ಬೆಳಗಾವಿಯ ಜನತೆ ಆರ್‍ಟಿಪಿಸಿಆರ್ ಸ್ವ್ಯಾಬ್ ಪರೀಕ್ಷೆಗೆ ಬಿಮ್ಸ್ ಆಸ್ಪತ್ರೆಯ ಮುಂದೆ ಕ್ಯೂ ನಿಂತಿದ್ದು ಹೆಚ್ಚಿಗೆ ಸೆಂಟರ್‍ಗಳನ್ನು ತೆರೆಯಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬೆಳಗಾವಿ ನಗರದಲ್ಲಿ ಸ್ವ್ಯಾಬ್ ಪರೀಕ್ಷೆಗಾಗಿ ಸಾರ್ವಜನಿಕರು ಕ್ಯೂ ನಿಂತಿದ್ದು ಸಾರ್ವಜನಿಕರು ಆಸ್ಪತ್ರೆಯ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಬೆಳಿಗ್ಗೆಯಿಂದ ಕ್ಯೂ ನಿಂತಿರುವ ಸಾರ್ವಜನಿಕರು, ಒಂದೇ ಕೇಂದ್ರದಲ್ಲಿ ಎಲ್ಲರಿಗೂ ಪರೀಕ್ಷೆ ಮಾಡಲಾಗುತ್ತಿದೆ. ಕೇಂದ್ರಗಳನ್ನು ಸಂಖ್ಯೆಯನ್ನು ಹೆಚ್ಚಿಸಬೇಕಿತ್ತು. ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಕೇಂದ್ರವನ್ನು ತೆರೆಯಬೇಕಿತ್ತು. ಆದರೆ ಒಂದೇ ಕೆಂದ್ರದಲ್ಲಿ ಎಲ್ಲರಿಗೂ ಪರಿಕ್ಷೆಯನ್ನು ಮಾಡಲಾಗುತ್ತಿದೆ. ಇಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಕೂಡ ಬಂದಿದ್ದಾರೆ. ಈಗ ಅವರಿಗೆ ಪರೀಕ್ಷೆ ಮಡಬೇಕೋ ಅಥವಾ ನಮಗೆ ಮಾಡಬೇಕೋ ತಿಳಿಯದಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿಗಳು ನಮಗೆ ಕಾಲೇಜುಗಳಲ್ಲಿ ಆರ್‍ಟಿಪಿಸಿಆರ್ ಪರೀಕ್ಷೆ ಕಡ್ಡಾಯವಾಗಿ ಮಾಡಿಸಿಕೊಂಡು ಬರಬೇಕೆಂದು ಹೇಳಿದ್ದಾರೆ. ಹಾಗಾಗಿ ನಾವು ಇಲ್ಲಿ ಎರಡು ಗಂಟೆಗಳಿಂದ ಕ್ಯೂ ನಲ್ಲಿ ನಿಂತಿದ್ದೇವೆ. ಆದರೂ ಇನ್ನೂ ಪಾಳಿ ಸಿಕ್ಕಿಲ್ಲ. ಇನ್ನು ಒಂದೇ ಕೌಂಟರ್ ಇರುವುದರಿಂದ ಎಲ್ಲರಿಗೂ ಸಾಕಷ್ಟು ತೊಂದತೆಯಾಗುತ್ತಿದೆ. ಹಾಗಾಗಿ ಎರಡು ಕೌಂಟರ್ ಮಾಡಬೇಕಿತ್ತೆಂದು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ವಾಸೀಮ್ ಸೇಖ್, ಹೊರದೇಶಗಳಿಗೆ ಹೋಗುವ ಪ್ರಯಾಣಿಕರಿಗೆ ಆರ್‍ಟಿಪಿಸಿಆರ್ ಪರೀಕ್ಷೆ ಕಡ್ಡಾಯವಾಗಿದೆ ಹಾಗಾಗಿ ಅವರಿಗೆ ಬೇಗನೇ ವರದಿಯನ್ನು ನೀಡುವ ವ್ಯವಸ್ಥೆಯನ್ನು ಮಾಡಬೇಕಿತ್ತು. ಆದರೆ ಇಲ್ಲಿ ಒಂದೇ ಕೌಂಟರ್ ಮಾಡಿರುವುದರಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ. ಎರಡು ಗಂಟೆಗಳಿಂದ ನಿಂತುಕೊಂಡ ಮೇಲೂ ಕ್ಯೂ ಮುಂದೆ ಹೋಗುತ್ತಿಲ್ಲ. ಹಾಗಾಗಿ ತೊಂದರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.