ಒಮಿಕ್ರಾನ್ ಸೋಂಕು ದಿನೇ ದಿನೇ ಹೆಚ್ಚಾಗಿ ಹರಡುತ್ತಿದೆ. ಅಮೆರಿಕಾದಲ್ಲಿ ಪ್ರತಿನಿತ್ಯ ಲಕ್ಷಾಂತರ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಒಮಿಕ್ರಾನ್‍ನಿಂದ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಸೋಂಕು ನಿಯಂತ್ರಿಸಲು ಕೇಂದ್ರ, ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಎಲ್ಲ ರಾಜ್ಯಗಳ ಸಿಎಂಗಳ ಜೊತೆಗಿನ ಸಭೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಪ್ರಧಾನಿ ಮೋದಿ ಅವರು ಕೊರೊನಾ ರೂಪಾಂತರಿ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿದೆ. ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಿ. ದೇಶವಾಸಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಲಹೆ ಕೊಟ್ಟಿದ್ದಾರೆ. ಭಾರತದಲ್ಲಿ ಅತ್ಯುನ್ನತ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ದೇಶದ ಶೇ.90ರಷ್ಟು ಜನ 2ನೇ ಡೋಸ್ ಪಡೆದುಕೊಂಡಿದ್ದಾರೆ. 15 ವರ್ಷ ಮೇಲ್ಪಟ್ಟ 3 ಕೋಟಿ ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಫ್ರಂಟ್‍ಲೈನ್ ವರ್ಕರ್ಸ, ಹಿರಿಯ ನಾಗರಿಕರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಸೋಂಕು ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಸಿಬ್ಬಂದಿಗಳಿಗೆ ಧನ್ಯವಾದ ತಿಳಿಸುತ್ತೇನೆ. ಲಸಿಕೆ ಬಗ್ಗೆ ವದಂತಿಗಳಿಗೆ ಯಾರೂ ಕಿವಿಗೊಡಬೇಡಿ ಎಂದರು.
ಇನ್ನು ಹೋಮ್ ಐಸೋಲೇಶನ್‍ನಲ್ಲಿ ಚಿಕಿತ್ಸೆಗೆ ಹೆಚ್ಚು ಆಧ್ಯತೆ ಕೊಡಬೇಕು. ಹೋಮ್ ಐಸೋಲೇಶನ್‍ನಲ್ಲಿ ಟ್ರ್ಯಾಕಿಂಗ್, ಟ್ರಿಟ್ಮೆಂಟ್. ಕೇಂದ್ರ ಸರ್ಕಾರ ಟೆಲಿ ಮೆಡಿಸಿನ್ ಸೌಲಭ್ಯ ಒದಗಿಸಿದೆ. ಕೋವಿಡ್ ಸೋಂಕಿತರಿಗೆ ಟೆಲಿಮೆಡಿಸಿನ್ ಸೌಲಭ್ಯ ಸಹಕಾರಿಯಾಗುತ್ತದೆ. ಸ್ಥಳೀಯವಾಗಿ ಕಂಟೇನ್ಮೆಂಟ್ ನಿಯಮ ಕಡ್ಡಾಯವಾಗಿ ಪಾಲಿಸಿ. ಆರೋಗ್ಯ ಕ್ಷೇತ್ರದ ತುರ್ತು ಮೂಲಸೌಲಭ್ಯ ಹೆಚ್ಚಿಸಲಾಗಿದೆ. ಎಲ್ಲಾ ರೀತಿಯ ಪ್ರಭೇದ ಎದುರಿಸಲು ಭಾರತ ಸಿದ್ಧವಿದೆ. ಇಂತಹ ಸಂದರ್ಭದಲ್ಲಿ ಆಯುರ್ವೇದ ಪದ್ಧತಿ ಸಹಕಾರಿ. ಕೋವಿಡ್ ವಿರುದ್ಧ ದೊಡ್ಡ ಅಸ್ತ್ರ ಎಂದರೆ ಅದು ವ್ಯಾಕ್ಸಿನ್. ಅದೇ ರೀತಿ ಸಾಂಪ್ರದಾಯಿಕ, ಮನೆ ಔಷಧಿಗಳು ಬಹಳ ಉಪಯುಕ್ತವಾಗುತ್ತವೆ ಎಂದರು.