Chikkodi

ಆಯತಪ್ಪಿ ಬಿದ್ದ ಸಿದ್ದೇಶ್ವರ ಸ್ವಾಮೀಜಿ ಕಾಲಿಗೆ ಗಾಯ: ಕನ್ಹೇರಿ ಆಸ್ಪತ್ರೆಗೆ ಅಡ್ಮಿಟ್

Share

ಸ್ನಾನ ಗೃಹದಲ್ಲಿ ಆಯತಪ್ಪಿ ಬಿದ್ದ ಪರಿಣಾಮ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರ ಕಾಲಿಗೆ ಗಂಭೀರ ಪ್ರಮಾಣದ ಗಾಯವಾಗಿದೆ.

ಹೌದು ಚಿಕ್ಕೋಡಿ ತಾಲೂಕಿನ ಕೇರೂರು ಗ್ರಾಮದಲ್ಲಿ ಇಂದಿನಿಂದ ಆಧ್ಯಾತ್ಮಿಕ ಪ್ರವಚನ ನೀಡಲು ಸಿದ್ದೇಶ್ವರ ಸ್ವಾಮೀಜಿ ವಿಜಯಪುರದಿಂದ ಆಗಮಿಸಿದ್ದರು. ಮೊದಲನೆಯ ದಿನವಾದ ಇಂದು ಹೀರೆಕೊಡಿಯ ಮಗದುಮ್ಮ ಫಾರ್ಮ್ ಹೌಸ್‍ನಲ್ಲಿ ತಂಗಿದ್ದರು. ಈ ವೇಳೆ ಸ್ನಾನದ ಗೃಹಕ್ಕೆ ಹೋಗಿರುವ ಸಂದರ್ಭದಲ್ಲಿ ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಇತ್ತ ಶ್ರೀಗಳಿಗೆ ಕಾಲಿಗೆ ಗಾಯವಾದ ಹಿನ್ನೆಲೆ ಕೇರೂರ ಗ್ರಾಮದಲ್ಲಿ ನಡೆಯಬೇಕಿದ್ದ ಪ್ರವಚನ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ. ಇನ್ನು ಸ್ವಾಮೀಜಿ ಅವರನ್ನು ಚಿಕಿತ್ಸೆಗಾಗಿ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕನ್ನೇರಿಮಠದ ಆಸ್ಪತ್ರೆಗೆ ದಾಖಲಿಸಲಾಗಿದೆ.

 

Tags:

error: Content is protected !!