ಇಂದು ಬೆಳಂಬೆಳಿಗ್ಗೆ ಎ.ಪಿ.ಎಮ್.ಸಿ ಮಾರುಕಟ್ಟೆ ಪುಲ್ ರಶ್ ಆಗಿದ್ದು, ಜನರು ಮಾಸ್ಕ ಇಲ್ಲದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ತರಕಾರಿ ಖರೀದಿಗೆ ಮುಗಿಬಿದ್ದ ಜನ.ದಿನೇ ದಿನೇ ಕೋವಿಡ್ ಹೆಚ್ಚುತ್ತಿದ್ದರು ಜನ ಮಾತ್ರ ಡೊಂಟ್ ಕೇರ್.

ವೀಕೆಂಡ್ ಕಫ್ರ್ಯೂ ಮಧ್ಯೆ ಬೆಳಗಾವಿಯಲ್ಲಿ ಕೋವಿಡ್ ರೂಲ್ಸ್ ಬ್ರೇಕ್ ಮಾಡಿ ಎಪಿಎಂಸಿ ಮಾರುಕಟ್ಟೆಯಲ್ಲಿ ಜನ ತರಕಾರಿ ಖರೀದಿಸಲು ಮುಗಿ ಬಿದ್ದಿದ್ದಾರೆ.ಬೆಳಗಾವಿಯಲ್ಲಿ ಕೋವಿಡ್ ದಿನೇ ದಿನೇ ಹೆಚ್ಚುತ್ತಿದ್ದರು ಜನರು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಎಪಿಎಂಸಿ ಮಾರುಕಟ್ಟೆಗೆ ಪರ್ಯಾಯವಾಗಿ ಜೈ ಕಿಸಾನ್ ಖಾಸಗಿ ತರಕಾರಿ ಮಾರುಕಟ್ಟೆ ಸ್ಥಾಪನೆ ಮಾಡಲಾಗಿದೆ. ಸ್ವಲ್ಪ ಮಟ್ಟಿಗೆ ಜನಸಂದಣಿ ಕಡಿಮೆ ಇದ್ದರೂ ಮುಂದುವರಿದ ನಿರ್ಲಕ್ಷ್ಯ ವಹಿಸಿದ ಜನ.
ನೆರೆಯ ಮಹಾರಾಷ್ಟ್ರ, ಗೋವಾದಿಂದ ತರಕಾರಿ ಮಾರಾಟ ಮಾಡಲು ರೈತರು ಆಗಮಿಸುತ್ತಿದ್ದು, ಹಳ್ಳಿಗಳಿಗೂ ಕೋವಿಡ್ ಸೊಂಕು ಹರಡುವ ಭೀತಿಯಾಗಿದೆ. ಈ ನಿಟ್ಟಿನಲ್ಲಿ ಜನರನ್ನು ಎಚ್ಚರಿಸಬೇಕಿದ್ದ ಬೆಳಗಾವಿ ಜಿಲ್ಲಾಡಳಿತದಿಂದಲೂ ನಿರ್ಲಕ್ಷ್ಯವಾಗಿದೆ.ಇದೇ ರೀತಿ ನಿರ್ಲಕ್ಷ್ಯ ಮುಂದುವರಿದ್ರೆ ಬೆಳಗಾವಿಗೆ ಗಂಡಾಂತರ ಫಿಕ್ಸ್