ದಿ.ಪುನೀತ್ ರಾಜ್‍ಕುಮಾರ್ ಅವರ ಭಾವಚಿತ್ರವನ್ನಿಟ್ಟು ಪೂಜಿಸಿ ಅವರ ಫೆÇೀಟೋ ಎದುರೇ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.

ಹೌದು ಹುಕ್ಕೇರಿ ಪಟ್ಟಣದ ಮಹಾಂತೇಶ ಹಾಗೂ ಸಾನ್ವಿ ನವ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಮದುವೆ ಸಮಾರಂಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಎಲ್ಲರು ಅಗಲಿದ ಕರುನಾಡ ರಾಜರಾತ್ನ, ಕರ್ನಾಟಕ ರತ್ನನಿಗೆ ಗೌರವ ಸಲ್ಲಿಸಿದರು.
ಜೊತೆಗೆ ಪುನೀತ್ ಭಾವಚಿತ್ರದ ಎದುರೇ ಆರತಕ್ಷತೆ ಕಾರ್ಯಕ್ರಮ ನಡೆಸಿದ್ದು, ಅಭಿಮಾನಿಗಳ ಹೃದಯದಲ್ಲಿ ಅಪ್ಪು ಇನ್ನು ಮರೆಯಾಗಿಲ್ಲ ಎಂಬುದೇ ಈ ಘಟನೆಯೇ ಸಾಕ್ಷಿಯಾಗಿತ್ತು.
ಇನ್ನು ಈ ನವ ಜೋಡಿಗೆ ಶುಭ ಹಾರೈಸಲು ಬಂದ ಜನರು ಕೂಡ ಅಪ್ಪು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಲ್ಲಿಸಿದ್ದು ವಿಶೇಷವಾಗಿತ್ತು.