Belagavi

ಅರಣ್ಯ ಸಚೀವ ಉಮೇಶ್ ಕತ್ತಿಯಿಂದ ಲಕ್ಷ್ಮಿ ದೇವಿ ಉದ್ಯಾನವನ ಲೋಕಾರ್ಪಣೆ

Share

ಅಥಣಿ ಪಟ್ಟಣದ ಶ್ರೀ ಲಕ್ಷ್ಮಿ ದೇವಿ ಉದ್ಯಾನವನದ ಲೋಕಾರ್ಪಣೆ ಕಾರ್ಯಕ್ರಮವನ್ನು ಅರಣ್ಯ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ನೆರವೇರಿಸಿದರು.

ಅಥಣಿ ಪಟ್ಟಣದ ಶ್ರೀ ಲಕ್ಷ್ಮಿ ದೇವಿ ಉದ್ಯಾನವನದ ಲೋಕಾರ್ಪಣೆಯನ್ನು ಅರಣ್ಯ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಉಮೇಶ ಕತ್ತಿ ಸೇರಿದಂತೆ ಮಾಜಿ ಉಪಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್ ಸಚಿವ ಲಕ್ಷ್ಮಣ ಸವದಿ ಮತ್ತು ಚಿಕ್ಕೋಡಿ ಲೋಕಸಭಾ ಸಂಸದರಾದ ಅಣ್ಣಾಸಾಬ ಜೊಲ್ಲೆ ನೇರವೇರಿಸಿದರು.

ಈ ವೇಳೆ ಮಾತನಾಡಿದ ಅರಣ್ಯ ಸಚಿವ ಉಮೇಶ ಕತ್ತಿ ಕರ್ನಾಟಕ ರಾಜ್ಯದ ಅರಣ್ಯವಲಯ ಸಮೃದ್ದವಾಗಿದ್ದು, ಪಕ್ಕದ ಆಂದ್ರ, ತಮಿಳುನಾಡು ಮತ್ತು ಕೇರಳದಲ್ಲಿ ಬೆಳೆದ ಶ್ರೀಗಂಧ ಸಸಿಗಳನ್ನು ರೈತರು ಕೂಡ ಬೆಳೆಯುವಂತೆ ಪೆÇ್ರೀತ್ಸಾಹಿಸುವ ಕೆಲಸ ನಡೆಯುತ್ತಿದೆ. ರೋಜ್ ವುಡ್, ಟೀಕ್ ವುಡ್ ಸೇರಿದಂತೆ ಅರವತ್ತಕ್ಕೂ ಹೆಚ್ಚು ಸಸಿ ಬೆಳೆಯುವ ಹಕ್ಕನ್ನು ರೈತರಿಗೆ ನೀಡುವ ಪ್ರಸ್ತಾವನೆ ಇದೆ. ಶೇ.21% ಇರುವ ಅರಣ್ಯವನ್ನು 33% ಕ್ಕೆ ಹೆಚ್ಚಿಸಲು ಛಲ ತೊಡಲಾಗಿದೆ. ಕಂದಾಯ ಭೂಮಿಯ ಗೈರಾಣ ಜಾಗವನ್ನು ಅರಣ್ಯ ಬೆಳೆಸಲು ಬಳಸಿಕೊಳ್ಳುವ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.

