Belagavi

2 ದಿನ ಕುಂದಾನಗರಿ ಸ್ತಬ್ಧ: ಗಲ್ಲಿ ಗಲ್ಲಿಗಳಲ್ಲಿ ಬ್ಯಾರಿಕೇಡ್..ಬ್ಯಾರಿಕೇಡ್..ವೀಕೆಂಡ್ ಕರ್ಫ್ಯೂ ಸ್ಟಾರ್ಟ..!

Share

ಕೋವಿಡ್, ಒಮಿಕ್ರಾನ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾಧ್ಯಂತ ಇಂದಿನಿಂದ ವೀಕೆಂಡ್ ಕಫ್ರ್ಯೂ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ ಬೆಳಗಾವಿಯಲ್ಲಿ 8 ಗಂಟೆಯಿಂದಲೇ ಕಫ್ರ್ಯೂ ಆರಂಭವಾಗಿದ್ದು. ನಗರದಾಧ್ಯಂತ ಪೊಲೀಸರು ಸರ್ಪಗಾವಲು ಹಾಕಿದ್ದಾರೆ.

ಹೌದು ಶುಕ್ರವಾರ ಸಂಜೆ 8 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆವರೆಗೆ ವೀಕೆಂಡ್ ಕಫ್ರ್ಯೂ ಇರಲಿದ್ದು. ಶುಕ್ರವಾರ ಸಂಜೆ 8 ಗಂಟೆ ಒಳಗೆ ಫಿಲ್ಡಿಗಿಳಿದ ಪೊಲೀಸರು ಎಲ್ಲ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿಸಿದರು. ಚನ್ನಮ್ಮ ವೃತ್ತ, ಕಾಕತಿವ್ಹೇಸ್, ಖಡೇಬಜಾರ್, ಗಣಪತಗಲ್ಲಿ, ಕಿರ್ಲೋಸ್ಕರ್ ರೋಡ್, ಮಾರುತಿ ಗಲ್ಲಿ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದ್ದು. ನಾಕಾಬಂದಿ ಹಾಕಲಾಗಿದೆ. ಅಗತ್ಯ ಸೇವೆ ಹೊರತು ಪಡಿಸಿ ಇನ್ನುಳಿದ ಯಾವುದೇ ರೀತಿಯಲ್ಲಿ ಜನರು ಓಡಾಡದಂತೆ ಹದ್ದಿನ ಕಣ್ಣಿಡಲಾಗಿದೆ. ಎರಡು ದಿನ ಕುಂದಾನಗರಿ ಸ್ತಬ್ಧವಾಗಲಿದ್ದು, ಎಲ್ಲರೂ ಕಟ್ಟು ನಿಟ್ಟಾಗಿ ವೀಕೆಂಡ್ ಕಫ್ರ್ಯೂ ನಿಯಮ ಪಾಲಿಸುವಂತೆ ಸಾರ್ವಜನಿಕರಿಗೆ ಪೊಲೀಸರು ತಿಳಿಸಿದ್ದಾರೆ.

 

Tags:

error: Content is protected !!