Banglore

ಇದು ರಾಜಕೀಯ ಪ್ರೇರಿತ ಕಾಂಗ್ರೆಸ್ ಪಾದಯಾತ್ರೆ: ಕೈ ನಾಯಕರ ವಿರುದ್ಧ ಸಿಎಂ ಬೊಮ್ಮಾಯಿ ಫುಲ್ ಗರಂ..!

Share

ಡಿಪಿಆರ್ ಮಾಡಲು ನಾಲ್ಕು ವರ್ಷ ತೆಗೆದುಕೊಂಡಿದ್ದಾರೆ. ಆ ಡಿಪಿಆರ್‍ನ್ನು ಸಬ್‍ಮಿಟ್ ಕೂಡ ಮಾಡಿಲ್ಲ. ಇದು ಅವರ ಸಾಧನೆ, ಬೆಟ್ಟ ಅಗೆದು ಇಲಿ ತೆಗೆದಿದ್ದಾರೆ ಎಂದು ಕಾಂಗ್ರೆಸ್ ನಾಯಕರ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಲೇವಡಿ ಮಾಡಿದ್ದಾರೆ.

2018ರ ನಂತರ ನಾವೇ ಪ್ರೋಸಿಡಿಂಗ್ ಕಂಟಿನ್ಯೂ ಮಾಡಿದ್ದೇವೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಖಾರವಾಗಿ ಪ್ರತಿಕ್ರಯಿಸಿದ ಸಿಎಂ ಬೊಮ್ಮಾಯಿ ಎಲ್ಲಿ ಏನು ಮಾಡಿದ್ದಾರ್ರಿ..ಡಿಪಿಆರ್‍ನ್ನು ಸಬ್‍ಮಿಟ್ ಮಾಡಬೇಕಲ್ಲ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ನಾಯಕರು ಪಾದಯಾತ್ರೆ ಏಕೆ ಮಾಡುತ್ತಿದ್ದಾರೆಂಬ ಪ್ರಶ್ನೆ ಜನರಲ್ಲಿ ಮೂಡಿದೆ. 5 ವರ್ಷ ಅಧಿಕಾರದಲ್ಲಿದ್ದರೂ ಡಿಪಿಆರ್ ಸಲ್ಲಿಸಲು ಅವರಿಂದಾಗಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಡಿಕೆಶಿ ನೀರಾವರಿ ಸಚಿವರಿದ್ದರು. ಆಗಲೂ ಮಂಡಿಸಲಿಲ್ಲ. ಚುನಾವಣೆಗಾಗಿ ರಾಜಕೀಯ ಪ್ರೇರಿತ ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿದ್ದಾರೆ. ತಾವು ಕೆಲಸ ಮಾಡಿಲ್ಲವೆಂಬ ಅಪರಾಧ ಭಾವನೆ ಅವರಿಗೆ ಕಾಡುತ್ತಿದೆ ಎಂದು ಕಿಡಿಕಾರಿದರು.

ಇನ್ನು ಪಾದಯಾತ್ರೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಆಗುತ್ತಿದೆಯಲ್ಲಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಯಿಸಿದ ಸಿಎಂ ಈ ಬಗ್ಗೆ ನಮ್ಮ ಅಧಿಕಾರಿಗಳು ಅವರಿಗೆ ನೋಟಿಸ್ ಕೊಟ್ಟಿದ್ದಾರೆ. ಖುದ್ದು ಭೇಟಿಯಾಗಿ ನೀವು ಮಾಡುತ್ತಿರುವುದು ಸರಿಯಲ್ಲ ಎಂದು ಅಧಿಕಾರಿಗಳು ಅವರಿಗೆ ಹೇಳಿದ್ದಾರೆ. ಅವರು ಉಡಾಫೆಯಿಂದ ಮಾಡುತ್ತಿದ್ದಾರೆ. ಹೀಗಾಗಿ ಕಾನೂನು ಪ್ರಕರ ಏನು ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ನಾನು ಮುಖ್ಯಮಂತ್ರಿಯಾದ ನಂತರ ಡಿಪಿಆರ್ ಅಪ್ರೂವಲ್‍ಗೆ ಸಿಡಬ್ಲುಸಿಯಿಂದ ಕಾವೇರಿ ನಿರ್ವಹಣಾ ಮಂಡಳಿಗೆ ನಮ್ಮ ಒತ್ತಡದಿಂದ ಈಗಾಗಲೇ ಹೋಗಿದೆ. ಇದೇ ತಿಂಗಳು ಸಭೆ ಕೂಡ ನಡೆಯಲಿದೆ. ಈ ಬಗ್ಗೆ ತೀರ್ಮಾನ ಮಾಡುತ್ತೇವೆ. ಸುಪ್ರೀಂಕೋರ್ಟನಲ್ಲಿಯೂ ಕೂಡ ಇದೇ ತಿಂಗಳು ಕೇಸ್ ಬರುತ್ತಿದೆ. ಅದನ್ನು ಲೀಗಲ್ ಜೊತೆಗೆ ಫಾಲೋವಪ್ ಮಾಡುತ್ತಿದ್ದೇವೆ. ಎನ್ವಾಯರಮೆಂಟ್ ಕ್ಲಿಯರನ್ಸ ಕೂಡ ಮಾಡುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು.

 

 

Tags:

error: Content is protected !!