ರಸ್ತೆ ಬದಿ ನಿಲ್ಲಿಸಿದ್ದ ಅಪಘಾತಕ್ಕೀಡಾದ ಕಾರಿಗೆ ಬೈಕ್ ಡಿಕ್ಕಿಯಾಗಿರುವ ಪರಿಣಾಮ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿ, ಕಾರಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕು ಹೊಕ್ರಾಣಿ ಕ್ರಾಸ್ ಬಳಿ ನಡೆದಿದೆ. ಮೃತಳನ್ನು ಮಾರುತಿ ಸ್ವಿಪ್ಟ್ ಕಾರಲ್ಲಿದ್ದ ಚಿತ್ರದುರ್ಗ ಜಿಲ್ಲೆ ಹಿರಿಯೂರು ನಿವಾಸಿ ದೀಪಾ ವೆಂಕಟೇಶ ಶಿವಣಗಿ (31) ಎಂದು ಗುರ್ತಿಸಲಾಗಿದೆ. ಸ್ವಿಫ್ಟ್ ಕಾರಲ್ಲಿದ್ದ ಇತರ ನಾಲ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಎರ್ಟಿಗಾ ಕಾರಲ್ಲಿದ್ದವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಅಪಘಾತದಿಂದ ಬೆದರಿ ಎರ್ಟಿಗಾದಲ್ಲಿದ್ದ ಏಳೂ ಜನರು ಕಾರು ಬಿಟ್ಟು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿ ಎರಡೂ ಕಾರುಗಳನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಘಟನೆಯಲ್ಲಿ ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡಿದ್ದು ಸ್ಥಿತಿ ಚಿಂತಾಜನಕವಾಗಿದೆ. ಶಿನಾನಂದ ಬಿರಾದಾರ (21) ಮತ್ತು ಇಬ್ರಾಹಿಂ ಚಪ್ಪರಬಂದ (30) ಎಂದು ಗುರ್ತಿಸಲಾಗಿದೆ. ಮುದ್ದೇಬಿಹಾಳ ಸಿಪಿಐ ಆನಂದ ವಾಗ್ಮೋಡೆ, ತಾಳಿಕೋಟೆ ಪಿಎಸೈ ವಿನೋದ ದೊಡಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ರಸ್ತೆ ಬದಿ ನಿಲ್ಲಿಸಿದ್ದ ಅಪಘಾತಕ್ಕೀಡಾದ ಕಾರಿಗೆ ಬೈಕ್ ಡಿಕ್ಕಿಯಾಗಿರುವ ಪರಿಣಾಮ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿ, ಕಾರಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕು ಹೊಕ್ರಾಣಿ ಕ್ರಾಸ್ ಬಳಿ ನಡೆದಿದೆ. ಮೃತಳನ್ನು ಮಾರುತಿ ಸ್ವಿಪ್ಟ್ ಕಾರಲ್ಲಿದ್ದ ಚಿತ್ರದುರ್ಗ ಜಿಲ್ಲೆ ಹಿರಿಯೂರು ನಿವಾಸಿ ದೀಪಾ ವೆಂಕಟೇಶ ಶಿವಣಗಿ (31) ಎಂದು ಗುರ್ತಿಸಲಾಗಿದೆ. ಸ್ವಿಫ್ಟ್ ಕಾರಲ್ಲಿದ್ದ ಇತರ ನಾಲ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಎರ್ಟಿಗಾ ಕಾರಲ್ಲಿದ್ದವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಅಪಘಾತದಿಂದ ಬೆದರಿ ಎರ್ಟಿಗಾದಲ್ಲಿದ್ದ ಏಳೂ ಜನರು ಕಾರು ಬಿಟ್ಟು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿ ಎರಡೂ ಕಾರುಗಳನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಘಟನೆಯಲ್ಲಿ ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡಿದ್ದು ಸ್ಥಿತಿ ಚಿಂತಾಜನಕವಾಗಿದೆ. ಶಿನಾನಂದ ಬಿರಾದಾರ (21) ಮತ್ತು ಇಬ್ರಾಹಿಂ ಚಪ್ಪರಬಂದ (30) ಎಂದು ಗುರ್ತಿಸಲಾಗಿದೆ. ಮುದ್ದೇಬಿಹಾಳ ಸಿಪಿಐ ಆನಂದ ವಾಗ್ಮೋಡೆ, ತಾಳಿಕೋಟೆ ಪಿಎಸೈ ವಿನೋದ ದೊಡಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.