Banglore

ಅಶೋಕಣ್ಣನಿಗೆ ಮೇಕೆ, ಕುರಿ, ನಾಟಿಕೋಳಿ ರುಚಿ ಚೆನ್ನಾಗಿ ಗೊತ್ತಿದೆ: ಡಿಕೆಶಿ ಲೇವಡಿ

Share

ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್‍ನಿಂದ ಪಾದಯಾತ್ರೆ ನಡೆಯುತ್ತದೆ. ಅದಕ್ಕೆ ಗೃಹ ಸಚಿವರ ಅನುಮತಿ ಬೇಡ, ರಕ್ಷಣೆಯೂ ಬೇಡ. ದೇವೇಗೌಡರು ಪಾದಯಾತ್ರೆ ಮಾಡಿದಾಗ ಅನುಮತಿ ನೀಡಿದ್ರಾ..? ಸ್ಟ್ಯಾಂಪ್ ಹಾಕಿ ಅನುಮತಿ ನೀಡಿದ್ದರಾ..? ಹೋರಾಟಗಾರರು ಕೋಳಿಯನ್ನು ಕೇಳಿ ಮಸಾಲೆ ಅರಿತಾರಾ..? ಅಲ್ಲದೇ ಗೃಹ ಸಚಿವರು ಬಂದರೆ ಬ್ಯಾಲದಹಣ್ಣಿನ ಪಾನಕ ಕುಡಿಸಿ ಕಳಿಸ್ತೀವಿ. ರಾಮ ರಸ ಅಲ್ಲ ಪಾನಕ ಕುಡಿಸಿ ಕಳಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅಶೋಕಣ್ಣನಿಗೆ ಮೇಕೆ, ಕುರಿ, ನಾಟಿಕೋಳಿ ರುಚಿ ಚೆನ್ನಾಗಿ ಗೊತ್ತಿದೆ. ಆದರೆ ನಾವು ಮೇಕೆ ಮಾಂಸ ತಿನ್ನಿಸೋಕೆ ಪ್ರಯತ್ನ ಮಾಡುತ್ತಿಲ್ಲ. ಸಚಿವ ಆರ್ ಅಶೋಕಣ್ಣನಿಗೆ ಬೆಂಗಳೂರಿನ ಬಗ್ಗೆ ಕಾಳಜಿ ಇಲ್ಲ. ಇಡೀ ದೇಶದಲ್ಲಿ ಶೇ.37ರಷ್ಟು ತೆರಿಗೆಯನ್ನು ಪಾವತಿಸುತ್ತಾರೆ. ಬೆಂಗಳೂರಿಗರು ಶೇ.37ರಷ್ಟು ತೆರಿಗೆಯನ್ನು ಪಾವತಿಸುತ್ತಾರೆ. ಅಂತಹ ಬೆಂಗಳೂರಿಗರಿಗೆ ಶುದ್ಧ ಕುಡಿಯುವ ನೀರು ಕೊಡಬೇಕು. ಶುದ್ಧ ಕಾವೇರಿ ನೀರು ಕೊಡಬೇಕೆಂದು ನಾವು ಪ್ರಯತ್ನಿಸುತ್ತಿದ್ದೇವೆ. ಈ ವಿಚಾರ ಯಾವುದೂ ಸಚಿವ ಅಶೋಕಣ್ಣನಿಗೆ ಗೊತ್ತಿಲ್ಲ ಎಂದು ಕಿಡಿಕಾರಿದರು.

ರಾಜ್ಯದ ಜನತೆ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಸಾಮಾಜಿಕ ಮಕ್ಕಳ ವಿದ್ಯಾಭ್ಯಾಸ ಬಹಳ ಎಫೆಕ್ಟ್ ಆಗಿದೆ. ಹೊಸ ಕಾಯಿಲೆ ಕೂಡ ದೂರ ಹೋಗಬೇಕು. ಏರ್‍ಪೆÇೀರ್ಟ್‍ನಿಂದ ಬಂದವರಿಗೆ ದೊಡ್ಡ ದಂಧೆ ನಡೆಯುತ್ತಿದೆ. ನೆಗಡಿ ಬಂದವರಿಗೆ ಪಾಸಿಟಿವ್ ಕೊಡುತ್ತಿದ್ದಾರೆ. ಸಿಎಂ ಈ ಬಗ್ಗೆ ಗಮನ ಹರಿಸಬೇಕು. ಹೊರಗಡೆಯಿಂದ ಬಂದವರಿಗೆಲ್ಲ ಇಲ್ಲಿ ಬಂದವರಿಗೆಲ್ಲ ಪಾಸಿಟಿವ್ ರಿಪೆÇೀರ್ಟ್ ಕೊಟ್ಟು ಮೂರು ಸಾವಿರ ವಸೂಲಿ ಮಾಡುತ್ತಿದ್ದಾರೆ. ಇದನ್ನು ನಿಲ್ಲಿಸಬೇಕು ಎಂದು ಡಿ.ಕೆ.ಶಿವಕುಮಾರ್ ಕಿಡಿಕಾರಿದರು.

 

Tags:

error: Content is protected !!