ಕಾಗವಾಡ ತಾಲೂಕಿನ ಉಗಾರ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಗೆ ಕಾಗವಾಡ, ಉಗಾರ, ಐನಾಪುರ, ಹಾಗೂ ಶಿರಗುಪ್ಪಿ ಈ ಉಪ ಕೇಂದ್ರದ ವ್ಯಾಪ್ತಿಯ 16 ಗ್ರಾಮಗಳಿಗೆ ಕಳೆದ ಹಲವಾರು ದಿನಗಳಿಂದ ಅಸಮರ್ಪಕವಾಗಿ ವಿದ್ಯುತ್ ವಿತರಿಸುತ್ತಿರುವುದನ್ನು ಖಂಡಿಸಿ ಇಂದು ಮಾಜಿ ಶಾಸಕ ರಾಜು ಕಾಗೆ ನೇತೃತ್ವದಲ್ಲಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕಾಗವಾಡ ತಾಲೂಕಿನ ಉಗಾರ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಗೆ ಕಾಗವಾಡ, ಉಗಾರ, ಐನಾಪುರ, ಹಾಗೂ ಶಿರಗುಪ್ಪಿ ಈ ಉಪ ಕೇಂದ್ರದ ವ್ಯಾಪ್ತಿಯ 16 ಗ್ರಾಮಗಳಿಗೆ ಕಳೆದ ಹಲವಾರು ದಿನಗಳಿಂದ ಅಸಮರ್ಪಕವಾಗಿ ವಿದ್ಯುತ್ ವಿತರಿಸುತ್ತಿರುವುದನ್ನು ಖಂಡಿಸಿ ಇಂದು ಮಾಜಿ ಶಾಸಕ ರಾಜು ಕಾಗೆ ನೇತೃತ್ವದಲ್ಲಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಸೋಮವಾರರಂದು ಉಗಾರದ ಹೆಸ್ಕಾಂ ಇಲಾಖೆಯ ಅಧಿಕಾರಿಗಳಾದ ಗೀತಾ ಕಡಲಸ್ಕರ್, ರಾಜು ರಾಠೋಡ, ಇವರಿಗೆ ರೈತರು ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಈ ಮೊದಲು ದಿನದ 7 ಗಂಟೆ ನಿರಂತರ ವಿದ್ಯುತ್ ಸರಬರಾಜು ಮಾಡುತ್ತಿದ್ದು, ಆದರೆ ಈಗ ಕೆಲ ದಿನಗಳಿಂದ ಏಕಾಎಕಿ ವಿದ್ಯುತ್ ಸರಬರಾಜು ಕಡಿತ ಗೊಳಿಸಿ ಬೆಳಿಗ್ಗೆ ಮುರು ಗಂಟೆ ಹಾಗೂ ರಾತ್ರಿ ಮುರು ಗಂಟೆ ವಿದ್ಯುತ್ ವಿತರಿಸುತ್ತಿರುವದರಿಂದ ಬೆಳೆಗಳಿಗೆ ನೀರು ಹಾಯಿಸಲು ಅನಾನುಕೂಲವಾಗುತ್ತಿದೆ. ಆದ್ದರಿಂದ ಏಕ ಕಾಲಕ್ಕೆ ವಿದ್ಯುತ್ ಪೂರೈಸುವಂತೆ ಆಗ್ರಹಿಸಿದರು.
ಮಾಜಿ ಶಾಸಕ ರಾಜು ಕಾಗೆ ಮಾತನಾಡಿ ರೈತರು ಕೃμÁ್ಣ ನದಿಯಿಂದ ಸುಮಾರು 8 ರಿಂದ 10 ಕಿಮೀ ದೂರದಿಂದ ಏತ ನೀರಾವರಿ ಯೋಜನೆಗಳನ್ನು ಮಾಡಿಕೊಂಡಿದ್ದಾರೆ. ತಾವು ಕೇವಲ 3 ಗಂಟೆ ವಿದ್ಯುತ್ ವಿತರಿಸಿದರೆ ನದಿಯಿಂದ ನೀರು ಬರಲು ಸಾಧ್ಯವಿಲ್ಲ. ಅದಕ್ಕಾಗಿ ದಿನದ 10 ಗಂಟೆ ನಿರಂತರ ವಿದ್ಯುತ್ ಪೂರೈಸುವಂತೆ ಆಗ್ರಹಿಸಿದರು. ಅದರಂತರ ರಾತ್ರಿ ಸಿರಿಜ್ ವಿದ್ಯುತ್ ಪೂರೈಕೆ ಮಾಡಿರಿ. ಜನೇವರಿ ತಿಂಗಳಲ್ಲಿ ಈ ಸ್ಥಿತಿಯಾದರೆ ಬೇಸಿಗೆಯಲ್ಲಿ ಏನಾಗಬಹುದು ಎಂದರು.
