Banglore

ಇದು ಕೋವಿಡ್ ಲಾಕ್‍ಡೌನ್ ಅಲ್ಲ: ಬಿಜೆಪಿ ಲಾಕ್‍ಡೌನ್: ಜನರನ್ನು ಮರ್ಡರ್ ಮಾಡ್ತಿದ್ದಾರೆ: ಸಿಡಿದ ಡಿಕೆಶಿ

Share

ರಾಜಕೀಯಕ್ಕೋಸ್ಕರ, ನಮ್ಮ ಮೇಲಿನ ದ್ವೇಷಕ್ಕೋಸ್ಕರ, ಪಾಪ ಎಲ್ಲ ವರ್ತಕರು, ಟೂರಿಸಂನವರು, ಚಾಲಕರು, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಎಲ್ಲರನ್ನು ಮರ್ಡರ್ ಮಾಡೋದು ಒಂದೇ ಬಾಕಿ ಇದೆ. ಸರ್ಕಾರವೇ ಇವರನ್ನು ಮರ್ಡರ್ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ವರ್ತಕರು, ವ್ಯಾಪಾರಿಗಳ ಮೇಲೆ ಗದಾಪ್ರಹಾರ ಮಾಡುತ್ತಿದ್ದಾರೆ. ಪಾಪ ಎಂತ ನೋವು, ಅವರ ಬದುಕು ಏನು ಆಗಬೇಕು. ಎರಡು ವರ್ಷಗಳಿಂದ ಸತ್ತು ಹೋಗಿ ಬಿಟ್ಟಿದ್ದಾರೆ. ಎಲ್ಲಾ ವ್ಯಾಪಾರಿಗಳು, ಬೀದಿಬದಿ ವ್ಯಾಪಾರಿಗಳನ್ನು ಈ ಸರ್ಕಾರ ಮರ್ಡರ್ ಮಾಡುತ್ತಿದೆ. ಅವರ ಶಾಪ ತಡೆದುಕೊಳ್ಳಲು ಆಗುತ್ತಿಲ್ಲ. ನನ್ನ ಮೇಲೆ, ನಮ್ಮ ಎಂಎಲ್‍ಎ, ಎಂಎಲ್‍ಸಿಗಳ ಮೇಲೆ ಡಿಜಾಸ್ಟರ್ ಮ್ಯಾನೇಜಮೆಂಟ್ ಕೇಸ್ ಹಾಕಿದ್ದಾರೆ, ಇವರು ಮನುಷ್ಯರು ಏನ್ರಿ ಕಿಡಿಕಾರಿದರು.

ಅವರ ಪಕ್ಷದ ನಾಯಕರು ಪ್ರತಿಭಟನೆ, ಮೆರವಣಿಗೆ ಮಾಡಿದರು, ನಿನ್ನೆಯಷ್ಟೇ ಪ್ರಧಾನಿ ಮೋದಿ ಅವರು ದೊಡ್ಡ ದೊಡ್ಡ ರ್ಯಾಲಿ ಮಾಡಿದ್ದಾರೆ. ಇದು ಯಾವ ಲೆಕ್ಕ ಎಂದು ಪ್ರಶ್ನಿಸಿದ ಡಿಕೆಶಿ ಸ್ವಿಮ್ಮಿಂಗ್ ಫೂಲ್‍ನಲ್ಲಿ ಸ್ವಿಮ್ ಮಾಡಿದ್ರಲ್ಲಾ, ಅದಕ್ಕೆ ಮೊದಲು ಸುಧಾಕರ್ ಮೇಲೆ ಕೇಸ್ ಹಾಕಲಿ, ಅದೇ ರೀತಿ ಜನಾಶೀರ್ವಾದ ಯಾತ್ರೆ ಮಾಡಿದರಲ್ಲಾ ಬಿಜೆಪಿ ಮಂತ್ರಿಗಳ ಮೇಲೆ ಕೇಸ್ ಹಾಕಲಿ, ಯಡಿಯೂರಪ್ಪ, ಶ್ರೀರಾಮುಲು, ಬೊಮ್ಮಾಯಿ ಮೇಲೆ ಮೊದಲು ಕೇಸ್ ಹಾಕಲಿ ಎಂದು ಆಗ್ರಹಿಸಿದರು.

ನಾವು ರೂಲ್ಸ, ಗೈಡಲೈನ್ಸ, ಕೋವಿಡ್ ಪ್ರೋಟೊಕಾಲ್‍ನ್ನು ನಾವೆಲ್ಲಾ ಅನುಸರಿಸುತ್ತೇವೆ. ಈಗಾಗಲೇ ನೂರು ಜನ ಡಾಕ್ಟರ್‍ಗಳು ರೆಡಿಯಿದ್ದಾರೆ. ನಾವು ರ್ಯಾಲಿ ಮಾಡೋದಿಲ್ಲ. ನೀರಿಗಾಗಿ ನಡೆಯುತ್ತೇವೆ, ವಾಕ್ ಫಾರ್ ವಾಟರ್. ರಾಜ್ಯದ ಜನರ ಹಿತಕ್ಕಾಗಿ, ರೈತರ ಬದುಕಿಗೋಸ್ಕರ, ಬೆಂಗಳೂರಿನ ಜನತೆಗೆ ಉತ್ತಮ ಆರೋಗ್ಯಯುತವಾದ ನೀರು ಸಿಗಲು ಪ್ರಾರ್ಥನೆ ಮಾಡಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದರೆ, ನಿರ್ಬಂಧ ಎಂದು ನೋಟಿಸ್ ಕೊಟ್ಟಿದ್ದಾರೆ. ಅದನ್ನು ಈಗ ನೋಡುತ್ತಿದ್ದೇನೆ. ನಾವು ರ್ಯಾಲಿ ಏನೂ ನಡೆಸುತ್ತಿಲ್ಲ. ಧರಣಿ ಏನೂ ನಡೆಸುತ್ತಿಲ್ಲ, ಕೇವಲ ನೀರಿಗಾಗಿ ನಡೆಯುತ್ತಿದ್ದೇವೆ ಅಷ್ಟೇ. ಕಾವೇರಿ ತಾಯಿ ನೀರನ್ನು ಎಲ್ಲರಿಗೂ ಕುಡಿಸಬೇಕು ಎನ್ನುವುದಷ್ಟೇ ನಮ್ಮ ಆಸೆ ಬಿಜೆಪಿ ಸರ್ಕಾರದ ವಿರುದ್ಧ ಡಿಕೆಶಿ ಕುಟುಕಿದರು.

 

 

Tags:

error: Content is protected !!