Kagawad

ಇಂಜನೀಯರಿಂಗ್ ವಿದ್ಯಾರ್ಥಿಯ ಕ್ಯಾನ್ಸರ್ ಚಿಕಿತ್ಸೆಗೆ ಮಹಾದಾನಿ ಮಹಾವೀರ ಪಡನಾಡ ಆರ್ಥಿಕ ಸಹಾಯ

Share

ಆತ ಬಡ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿ ಅವನಿಗೆ ಬೋನ್ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ಸುಮಾರು 50 ಲಕ್ಷ ರೂ ಉಪಚಾರದ ವೆಚ್ಚವಿದೆ. ಆ ವಿದ್ಯಾರ್ಥಿಯ ಕುಟುಂಬವು ಈ ಭಾರಿ ಮೊತ್ತವನ್ನು ಭರಿಸಲಾಗದೆ ಇರುವ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಮಹಾವೀರ ಪಡನಾಡ ಚಿಕಿತ್ಸೆಗೆ ಸಹಾಯಧನ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕಾಗವಾಡ ತಾಲೂಕಿನ ಐನಾಪುರ ಪಟ್ಟಣದ ಬಡ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿ ಸಾದ್ವೀಕ್ ಬುರ್ಲಿ ಗೆ ಬೋನ್ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ಸುಮಾರು 50 ಲಕ್ಷ ರೂ ಉಪಚಾರದ ವೆಚ್ಚವಿದೆ ಹಾಗಾಗಿ ಅಥಣಿ ತಾಲೂಕಿನ ಸಂಕೋನಟ್ಟಿಯ ಸಾಮಾಜಿಕ ಕಾರ್ಯಕರ್ತ ಮಹಾವೀರ ಪಡನಾಡ ಇವರು ಶನಿವಾರರಂದು ಐನಾಪುರದ ಧನ್ವಂತರಿ ಆಸ್ಪತ್ರೆಯಲ್ಲಿ ಸ್ಥಳಿಯ ವೈದ್ಯ ಡಾ. ಆನಂದ ಮುತಾಲಿಕ ಡಾ.ಶ್ರೀನಿವಾಸ ಕುಲಕರ್ಣಿಯವರ ಮುಖಾಂತರ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕ ಸಾದ್ವೀಕ್ ಚಿಕಿತ್ಸೆಗೆ ಸಹಾಯಧನ ನೀಡಲು ಮುಂದಾಗಿದ್ದಾರೆ. ಇತ್ತೀಚಿಗμÉ್ಟೀ ಆತ ಎಡವಿ ಬಿದ್ದು ಕಾಲಿಗೆ ಗಾಯವಾಗಿದ್ದು ತಪಾಸಣೆ ಮಾಡುವಾಗ ಬೋನ್(ಎಲುವು) ಕ್ಯಾನ್ಸರ್ ಇರುವುದು ಪತ್ತೆಯಾಗಿದೆ.

ಸಾಮಾಜಿಕ ಕಾರ್ಯಕರ್ತ ಮಹಾವೀರ ಪಡನಾಡ ಮಾತನಾಡಿ ಸಾದ್ವೀಕ್ ಬುರ್ಲಿ ಇವರ ತಂದೆ ವಿದ್ಯಾಧರ ಬುರ್ಲಿ ಇತನು ಕೂಡ ಕಾಯಿಲೆಯಿಂದ ಬಳಲುತ್ತಿದ್ದು ಬೆಂಗಳೂರಿಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರ್ಥಿಕವಾಗಿ ತೀರ ಬಡವರಿದ್ದ ವಿಷಯ ತಿಳಿದ ಅದೇμÉ್ಟೂೀ ದಾನಿಗಳು ಸಹಾಯ ಹಸ್ತ ಚಾಚಿದ್ದಾರೆ. ಅದರಂತೆ ನನ್ನ ಗಮನಕ್ಕೂ ಬಂದ ಕೂಡಲೇ ನಾನು ಕೂಡ ಕೈಲಾದಷ್ಟು ಸಹಾಯಧನ ನೀಡಿದ್ದೇನೆ, ಆದರೂ ಚಿಕಿತ್ಸಗೆ ಇನ್ನೂ ಹೆಚ್ಚು ಹಣ ಬೇಕಾಗಿದ್ದು, ಅದಕ್ಕಾಗಿ ದಾನಿಗಳು ಮುಂದೆ ಬಂದು ಎರಡು ಜೀವಗಳನ್ನು ಉಳಿಸಿ ಎಂದು ಮಹಾವೀರ ಪಡನಾಡ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಆಸಕ್ತ ದಾನಿಗಳು ತಮ್ಮ ಸಹಾಯ ಹಸ್ತವನ್ನು ಈ ಇಬ್ಬರೂ ಚಿಕಿತ್ಸಕರಿಗೆ ನೀಡಲು ವಿದ್ಯಾಧರ ಬುರ್ಲಿ ಇವರ ಮೊಬೈಲ್ ಸಂಖ್ಯೆ 9481655187 ಗೆ ಸಂಪರ್ಕಿಸಬಹುದು. ಈ ವೇಳೆ ಡಾ ಆನಂದ ಮುತಾಲಿಕ, ಡಾ, ಶ್ರೀನಿವಾಸ ಕುಲಕರ್ಣಿ, ಗುರುರಾಜ ಮಡಿವಾಳರ,ಅನೀಲ ಶಿರಗಾಂವೆ, ಸಾಗರ ಮೋರೆ, ಮಲ್ಲು ಹವಳಪ್ಪಗೋಳ, ಸುಜಾತಾ ಸಾವಳಿ ಸೇರಿದಂತೆ ಅನೇಕರು ಇದ್ದರು.

Tags:

error: Content is protected !!