COVID-19

ಎಫ್‌ಐಆರ್‌ಗೆ ನಾವು ಹೆದರಲ್ಲ: ಪಾದಯಾತ್ರೆ ಮುಂದುವರಿಸುತ್ತೇವೆ: ಸಿದ್ದರಾಮಯ್ಯ ಎಚ್ಚರಿಕೆ

Share

ಎಫ್‍ಐಆರ್‍ಗೆ ನಾವು ಹೆದರಲ್ಲ: ಪಾದಯಾತ್ರೆ ಮುಂದುವರಿಸುತ್ತೇವೆ: ಸಿದ್ದರಾಮಯ್ಯ ಎಚ್ಚರಿಕೆ
ಆಂಕರ್: ಎಫ್‍ಐಆರ್ ಹಾಕುವ ಮೂಲಕ ನಮ್ಮನ್ನು ಮತ್ತು ನಮ್ಮ ಕಾರ್ಯಕರ್ತರನ್ನು ಹೆದರಿಸಲು ಸಾಧ್ಯವಿಲ್ಲ. ಎಫ್‍ಐಆರ್ ಎಷ್ಟು ಬೇಕಾದ್ರೂ ಹಾಕಲಿ, ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

ನಾಲ್ಕನೇ ದಿನದ ಮೇಕೆದಾಟು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ವೇಳೆ ಖಾಸಗಿ ವಾಹಿನಿ ಜೊತೆಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಪಾದಯಾತ್ರೆ ಪ್ರಾರಂಭ ಆದ ದಿನದಿಂದ ದಿನೇ ದಿನೇ ಹೆಚ್ಚು ಜನರು ಉತ್ಸಾಹದಿಂದ ಭಾಗಿಯಾಗುತ್ತಿದ್ದಾರೆ. ಇದರ ಅರ್ಥ ಬಿಜೆಪಿ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂಬುದನ್ನು ಜನರು ತಮ್ಮ ಭಾವನೆಗಳ ಮೂಲಕ ವ್ಯಕ್ತ ಮಾಡುತ್ತಿದ್ದಾರೆ. ಬಿಜೆಪಿ ಅನಗತ್ಯವಾಗಿ ವಿಳಂಬ ದ್ರೋಹ ಮಾಡುತ್ತಿದೆ. ಬೆಂಗಳೂರು ನಗರ ಸೇರಿ ಸುತ್ತಮುತ್ತಲಿನ ಜನರಿಗೆ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಜಾರಿ ಮಾಡದೇ ವಿಳಂಬ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕೊರೊನಾ ಹೆಚ್ಚಾಗಲು ಕಾಂಗ್ರೆಸ್ ಕಾರಣ, ಲಾಕ್‍ಡೌನ್ ಆದ್ರೂ ಅದಕ್ಕೂ ಕೂಡ ಕಾಂಗ್ರೆಸ್ ನಾಯಕರೇ ಕಾರಣ ಎಂಬ ಸಚಿವರ ಆರೋಪಕ್ಕೆ ಪ್ರತಿಕ್ರಯಿಸಿದ ಸಿದ್ದರಾಮಯ್ಯ ಕೊರೊನಾ ಹೆಚ್ಚಾಗಲು ಸರ್ಕಾರ ಕಾರಣ ನಾವಲ್ಲ. ನಾವು ಇಲ್ಲಿ ಪಾದಯಾತ್ರೆ ಮಾಡುತ್ತಿದ್ದೇವೆ, ಬೇರೆ ಭಾಗದಲ್ಲಿ ಪಾದಯಾತ್ರೆಯನ್ನು ಯಾರಾದ್ರೂ ಮಾಡುತ್ತಿದ್ದಾರಾ..? ಅಲ್ಲಿ ಯಾಕೆ ಕೊರೊನಾ ಹೆಚ್ಚಾಗುತ್ತಿದೆ. ಮಹಾರಾಷ್ಟ್ರ, ಕೇರಳ, ದೆಹಲಿ, ಉತ್ತರಪ್ರದೇಶದಲ್ಲಿ ಯಾಕೆ ಕೊರೊನಾ ಹೆಚ್ಚಾಗುತ್ತಿದೆ ಎಂದು ಪ್ರಶ್ನಿಸಿದರು.

Tags:

error: Content is protected !!