ಕಾಗವಾಡ ತಾಲೂಕಿನ ಐನಾಪುರದಲ್ಲಿರುವ ಏತ ನೀರಾವರಿ ಯೋಜನೆಗೆ ಸ್ಥಳಿಯ ನೂರಾರು ರೈತರು ಪಾಲ್ಗೊಂಡು ಕಚೇರಿಗೆ ಬೀಗ ಜಡಿದು ಅಧಿಕಾರಿಗಳನ್ನು ಹೊರ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಈ ಯೋಜನೆ ಕೃμÁ್ಣ ನದಿಯಿಂದ ಕಾಗವಾಡ ತಾಲೂಕಿನ 21 ಸಾವಿರ ಹೆಕ್ಟೇರ ಪ್ರದೇಶಕ್ಕೆ ನೀರು ಪೂರೈಸುವ ಯೋಜನೆಯಾಗಿದೆ. ಕಳೆದ 12 ವರ್ಷಗಳಿಂದ ಯೋಜನೆ ಪ್ರಾರಂಭವಿದೆ. ಐನಾಪುರ ಏತ ನೀರಾವರಿ ಯೋಜನೆಯ ಮೊದಲನೆಯ ಹಂತದ ಪೂರ್ವ ಕಾಲುವೆಯು, 27 ಕಿಮಿ ಉದ್ದವಿದ್ದು ಪ್ರಾರಂಭದ 5 ಕಿಮಿ ಉದ್ದದ ಕಾಲುವೆಯು ನೀರಿನ ಬಸವಿಕೆಯಿಂದಾಗಿ ಸುಮಾರು 5 ಸಾವಿರ ಎಕರೆಗಳಷ್ಟು ಕಾಲುವೆಯ ಅಕ್ಕ ಪಕ್ಕದ ಜಮೀನುಗಳಿಗೆ ನೀರು ಹೊಕ್ಕು ಸುಮಾರು 4ರಿಂದ 5 ತಿಂಗಳುಗಳವರೆಗೆ ನೀರು ಇರುವದರಿಂದ ಬೆಳೆ ಇಳುವರಿ ಹಾಗೂ ರೈತರ ಜಮೀನುಗಳು ಹಾಳಾಗಿ ಹೋಗಿವೆ. ಕಾಮಗಾರಿ ಕಳಪೆ ದರ್ಜೆಯಾಗಿರುವದರಿಂದ ಈ ಯೋಜನೆ ಸಂಪುರ್ಣ ವಿಫಲವಾಗಿದೆ. ನಮಗೆ ನ್ಯಾಯ ನೀಡಿರಿ ಎಂದು ಪ್ರತಿಭಟನಾಕಾರರು ನೀರಾವರಿ ಇಳಾಖೆಯ ಕಚೇರಿಗೆ ಬೀಗ ಜಡಿದು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು ಈ ಏತ ನೀರಾವರಿ ಯೋಜನೆ ನಮ್ಮ ರೈತರ ಪಾಲಿಗೆ ಏಕೆ ಬೇಕಿತ್ತಪ್ಪಾ ನೀರಾವರಿ ಯೋಜನೆ ಎನ್ನುವಂತಾಗಿದೆ. ಮುಂದಿನ ಗ್ರಾಮಗಳ ರೈತರಿಗೆ ನೀರು ಕೊಡುವ ಉದ್ದೇಶದಿಂದ ನೀರಾವರಿ ಇಲಾಖೆಯ ಅಧಿಕಾರಿಗಳು ನಮ್ಮ ಗಗ್ರಾಮದ ರೈತರ ಜಮೀನುಗಳನ್ನು ಹಾಳು ಮಾಡುತ್ತಿದ್ದಾರೆ. ನಮ್ಮ ರೈತರು ಕಳೆದ 10 ವರ್ಷಗಳಿಂದ ಈ ಸಮಸ್ಯೆ ಅನುಭವಿಸುತ್ತಿದ್ದಾರೆ. ಹಾಗಾಗಿ ಕೂಡಲೇ ಅಧಿಕಾರಿಗಳು ನಮ್ಮ ರೈತರಿಗೆ 10ವರ್ಷಗಳ ಪರಿಹಾರ ಒದಗಿಸಬೇಕು ಎಂದರು.
ಈ ವೇಳೆ ನೀರಾವರಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಇಂಜನೀಯರ ಕೆ. ರವಿ ಅವರು ಮನವಿ ಸ್ವೀಕರಿಸಿ, ನಿಮ್ಮ ಸಮಸ್ಯೆ ಬಗ್ಗೆ ಕಳೆದ 6 ತಿಂಗಳುಗಳಿಂದ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ. ಅಥಣಿಯ ಸುಪರಿಡೆಂಟ್ ಇಂಜನಿಯರ ಬಿ. ಆರ ರಾಠೋಡ. ಕಾರ್ಯನಿರ್ವಾಹಕ ಇಂಜನೀಯರ ಕೆ.ಕೆ. ಜಾಲಿಬೇರಿ ನಾಳೆ ಐನಾಪುರಕ್ಕೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಲಿದ್ದಾರೆ ಎಂದರು. ಪ್ರತಿಭಟನೆಯಲ್ಲಿ ಐನಾಪುರದ ಮುಖಂಡರಾದ ಪ್ರವೀಣ ಗಾಣಿಗೇರ. ಅರುಣ ಗಾಣಿಗೇರ. ರಾಜೇಂದ್ರ ಪೆÇೀತದಾರ. ಸಂಜು ಬಿರಡಿ. ಸುರೇಶ ಗಾಣಿಗೇರ. ಆದಿನಾಥ ದಾನಳ್ಳಿ ಸೆರಿದಂತೆ ಅನೇಕರು ಇದ್ದರು.