Belagavi

ಎಂಇಎಸ್ ಮುಖಂಡನಿಗೆ ಮಸಿ ಬಳಿದಿದ್ದ ವೀರಕನ್ನಡಿಗರು ಬಿಡುಗಡೆ

Share

ಬೆಳಗಾವಿಯಲ್ಲಿ ಎಂಇಎಸ್ ಮುಖಂಡನ ಮುಖಕ್ಕೆ ಮಸಿ ಬಳಿದ ಪ್ರಕರಣಕ್ಕೆ ಸಂಬAಧಿಸಿದAತೆ ಬಂಧಿತರಾಗಿದ್ದ ನಾಲ್ವರು ಕನ್ನಡದ ಕಟ್ಟಾಳುಗಳು ಇಂದು ಬಿಡುಗಡೆಯಾಗಿದ್ದಾರೆ.

ಬೆಳಗಾವಿಯಲ್ಲಿ ಎಂಇಎಸ್ ಮುಖಂಡನ ಮುಖಕ್ಕೆ ಮಸಿ ಬಳಿದಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಕೊಲೆ ಪ್ರಯತ್ನ ಪ್ರಕರಣದಡಿ ಎಫ್‌ಐಆರ್ ದಾಖಲಾಗಿ ಹಿಂಡಲಗಾ ಜೈಲು ಸೇರಿದ್ದ ನಾಲ್ವರು ಕನ್ನಡದ ಕಟ್ಟಾಳುಗಳು ಇಂದು ಬಿಡುಗಡೆಯಾಗಿದ್ದಾರೆ. ಕರ್ನಾಟಕ ನವನಿರ್ಮಾಣ ಸೇನೆ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಂಪತ್‌ಕುಮಾರ್ ದೇಸಾಯಿ, ಅನಿಲ್ ದಡ್ಡಿಮನಿ, ಸಚಿನ್ ಮಠದ, ರಾಹುಲ್ ಕಲಕಾಂಬಕರ್ ಇಂದು ಹಿಂಡಲಗಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಇನ್ನು ಜೈಲಿನಿಂದ ಬಿಡುಗಡೆಯಾದ ಕನ್ನಡ ಕಾರ್ಯಕರ್ತರಿಗೆ ಕ್ಷೀರಾಭಿಷೇಕಕ್ಕೆ ಮುಂದಾಗಿದ್ದ ಅಭಿಮಾನಿಗಳನು ಪೊಲೀಸರಿಂದ ತಡೆದಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ನವನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ್‌ರಿಂದ ನಾಲ್ವರು ಕನ್ನಡದ ಕಟ್ಟಾಳುಗಳನ್ನು ಹಿಂಡಲಗಾ ಜೈಲಿನ ಎದುರು ಸನ್ಮಾನಿಸಿ ಗೌರವಿಸಿದ್ದಾರೆ. ಬಿಳಿ ಬಣ್ಣದ ಶರ್ಟ್, ಪಂಚೆ ತೊಡಿಸಿ ಮೈಸೂರು ಪೇಟಾ ಹಾಕಿ, ಶಾಲು ಹೊದಿಸಿ, ಹಾರಹಾಕಿ ಸನ್ಮಾನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿಸೆಂಬರ್ 13ರಂದು ಬೆಳಗಾವಿಯಲ್ಲಿ ಅಧಿವೇಶನವನ್ನು ವಿರೋಧಿಸಿ ಎಂಇಎಸ್ ಮಹಾಮೇಳ ನಡೆಸಿತ್ತು. ಮಹಾಮೇಳ ನಡೆಯುವ ಸ್ಥಳಕ್ಕೆ ನುಗ್ಗಿ ಎಂಇಎಸ್ ಅಧ್ಯಕ್ಷ ದೀಪಕ್ ದಳವಿ ಮುಖಕ್ಕೆ ಕನ್ನಡಪರ ಹೋರಾಟಗಾರ ಸಂಪತ್‌ಕುಮಾರ್ ದೇಸಾಯಿ ಮಸಿ ಬಳೆದಿದ್ದರು. ಇದರು ಪ್ರಯುಕ್ತ ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ವರ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಈ ಪ್ರಯುಕ್ತ ಇಂದು ನ್ಯಾಯಾಲಯ ಇಂದು ಕನ್ನಡ ಹೋರಾಟಗಾರರಿಗೆ ಜಾಮೀನು ನೀಡಿದೆ.

Tags:

error: Content is protected !!