ವ್ಯಕ್ತಿಯನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ವಿಜಯಪುರ ರಸ್ತೆಯ ಅಮೃತ ಡಾಬಾ ಹತ್ತಿರ ಘಟನೆ ನಡೆದಿದೆ. ಮೂಲತಃ ಸೊಲ್ಲಾಪುರ ನಿವಾಸಿಯಾದ ನಿತೀನ್ ಸಂತೋಷ ಮಾಶಾಳಕರ ಕೊಲೆಯಾಗಿರುವ ದುರ್ದೈವಿಯಾಗಿದ್ದು ಇಂಡಿಯಲ್ಲಿ ಮಾವನ ಮನೆಯಲ್ಲಿ ವಾಸವಾಗಿದ್ದ ಎನ್ನಲಾಗಿದೆ. ನಿನ್ನೆ ತಡರಾತ್ರಿ ಕುಡಿದ ನಶೆಯಲ್ಲಿ ದುಷ್ಕರ್ಮಿಗಳೊಂದಿಗೆ ಮಾತಿಗೆ ಮಾತು ಬೆಳೆದಿದ್ದು, ಕೊಲೆಯಲ್ಲಿ ಜಗಳ ಅಂತ್ಯವಾಗಿದೆ. ಇಂಡಿ ಶಹರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..
