ಬೆಳಗಾವಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಹೊಸದಾಗಿ 114 ಜನರಿಗೆ ಸೋಂಕು ದೃಢಪಟ್ಟಿದೆ. ಇದರಿಂದ ಜಿಲ್ಲೆಯ ಜನ ಬೆಚ್ಚಿ ಬಿದ್ದಿದ್ದಾರೆ.

ಹೌದು ಶುಕ್ರವಾರ ಜಿಲ್ಲಾ ಆರೋಗ್ಯ ಇಲಾಖೆ ಹೊರಡಿಸಿದ ಹೆಲ್ತ್ ಬುಲೆಟಿನ್‍ನಲ್ಲಿ 114 ಕೊರೊನಾ ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿವೆ. ಇದರಲ್ಲಿ ಬೆಳಗಾವಿ ನಗರ ಮತ್ತು ತಾಲೂಕಿನಲ್ಲಿಯೇ 77 ಕೇಸ್‍ಗಳು ಕಂಡು ಬಂದಿವೆ. ಅದೇ ರೀತಿ ಅಥಣಿ-05, ಬೈಲಹೊಂಗಲ-01, ಚಿಕ್ಕೋಡಿ-11, ಗೋಕಾಕ್-01, ಹುಕ್ಕೇರಿ-01, ಖಾನಾಪುರ-01, ರಾಮದುರ್ಗ-06, ರಾಯಬಾಗ್-07, ಇತರೆ-04 ಕೇಸ್‍ಗಳು ಕಂಡು ಬಂದಿವೆ.