ಅಂಗನವಾಡಿ ಕಾರ್ಯಕರ್ತೆಯರಿಗೆ ಬಿಎಲ್‍ಓ ಸೇರಿದಂತೆ ಇನ್ನಿತರ ಕೆಲಸಗಳಿಗೆ ನೇಮಿಸಬಾರದು. 6 ಸೇವೆ ಮಾತ್ರ ನಿಗದಿ ಪಡಿಸಬೇಕು. ಕಾರ್ಯಕರ್ತೆಯರು ಎಂದು ಪರಿಗಣಿಸುವ ಬದಲು ಶಿಕ್ಷಕರು ಎಂದು ಪರಿಗಣಿಸಿ, ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಅಂಗನವಾಡಿ ನೌಕರರು ಪ್ರತಿಭಟನೆ ನಡೆಸಿದರು.

ಅಂಗನವಾಡಿ ನೌಕರ ಸಂಘ ಬೆಳಗಾವಿ ತಾಲೂಕಾ ಘಟಕದಿಂದ ಸಿಐಟಿಯು ನೇತೃತ್ವದಲ್ಲಿ ಬೆಳಗಾವಿ ಡಿಸಿ ಕಚೇರಿ ಮುಂಭಾಗದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನಾಕಾರರು ಘೋಷಣೆ ಕೂಡ ಕೂಗಿದರು.
ಈ ವೇಳೆ ತಾಲೂಕಾ ಅಧ್ಯಕ್ಷೆ ಮಂದಾ ನೇವಗಿ ಮಾತನಾಡಿ ನಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜನವರಿ 10ರಂದು ಬೆಂಗಳೂರಿನಲ್ಲಿ ಮುಷ್ಕರ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವು. ಆದರೆ ಕೊರೊನಾ ಮತ್ತು ಒಮಿಕ್ರಾನ್ ಬಂದಿದೆ ಎಂದು ಮುಷ್ಕರಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಆದರೂ ಕೂಡ ನಾವು ನಮ್ಮ ಹೋರಾಟವನ್ನು ಜೀವಂತ ಇಡುತ್ತೇವೆ. ಸರ್ಕಾರ ಎನ್‍ಇಪಿ ಜಾರಿ ಮಾಡುತ್ತಿರುವುದು ಸರಿಯಲ್ಲ. ಅಂಗನವಾಡಿ ನಡೆಸುವ ನಮಗೂ ಎಲ್ಲಾ ಸೌಕರ್ಯ ಮಾಡಿಕೊಡಲಿ, ಕಟ್ಟಡ ಕಟ್ಟಿ ಕೊಡಲಿ, ಮಕ್ಕಳಿಗೆ ಆಟದ ಮೈದಾನ ಕೊಟ್ಟರೆ, ಎಲ್‍ಕೆಜಿ, ಯುಕೆಜಿ ನಡೆಸಲು ನಾವು ಅರ್ಹರಿದ್ದೇವೆ ಎಂಬುನ್ನು ಸಾಬೀತು ಮಾಡುತ್ತೇವೆ. ಅಗತ್ಯ ತರಬೇತಿಯನ್ನು ನಮಗೆ ಕೊಡಲಿ. ಆಗ ಅಂಗನವಾಡಿಗಳಲ್ಲಿ ಎಲ್‍ಕೆಜಿ, ಯುಕೆಜಿ ಆರಂಭಿಸಲಿ ಎಂದು ಒತ್ತಾಯಿಸಿದರು.
ನಂತರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಮನವಿ ಸಲ್ಲಿಸಿದರು.