ಅಥಣಿಯಿಂದ ಶಾಹಪುರಕ್ಕೆ ಹೋಗುತ್ತಿದ್ದ ವೇಳೆ ವಿಜಯಪುರದಲ್ಲಿ ಅಥಣಿಯ ಯುವತಿಯೊರ್ವಳು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಹೌದು ಅಥಣಿ ತಾಲೂಕಿನ ಎಪಿಎಮ್‍ಸಿ ಯಾರ್ಡ ಗೌಸಿದ್ದನ ಮಡ್ಡಿ ನಿವಾಸಿಯಾದ ಇಸ್ಮಾಯಿಲ್ ಚಾಂದಾಸಾಬ ಪಕಾಲಿ ಅವರ ಮಲ ಮಗಳಾದ ಯಾಸ್ಮೀನ ರಾಜೆಸಾನ ಬಾಗವಾನ ಕಾಣೆಯಾಗಿರುವ ಯುವತಿ. ಡಿಸೆಂಬರ್ 16, 2021 ರಂದು ಅಥಣಿಯಿಂದ ಶಹಾಪುರಕ್ಕೆ ಹೋಗುವಾಗ ವಿಜಯಪುರ ಬಸ್ ನಿಲ್ದಾಣದಲ್ಲಿ ಶೌಚಾಲಯಕ್ಕೆ ಹೋಗಿ ಬರುತ್ತೇನೆ ಎಂದು ಹೋದ ಯಾಸ್ಮೀನ ಮರಳಿ ಬಂದಿಲ್ಲ. ಫಿರ್ಯಾದಿದಾರರು ಸಂಬಂಧಿಗಳನ್ನು ವಿಚಾರಿಸಿದರು ಯಾವುದೇ ಸುಳಿವು ಇಲ್ಲದ ಕಾರಣ ಬೆಳಗಾವಿ ರೈಲ್ವೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕಾಣೆಯಾಗಿರುವ ಯುವತಿ ವಯಸ್ಸು 18, ಮೈಯಿಂದ ಸಾಧಾರಣ, ಕೆಂಪು ಮೈಬಣ್ಣ, ಉದ್ದುಮುಖ, ನಿಟಾದ ಮೂಗು, ತಲೆಯಲ್ಲಿ ಕಪ್ಪು ಕುದಲು, ಮೂಗಿನಲ್ಲಿ ಮೂಗುತಿ, 5 ಅಡಿ ಎತ್ತರ, ಗುಲಾಬಿ ಬಣ್ಣದ ಟಾಪ್, ಪರ್ಪಲ್ ಕಲರ್ ಪ್ಯಾಂಟ್, ಕಪ್ಪು ಬಣ್ಣದ ಬುರ್ಕಾ, ಬೂದಿ ಬಣ್ಣದ ಸ್ಕಾರ್ಪ ಧರಿಸಿದ್ದು, ಕನ್ನಡ, ಹಿಂದಿ ಹಾಗೂ ಇಂಗ್ಲೀμï ಭಾμÉ ಮಾತನಾಡುತ್ತಾಳೆ. ಸುಳಿವು ಸಿಕ್ಕಲ್ಲಿ ಬೆಳಗಾವಿ ರೈಲ್ವೆ ಪೆÇಲೀಸ್ ಠಾಣೆಗೆ ಸಂಪರ್ಕಿಸಬಹುದು ಎಂದು ಬೆಳಗಾವಿ ರೈಲ್ವೆ ಪೆÇಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.