ಅಥಣಿ ತಾಲ್ಲೂಕಿನಲ್ಲಿ ಎಂಟನೂರ ಐವತ್ತು ಎಕರೆ ಭೂಮಿ ಮಾತ್ರ ಇದ್ದು ಅದನ್ನು ಹೆಚ್ಚಿಸುವ ಕೆಲಸವಾಗಬೇಕಿದೆ. ಬಿಜಾಪುರ, ಬಾಗಲಕೋಟೆ, ಸೇರಿದಂತೆ ಮೂರು ಜಿಲ್ಲೆಯಲ್ಲಿ ಸವಳು ಜವಳು ಭೂಮಿಯಲ್ಲಿ ಬಿದಿರು ಬೆಳೆಸುವ ಪ್ರಾಯೋಗಿಕ ಕಾರ್ಯವನ್ನು ನಡೆಸಲಾಗುತ್ತಿದೆ. ಫಾರೆಸ್ಟ ಬಿದಿರನ್ನು ನಾವೇ ಬೆಳೆದರೆ ಅದನ್ನು ಎಕ್ಸಪೆÇೀರ್ಟ ಮಾಡಲು ಸಾಧ್ಯವಾಗುತ್ತದೆ ಎಂದರು.

ಈ ವೇಳೆ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಹಾಗೂ ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಮಾತನಾಡಿ ಅರಣ್ಯ ಇಲಾಖೆಯಿಂದ ಆಗಬೇಕಾದ ಕೆಲಸಗಳಿಗೆ ಪೂರಕ ಸಿದ್ದತೆ ಮಾಡಿಕೊಳ್ಳಲು ಸಚಿವರಾದ ಉಮೇಶ್ ಕತ್ತಿ ಹೇಳಿದ್ದಾರೆ. ನಾಗರೀಕರಾಗಿ ನಾವು ಸರ್ಕಾರದ ಅನುದಾನವನ್ನು ಯಾವ ನಿಟ್ಟಿನಲ್ಲಿ ಬಳಸುತ್ತೇವೆ ಅನ್ನುವದು ಮುಖ್ಯವಾಗುತ್ತದೆ. ಅರಣ್ಯ ಇಲಾಖೆಯ ಯೋಜನೆಗಳ ಪಾಲನೆ ಪೆÇೀಷಣೆಯ ಕೆಲಸ ಜನಸಾಮಾನ್ಯರಿಂದ ಆಗಬೇಕಾಗಿದೆ. ಬಹಳಷ್ಟು ದುರುದ್ದೇಶದಿಂದ ಅರಣ್ಯ ನಾಶವಾಗುತ್ತಿದೆ. ಪ್ರತಿವರ್ಷ ಲಕ್ಷ್ಮಿ ದೇವಿ ಉದ್ಯಾನವನದಲ್ಲಿ ಮೂವತ್ತು ಸಾವಿರ ಸಸಿ ನೆಡುವ ಕೆಲಸ ಆಗಲಿದೆ. ನಮ್ಮದೆ ಆದ ಕೊಡುಗೆಯನ್ನು ಕೊಡುವ ಕೆಲಸ ನಮ್ಮಿಂದ ಆಗಬೇಕಾಗಿದೆ ಮಳೆಯ ಕೊರತೆ ಎದುರಿಸಲು ಗಿಡಮರಗಳ ಕೊರತೆಯೂ ಒಂದು ಕಾರಣವಾಗಿದ್ದು ಅರಣ್ಯ ಬೆಳೆಸಲು ಜನರ ಕೊಡುಗೆಯೂ ಮುಖ್ಯವಾಗಿದೆ ಎಂದರು.

ಕಾರ್ಯಕ್ರಮದ ಶಾಸಕ ಮಹೇಶ ಕುಮಟಳ್ಳಿ ಹಾಗೂ ವಿಶೇಷ ಆಹ್ವಾನಿತರಾಗಿ ಆರ್ ಎಸ್ ಎಸ್ ಸಹ ಸಂಘ ಚಾಲಕ ಅರವಿಂದರಾವ ದೇಶಪಾಂಡೆ, ಭಾರತೀಯ ಆಡಳಿತ ಸೇನೆಯ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀವಾಸ್ತವ ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ್ ಸಾಲಿಮಠ, ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಥೋನಿ ಮರಿಯಪ್ಪ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರಾಕೇಶ ಮೈಗೂರ ಇನ್ ನ್ಯೂಜ ಅಥಣಿ

Tags:

error: Content is protected !!