ಲೋಕುರ ಗ್ರಾಮದ ವಿದ್ಯಾನಂದ ಏತ ನೀರಾವರಿ ಯೋಜನೆಯ ಅಧ್ಯಕ್ಷ ರಾಜಾರಾಮ ಗಡಗೆ ಮಾತನಾಡುತ್ತ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಿರುವದರಿಂದ ರೈತರು ಕಂಗಾಲಾಗಿದ್ದಾರೆ. ರಾತ್ರಿ ಮತ್ತು ಹಗಲು 3 ಗಂಟೆ ವಿದ್ಯುತ್ ಪೂರೈಕೆ ಮಾಡುವುದು ಸರಿಯಲ್ಲ. ಏಕ ಕಾಲಕ್ಕೆ 10 ಗಂಟೆ ಮತ್ತು ರಾತ್ರಿ ಸಿರಿಜ್ ವಿದ್ಯುತ್ ಪೂರೈಕೆ ಮಾಡಲೇಬೇಕು. ಇಲ್ಲದೇ ಹೋದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಉಗಾರ ಹೆಸ್ಕಾಂ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾದ ಗೀತಾ ಕಡಸ್ಕರ ಅವರು ಮಾತನಾಡಿ ಸಿಪ್ಟ್ ಪದ್ದತಿಯ ವಿದ್ಯೂತ್ ಪೂರೈಕೆ ಸ್ಥಗಿತಗೊಳಿಸಿದ್ದು, ಏಕ ಕಾಲಕ್ಕೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯೂತ್ ಪೂರೈಕೆ ಮಾಡುತ್ತೇವೆ. ರೈತರು ಆತಂಕಕ್ಕೆ ಒಳಗಾಗಬಾರದು. ಉಆಗಾರ ವ್ಯಾಪ್ತಿಯಲ್ಲಿ ನಮ್ಮ ವ್ಯಾಪ್ತಿಯಲ್ಲಿ 10 ಅಶ್ವಶಕ್ತಿಒಳಗಡೆ ಇದ್ದ 18,970 ಸಾವಿರ ಪಂಪಶಟ್‍ಗಳಿವೆ, 315 ಏತ ನೀರಾವರಿ ಯೋಜನೆಗಳಿವೆ, ಇವುಗಳಿಗೆ ಏಕ ಕಾಲಕ್ಕೆ ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ನಿರಂತರ ವಿದ್ಯೂತ್ ಪೂರೈಸುವುದಾಗಿ ಹೇಳಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ರಾಜಾರಾಮ ಗಡಗೆ, ದಾದುಬಾ ತೋರುಸೆ, ವಸಂತ ಖೋತ,ಶಂಕರ ವಾಘಮೊಡೆ, ನ್ಯಾಯವಾದಿ, ಶಂಕರ ಗಡಗೆ, ಬಾಳಾಸಾಬ ವಿಸಾಪುರೆ, ಜ್ಯೋತಗೌಡ ಪಾಟೀಲ, ಅರುಣ ಗಾಣಿಗೇರ,ಸಂಜು ಭಿರಡಿ, ಸಂಜಯ ಕುಚನೂರೆ, ಅನೀಲ ಸತ್ತಿ
ಗಜಾನನ ಯರಂಡೋಲಿ, ಸಿದ್ದು ಹಲವಳೆ,ಸೇರಿದಂತೆ ಶೇಡಬಾಳ, ಮಂಗಸೂಳಿ, ಲೋಕೂರ, ಉಗಾರ, ಐನಾಪುರ,ಮೋಳೆ, ಶಿರಗುಪ್ಪಿ, ಸೇರಿದಂತೆ ಅನೇಕ ಗ್ರಾಮಗಳ ನೂರಾರು ಏತ ನೀರಾವರಿ ಯೋಜನೆಗಳ ರೂತ ಮುಖಂಡರು ಉಪಸ್ಥಿತರಿದ್ದರು.
ಸುಕುಮಾರ ಬನ್ನೂರೆ. ಇನ್ ನ್ಯೂಜ್ ಕಾಗವಾಡ