್ರಮಿಕ ಸಂಜೀವಿನಿ ಯೋಜನೆಯಡಿ ಮೊಬೈಕ್ ಕ್ಲಿನಿಕ್‍ಗೆ ಇಂದು ಚಾಲನೆ ನೀಡಲಾಗಿದೆ. ಇದರಲ್ಲಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕಿಂತ ಹೆಚ್ಚಿನ ಸೌಲಭ್ಯಗಳು ಇವೆ. ಇನ್ನು ಕಾರ್ಮಿಕರಿಗೆ ಹೆಚ್ಚಿನ ಉಪಯೋಗವಾಗಲೆಂದು ಈ ವಾಹನ ಮನೆಮನೆಗೆ ತೆರಳಿ ಸೇವೆಯನ್ನು ಒಡಗಿಸಲಿದೆ. ಇನ್ನು ಕಾರ್ಮಿಕರೆಂದ ಮೇಲೆ ಗಾಯಗಳು ಹೆಚ್ಚಾಗಿರುತ್ತವೆ. ಹಾಗಾಗಿ ಅದಕ್ಕೆ ಚಿಕಿತ್ಸೆ ನೀಡಬೇಕಾದ ನಿಟ್ಟಿನಲ್ಲಿ ಎಲ್ಲಾ ಸೌಲಭ್ಯಗಳನ್ನು ಈ ವಾಹನ ಹೊಂದಿದೆ. ಇನ್ನು ಎಲ್ಲಾ ಕಾರ್ಮಿಕರೂ ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾರ್ಮಿಕ ಅಧಿಕರಿಗಳಾದ ವೆಂಕಟೇಶ ಸಿಂಧಿಹಟ್ಟಿ, ಹಾಗೂ ತರಣ್ಣುಮ್ ಮೊದಲಾದವರು ಉಪಸ್ಥಿತರಿದ್ದರು.

Tags:

error: Content is protected !!