Banglore

ಇನ್ಮುಂದೆ ಪ್ರತೀ ಗ್ರಾಮದಲ್ಲಿ ಕುಡಿಯೋ ನೀರು ವಿದ್ಯುತ್ ದೀಪ ಇ-ಬೆಳಕು ಯೋಜನೆಯಲ್ಲಿ ಪಕ್ಕಾ-ಸಚಿವ ಕೆ.ಎಸ್ ಈಶ್ವರಪ್ಪ.

Share

ಬೆಂಗಳೂರಿನಲ್ಲಿಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್. ಈಶ್ವರಪ್ಪ ಮತ್ತು ಇಂಧನ ಸಚಿವರಾದ ಶ್ರೀ ವಿ ಸುನೀಲ್ ಕುಮಾರ್ ಗಾಂಧಿ ಸಾಕ್ಷಿ ಕಾಯಕ 2.0 ಮತ್ತು ಇ-ಬೆಳಕು. ಯೊಜನೆ ಲೊಕಾರ್ಪಣೆ ಮಾಡಿದರು.
ಇಂದು ಬೆಳಿಗ್ಗೆ ವಿಧಾನ ಸೌಧದ 3 ನೇ ಮಹಡಿಯ ಕೊಠಡಿ ಸಂಖ್ಯೆ 314ರಲ್ಲಿ 11.15 ಕ್ಕೆ ಮಾನ್ಯ ಪಂಚಾಯತ್ ರಾಜ್ ಸಚಿವರಾದ ಕೆ.ಎಸ್. ಈಶ್ವರಪ್ಪ ಮತ್ತು ಇಂಧನ ಸಚಿವರಾದ ಶ್ರೀ ವಿ ಸುನೀಲ್ ಕುಮಾರ್ ಗಾಂಧಿ ಸಾಕ್ಷಿ ಕಾಯಕ 2.0 ಮತ್ತು ಇ-ಬೆಳಕು. ಯೊಜನೆ ಲೊಕಾರ್ಪಣೆ ಮಾಡಿದರು.

ಈ ವೇಳೆ ಮಾತನಾಡಿದ ಸಚಿವ ಈಶ್ವರಪ್ಪ, ರಾಜ್ಯದ ಎಲ್ಲ ಗ್ರಾಮ ಪಂಚಾಯತಗಳಲ್ಲಿ ಕುಡಿಯುವ ನೀರು ಹಾಗೂ ವಿದ್ಯುತ್ ದೀಪದ ವದಯವಸ್ಥೆಯನ್ನು ಪಕ್ಕಾ ಮಾಡಿಕೊಡುವ ಉದ್ದೇಶದಿಂದ ಇಂದಿನಿಂದ ರಾಜ್ಯಾದ್ಯಂತ ಈ ಬೆಳಕು ತಂತ್ರಾಂಶವನ್ನು ಜಾರಿಗೆ ತರುತ್ತಿದ್ದೇವೆ. ಕುಡಿಯುವ ನೀರು ಹಾಗೂ ವಿದ್ಯುತ್ ಎಲ್ಲಿಯೂ ಸೋರಿಕೆಯಾಗದಂತೆ ತಡೆಯುವ ನಿಟ್ಟಿನಲ್ಲಿ ಈ ತಂತ್ರಾಂಶವನ್ನು ಜಾರಿಗೆ ತರುತ್ತಿದ್ದೇವೆ. ಈಗಾಗಲೇ ಈ ಯೋಜನೆ 8ಜಿಲ್ಲೆಗಳ 1378 ಗ್ರಾಮ ಪಂಚಾಯತಗಳಲ್ಲಿ ಈ ಯೋಜನೆ ಜಾರಿಗೆ ತರುತ್ತಿದ್ದೇವೆ. ಇನ್ನುಳಿದ ಎಲ್ಲಾ ಪಂಚಾಯತಗಳಲ್ಲಿ ಎರಡು ತಿಂಗಳ ನಂತ್ರ ಜಾರಿಗೊಳಿಸಲಾಗುವುದು. ಮೀಟರ್ ಅಳವಡಿಸಿದ್ದರಿಂದ ಯಾವುದೇ ರೀತಿಯ ಸೋರಿಕೆಯಾಗಲಾರದು. ಇದರಿಂದ ಬೋರ್‍ವೆಲ್‍ಗಳು ಡೀಫಾಲ್ಟ್ ಆಗಿರೋದು ಗೊತ್ತಾಗುತ್ತದೆ. ಈ ಕುರಿತಂತೆ ಎಲ್ಲಾ ಗ್ರಾಮ ಪಂಚಾಯತಗಳಿಗೆ ಶೇ 60ರಷ್ಟು ಹೆಚ್ಚಿನ ಶಾಸನಬದ್ಧ ಅನುದಾನ ಸಿಗಲಿದೆ. ಹಾಗಾಗಿ ಇನ್ನು ಮುಂದೆ ಪ್ರತಿಯೊಂದು ಗ್ರಾಮದಲ್ಲಿ ಕುಡಿಯುವ ನೀರು ಹಾಗೂ ವಿದ್ಯತ್ ದೀಪದ ವ್ಯವಸ್ಥೆ ಪಕ್ಕಾ ಮಾಡಿಕೊಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಇಲಾಖೆಯ ಆಯುಕ್ತರಾದ ಶ್ರೀಮತಿ ಶಿಲ್ಪಾ ನಾಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Tags:

error: Content is protected !!