ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ ಎಮ್‌ಆರ್ ಚುಚ್ಚುಮದ್ದನ್ನು ಪಡೆದು ಮೂವರು ಮಕ್ಕಳು ಮೃತಪಟ್ಟ ಪ್ರಕರಣಕ್ಕೆ ಸಂಬAಧಿಸಿದAತೆ ಈಗಾಗಲೇ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಆದರೆ ಈವೆರೆಗೂ ಮೃತ ಮಕ್ಕಳ ಕುಟುಂಬಕ್ಕೆ ಪರಿಹಾರ ಕೊಡುವ ನಿಟ್ಟಿನಲ್ಲಿ ಸರಕಾರವಾಗಲೀ ಅಥವಾ ಆರೋಗ್ಯ ಇಲಾಖೆಯಾಗಲೀ ಮಾತನಾಡುತ್ತಿಲ್ಲ ಎಂಬ ಮಾತು ಕೇಳಿಬಂದಿದೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ ಎಂಆರ್ ಚುಚ್ಚುಮದ್ದನ್ನು ಪಡೆದು ಮೂವರು ಮಕ್ಕಳು ಮೃತಪಟ್ಟ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಗ್ಯ ಇಲಾಖೆ ನರ್ಸ್ ಒಬ್ಬರನ್ನು ಅಮಾನತು ಮಾಡಿದರೆ. ಆದರೆ ಅಮಾನತು ಮಾಡಿದರೆ ಸಾಕಾ ಎನ್ನುವ ಪ್ರಶ್ನೆ ಈಗ ಎಲ್ಲರಲ್ಲಿಯೂ ಕಾಡುತ್ತಿದೆ. ಮೃತ ಮಕ್ಕಳ ಕುಟುಂಬಕ್ಕೆ ಸಾಂತ್ವನ ಹೇಳಿ, ಪರಿಹಾರವನ್ನು ಒದಗಿಸಬೇಕೆಂಬ ಮಾತುಗಳು ಈಗ ಕೇಳಿಬರುತ್ತಿವೆ. ಆದರೆ ಬೆಳಗಾವಿ ಡಿಎಚ್‌ಓ ಶಶಿಕಾಂತ ಮುನ್ಯಾಳ್, ಈ ರೀತಿ ಪರಿಹಾರ ನೀಡುವ ಕುರಿತು ನಿಯಮಾವಳಿಗಳಲ್ಲಿ ಇಲ್ಲ ಎನ್ನುವ ಮಾತನ್ನು ಹೇಳಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಹಾಗಾದರೆ ಬಡ ಮಕ್ಕಳ ಸಾವಿಗೆ ಬೆಲೆನೇ ಇಲ್ಲವಾ ಎಂದು ಸ್ಥಳೀಯರು ಆಕ್ರೋಶ ಹೊರಹಾಕುತ್ತಿದ್ದಾರೆ. ಇನ್ನು ಮೃತ ಮಕ್ಕಳ ಕುಟುಂಬಸ್ಥರು ಪರಿಹಾರ ನೀಡುವಂತೆ ಆಗ್ರಹಿಸುತ್ತಿದ್ದಾರೆ.
ಇನ್ನು ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳಾದ ಎಂಜಿ ಹಿರೇಮಠ, ಈ ರೀತಿಯ ಪ್ರಕರಣದಲ್ಲಿ ಪರಿಹಾರ ನೀಡುವುದು ನಮ್ಮ ಮಟ್ಟದಲ್ಲಿ ಇರುವುದಿಲ್ಲ. ಇದಕ್ಕೆ ನೇರವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಕೊಡಬೇಕಾಗುತ್ತದೆ. ಹಾಗಾಗಿ ಮೃತ ಮಕ್ಕಳ ಕುಟುಂಬದ ಆರ್ಥಿಕ ಹಿನ್ನೆಲೆ ಹೇಗಿದೆ ಎನ್ನುವುದನ್ನು ಅರಿತು ನಾವು ಅದನ್ನು, ಜಂಟಿ ಕಾರ್ಯದರ್ಶಿಗಳಿಗೆ ಕಳಿಸಿ ಕೊಡಲಾಗುತ್ತೆ ಅಲ್ಲಿಂದ ಪರಿಹಾರ ನೀಡಲಾಗುತ್ತದೆ ಎಂದರು.
ಇನ್ನು ಈಗಾಗಲೇ ಚುಚ್ಚು ಮದ್ದು ಪಡೆದು ಸಾವಿಗೀಡಾದ ಮಕ್ಕಳ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಇನ್ನು ಈಗಾಗಲೇ ಚುಚ್ಚುಮದ್ದು ನೀಡಿದ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ. ಆದರೆ ಮೃತ ಮಕ್ಕಳ ಕುಟುಂಕ್ಕೆ ಪರಿಹಾರ ನೀಡುವುದನ್ನು ಸರಕಾರ ಮಾಡಬೇಕು ಎನ್ನುವುದು ಎಲ್ಲರ ಆಗ್ರಹವಾಗಿದೆ.