Athani

ಅಥಣಿ ಸಿಸಿ ರಸ್ತೆ ಕಾಮಗಾರಿಗೆ ಲಕ್ಷ್ಮಣ ಸವದಿ ಚಾಲನೆ

Share

ಅಥಣಿಯಲ್ಲಿ ಸಾಯಿ ಮಂದಿರದಿಂದ ಅಂಬೇಡ್ಕರ್ ವೃತ್ತದವರೆಗೆ ಸಿಸಿ ರಸ್ತೆ ಮತ್ತು ಚರಂಡಿ ವ್ಯವಸ್ಥೆಯ ಕಾಮಗಾರಿಗೆ ಲಕ್ಷಣ ಸವದಿ ಚಾಲನೆ ನೀಡಿದರು.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಸಾಯಿ ಮಂದಿರದಿಂದ ಅಂಬೇಡ್ಕರ್ ವೃತ್ತದವರೆಗೆ ಸಿಸಿ ರಸ್ತೆ ಮತ್ತು ಚರಂಡಿ ವ್ಯವಸ್ಥೆಯ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ ಸವದಿ ಗುದ್ದಲಿ ಪೂಜೆ ನೆರವೇರಿಸಿದರು.

ಸುಮಾರು ಆರು ಕೋಟಿ ರೂಪಾಯಿ ವೆಚ್ಚದಲ್ಲಿ ಒಂಭತ್ತು ಅಡಿ ಅಗಲ ಮತ್ತು ಹದಿನೈದನೂರು ಅಡಿ ಉದ್ದದ ರಸ್ತೆ ಹಾಗೂ ಬೀದಿ ದೀಪಗಳ ಅಳವಡಿಕೆಯ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಲಕ್ಷ್ಮಣ ಸವದಿ ಬಹುದಿನಗಳಿಂದ ರಸ್ತೆ ಹದಗೆಟ್ಟು ಸಾರ್ವಜನಿಕರು ಮತ್ತು ಪ್ರಯಾಣಿಕರಿಗೆ ತೊಂದರೆ ಆಗುತ್ತಿರುವದನ್ನು ಗಮನಿಸಿ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ಸುಮಾರು 32.80 ಕಿಮಿ ಗಡಿಯಿಂದ 34.40 ಕಿಮೀ ಒಟ್ಟು ಹದಿನೈದುನೂರು ಮೀಟರ್ ಅಂತರದ ರಸ್ತೆ ಯನ್ನು 2020-2021 ರ ಸಾಲಿನ ರಸ್ತೆ ಮತ್ತು ಸೇತುವೆಗಳ ಹೊಸ ಕಾಮಗಾರಿಯ ಅಪೆಂಡಿಕ್ಸ ಅಡಿಯಲ್ಲಿ ಜಿಲ್ಲಾ ಮುಖ್ಯ ರಸ್ತೆ ಸುಧಾರಣೆ ಮಾಡಲಾಗುತ್ತಿದೆ ಎಂದರು.

ಈ ವೇಳೆ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಜೆ ಎ ಹಿರೇಮಠ, ಎ ಜಿ ಮುಲ್ಲಾ, ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಗುತ್ತಿಗೆದಾರರಾದ ರಾಜು ಅಲಬಾಳ, ಸಂದೀಪ ಪಾಟೀಲ, ಶಿವರುದ್ರಪ್ಪ ಘೂಳಪ್ಪನವರ ಮತ್ತು ಬಿಜೆಪಿ ಮುಖಂಡರಾದ ಚಿದಾನಂದ ಸವದಿ, ರಾಮನಗೌಡ ಪಾಟೀಲ ಮತ್ತು ಪುರಸಭೆ ಸದಸ್ಯರಾದ ಸಂತೋಷ ಸಾವಡಕರ, ಕಲ್ಲೇಶ ಮಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

Tags:

error: Content is protected !!