ಅಥಣಿ ಪಟ್ಟಣದ ಸಿದ್ದಾರ್ಥ ನಗರದಲ್ಲಿ ಇಂದು ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಪುರಸಭೆ ನೂತನ ಸದಸ್ಯರು ಅದ್ಧೂರಿಯಾಗಿ ಆಚರಣೆ ಮಾಡಿದರು.

ಭೀಮಾ ಕೋರೆಗಾಂವದಲ್ಲಿ 500 ಜನ ಮಹಾರ ಸೈನಿಕರು 20 ಸಾವಿರ ಪೇಶ್ವೆಗಳ ವಿರುದ್ಧ ಹೋರಾಡಿ ಜಯಗಳಿಸಿದ ಹಿನ್ನಲೆಯಲ್ಲಿ ಅಥಣಿಯ ಸಿದ್ದಾರ್ಥ ನಗರದಲ್ಲಿ ಪುರಸಭೆ ನೂತನ ಸದಸ್ಯರು ಭೀಮಾ ಕೋರೆಗಾಂವ ವಿಜಯೋತ್ಸವ ಆಚರಿಸಿದರು. ಈ ವೇಳೆ ಬಸವರಾಜ ಕಾಂಬ್ಳೆ ಮಾತನಾಡಿ ವಿಶ್ವದಾದ್ಯಂತ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಆಚರಣೆ ಮಾಡಲಾಗುತ್ತಿದ್ದು, ಇದರ ಇತಿಹಾಸ ಬಹುದೊಡ್ಡದು ಜನವರಿ 1ರಂದು ಎಲ್ಲರಿಗೂ ಸಂಭ್ರಮದ ದಿನ 1818 ಜನವರಿ 1ರಂದು ಭೀಮಾ ಕೋರೆಗಾಂವದಲ್ಲಿ 28 ಸಾವಿರ ಪೇಶ್ವೆಗಳನ್ನು ಕೇವಲ 500 ಜನ ಮಹಾರ್ ಯೋಧರು ಸದೆ ಬಡಿದು ನೆಲಕ್ಕುರುಳಿಸಿದ ಇತಿಹಾಸ ನಮ್ಮ ಹಿರಿಯರದ್ದಾಗಿದೆ.

ನಾವು ನಮ್ಮ ಹಿರಿಯರ ಸಾಧನೆಯನ್ನು ಮರೆತು ಕೈಕಟ್ಟಿ ಕುಳಿತಂತಾಗಿದೆ ನಾವೆಲ್ಲರೂ ಜೊತೆಗೂಡಿ ನಮ್ಮ ಸಮಾಜದ ಎಲ್ಲ ಜನರಿಗೂ ಹಾಗೂ ವಿಶೇಷವಾಗಿ ನಮ್ಮ ಯುವ ಜನ ಪೀಳಿಗೆಗೆ ನಮ್ಮ ಹಿರಿಯರ ಇತಿಹಾಸವನ್ನು ತಿಳಿಸುವ ಜೆಲಸ ಮಾಡಬೇಕಾಗಿದೆ. ವಿಶ್ವರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಹೇಳಿದೆ ಹಾಗೆ ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಎಂಬ ಮಾತಿನಂತೆ ಇತಿಹಾಸವನ್ನು ಮರೆಯದೇ ಕುತಂತ್ರಿಗಳು ಮುಚ್ಚಿಟ್ಟ ನಮ್ಮ ಹಿರಿಯರ ಇತಿಹಾಸವನ್ನು ಬೆಳಕಿಗೆ ತರುವ ನಮ್ಮ ಕಾರ್ಯವಾಗಬೇಕು ಎಂದು ಹೇಳಿದರು.
ಈ ವೇಳೆ ಪುರಸಭೆ ನೂತನ ಸದಸ್ಯರಾದ ಕಲ್ಲೇಶ ಮಡ್ಡಿ, ದತ್ತಾ ವಾಸ್ಟರ್, ತಿಪ್ಪಣ್ಣ ಭಜಂತ್ರಿ, ರಾಮ ಮರೆಳರ, ಮಯೂರ ಸಿಂಗೆ, ರಾಕೇಶ ಪಟ್ಟಣ, ಸಿದಲಿಂಗ ಆಜೂರ, ಶಾಂತೇಶ ತೇರದಾಳ, ರಾಕೇಶ್ ಪಟ್ಟಣ, ಅಪ್ಪು ಘಟಕಾಂಬಳೆ, ಗುರು ಪಟ್ಟಣ, ವಿನಯ ಜಾಧವ, ಸಿದ್ದು ಮಡ್ಡಿ, ಕುಮಾರ ಪಟ್ಟಣ, ವಿಕಾಸ ಘಟಕಾಂಬಳೆ, ನಿಜಗುಣಿ ಜಿರಗ್ಯಾಳ, ಮಹೇಂದ್ರ ಸಾಳ್ವೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.